ಸಾರಾಂಶ
ಪೊಲೀಸರಿಗೆ ನಿಗದಿತ ಕೆಲಸದ ಸಮಯ, ವೇಳೆ ಇರುವುದಿಲ್ಲ. ಹಬ್ಬ ಹಾಗೂ ರಜಾ ದಿನಗಳಲ್ಲೂ ಸಹ ಅವರು ಕಾರ್ಯನಿರ್ವಹಿಸುತ್ತಾರೆ. 1 ಲಕ್ಷ ಜನಸಂಖ್ಯೆಗೆ 200ಕ್ಕೂ ಅಧಿಕ ಪೊಲೀಸರು ಇರಬೇಕಾಗುತ್ತದೆ. ಆದರೆ, ರಾಜ್ಯದಲ್ಲಿ 1 ಲಕ್ಷ ಜನಸಂಖ್ಯೆಗೆ 142 ಪೊಲೀಸರು ಮಾತ್ರ ಇದ್ದಾರೆ.
ಹುಬ್ಬಳ್ಳಿ:
ಪೊಲೀಸರ ಕರ್ತವ್ಯಕ್ಕೆ ಸಮಯದ ಮಿತಿಯಿರುವುದಿಲ್ಲ. ಅವರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಮುಂದಾಗಬೇಕು. ಜತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಹೇಳಿದರು.ಅವರು ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಪೊಲೀಸರಿಗೆ ನಿಗದಿತ ಕೆಲಸದ ಸಮಯ, ವೇಳೆ ಇರುವುದಿಲ್ಲ. ಹಬ್ಬ ಹಾಗೂ ರಜಾ ದಿನಗಳಲ್ಲೂ ಸಹ ಅವರು ಕಾರ್ಯನಿರ್ವಹಿಸುತ್ತಾರೆ. 1 ಲಕ್ಷ ಜನಸಂಖ್ಯೆಗೆ 200ಕ್ಕೂ ಅಧಿಕ ಪೊಲೀಸರು ಇರಬೇಕಾಗುತ್ತದೆ. ಆದರೆ, ರಾಜ್ಯದಲ್ಲಿ 1 ಲಕ್ಷ ಜನಸಂಖ್ಯೆಗೆ 142 ಪೊಲೀಸರು ಮಾತ್ರ ಇದ್ದಾರೆ. ಪೊಲೀಸರ ಕೆಲಸ ಯಾರ ಕಣ್ಣಿಗೂ ಕಾಣುವುದಿಲ್ಲ. ಅವರು ಸಮಾಜದಲ್ಲಿ ಯಾವುದೇ ದುರ್ಘಟನೆಗಳು ಆಗದಂತೆ ಕೆಲಸ ನಿರ್ವಹಿಸುವರು ಎಂದು ತಿಳಿಸಿದರು.ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಎರಡು ದಿನಗಳಿಂದ ನಡೆದ ಕ್ರೀಡಾಕೂಟದಲ್ಲಿ ಪೊಲೀಸರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಿಎಆರ್ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚು ಕ್ರೀಡಾಕೂಟ ಆಯೋಜಿಸಲಾಗುವುದು. ಪ್ರತಿ 3 ತಿಂಗಳಿಗೊಮ್ಮೆ ವಾಲಿಬಾಲ್, ಕ್ರಿಕೆಟ್ ಮತ್ತು ಕಬಡ್ಡಿ ಆಯೋಜಿಸಲಾಗುವುದು ಎಂದರು.ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ಎಸಿಪಿ ಪ್ರಶಾಂತ ಸಿದ್ದನಗೌಡರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕುಟುಂಬಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು.ಸಿಎಆರ್ ವಿಭಾಗಕ್ಕೆ ಸಮಗ್ರ ವೀರಾಗ್ರಣಿ:
ಸಿಎಆರ್ ವಿಭಾಗ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಯಿತು. ಪುರುಷರ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ವೆಂಕಟೇಶ ನಾಯ್ಕ ಪಡೆದುಕೊಂಡರು. ಸುಶ್ಮಿತಾ ಪಾಟೀಲ ಅವರು ಮಹಿಳೆಯರ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆರ್‌ಪಿಐ ಸಂತೋಷ ಬೋಜಪ್ಪನವರ ನೇತೃತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಧಾರವಾಡ ವಿಭಾಗ, ಸಂಚಾರ ವಿಭಾಗ, ಮಹಿಳಾ ವಿಭಾಗ ಮತ್ತು ಸಿಎಆರ್ ವಿಭಾಗ ತಂಡಗಳು ಆಕರ್ಷಕ ನಿರ್ಗಮನ ಪಥ ಸಂಚಲನ ನಡೆಸಿದವು. ಎಡ್ವಿನ್ ಡಿಸೋಜ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ತಂಡ ಭಾಗವಹಿಸಿತ್ತು.;Resize=(128,128))
;Resize=(128,128))
;Resize=(128,128))