₹8.50 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಟ್ರೇಲರ್, ಟ್ಯಾಂಕರ್ ಪತ್ತೆ ಹಚ್ಚಿದ ಪೊಲೀಸರು

| Published : Jul 28 2024, 02:01 AM IST

₹8.50 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಟ್ರೇಲರ್, ಟ್ಯಾಂಕರ್ ಪತ್ತೆ ಹಚ್ಚಿದ ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ಕಳ್ಳತನವಾಗಿದ್ದ ಒಟ್ಟು ₹ 8.50 ಲಕ್ಷ ಮೌಲ್ಯದ ರೋಟಾವೇಟರ್, ಎರಡು ಟ್ರ್ಯಾಕ್ಟರ್ ಟ್ರೇಲರ್‌, ವಾಟರ್ ಟ್ಯಾಂಕರ್ ಮತ್ತು ಟ್ರ್ಯಾಕ್ಟರ್ ಇಂಜೇನ್ ನನ್ನು ವಶ

ಮುಂಡರಗಿ: ಸ್ಥಳೀಯ ಪೊಲೀಸರು ಮುಂಡರಗಿ ಪಟ್ಟಣವೂ ಸೇರಿದಂತೆ ಬೇರೆ-ಬೇರೆ ಗ್ರಾಮಗಳಲ್ಲಿ ಕಳ್ಳತನವಾಗಿದ್ದ ರೋಟಾವೇಟರ್, ಎರಡು ಟ್ರ್ಯಾಕ್ಟರ್ ಟ್ರೇಲರ್‌ ಮತ್ತು ವಾಟರ್ ಟ್ಯಾಂಕರ್‌ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಶುಕ್ರವಾರ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

2023ನೇ ಸಾಲಿನಲ್ಲಿ ಪಟ್ಟಣದಲ್ಲಿ ರೋಟಾವೇಟರ್ ಕಳ್ಳತನವಾದ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಗದಗ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಕಳ್ಳತನ ಪತ್ತೆ ಕಾರ್ಯಕ್ಕೆ ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ.ಬಿ. ಸಂಕದ, ನರಗುಂದ ವಲಯದ ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಸುಮಾ ಗೊರಬಾಳ ಹಾಗೂ ನುರಿತ ಪೊಲೀಸ್ ಸಿಬ್ಬಂದಿ ಕಳ್ಳತನ ಪ್ರಕರಣ ಪತ್ತೆ ಕಾರ್ಯ ಕೈಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡರಗಿ ಪಟ್ಟಣದ ಬಸವರಾಜ ದುರಗಪ್ಪ ಹಟ್ಟಿ ಹಾಗೂ ಸುರೇಶ ದುರುಗಪ್ಪ ಡಂಬಳ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗಿದೆ. ಪೊಲೀಸರು ಕಳ್ಳತನ ಪ್ರಕರಣ ಪತ್ತೆ ಕಾರ್ಯ ನಡೆಸಿದ ಸಂದರ್ಭದಲ್ಲಿ ಪಟ್ಟಣದ ರೋಟಾವೇಟರ್ ಪ್ರಕರಣದ ಜತೆಗೆ ಕೋಟುಮಚಗಿ ಹಾಗೂ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕಳ್ಳತನವಾಗಿದ್ದ ಎರಡು ಟ್ರ್ಯಾಕ್ಟರ್‌ ಟ್ರೇಲರ್ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಕಳ್ಳತನವಾಗಿದ್ದ ವಾಟರ್ ಟ್ಯಾಂಕರ ಹಾಗೂ ಕಳ್ಳತನ ಮಾಡಿದ ವಸ್ತುಗಳ ಸಾಗಾಟ ಮಾಡಲು ಬಳಸಿದ ಟ್ರ್ಯಾಕ್ಟರ್ ಇಂಜೇನ್ ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಕಳ್ಳತನವಾಗಿದ್ದ ಒಟ್ಟು ₹ 8.50 ಲಕ್ಷ ಮೌಲ್ಯದ ರೋಟಾವೇಟರ್, ಎರಡು ಟ್ರ್ಯಾಕ್ಟರ್ ಟ್ರೇಲರ್‌, ವಾಟರ್ ಟ್ಯಾಂಕರ್ ಮತ್ತು ಟ್ರ್ಯಾಕ್ಟರ್ ಇಂಜೇನ್ ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ.ಬಿ. ಸಂಕದ, ನರಗುಂದ ವಲಯ ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಉಪಸ್ಥಿತರಿದ್ದರು.

ಪತ್ತೆಗೆ ಶ್ರಮಿಸಿದ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಸುಮಾ ಗೊರಬಾಳ, ಎಎಸ್ಐ ಎಸ್.ಡಿ. ನರ್ತಿ, ವಿ.ವೈ. ತಂಟ್ರಿ, ಡಿ.ಎಂ. ಹೊನಕೇರಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಚ್ಚೇರಿ, ಅವಿನಾಶ ಬ್ಯಾಳಿ, ಎಚ್.ಕೆ. ನದಾಫ, ಬಸವರಾಜ ಬಣಕಾರ ಹಾಗೂ ಸಿಬ್ಬಂದಿಗಳಾದ ಮಹೇಶ ಗೊಳಗೊಳಕಿ, ಮಹೇಶ ಹೂಗಾರ, ಎಂ.ಎಂ. ಬನ್ನಿಕೊಪ್ಪ, ಅಶೋಕ ಕೆಲೂರ, ಪರಶುರಾಮ ರಾಠೋಡ, ಕೆ.ಐ.ಮುತ್ತಾಳಮಠ, ಜೆ.ಐ. ಬೇಲೂರು, ಅನಿತಾ ಮುದಕಣ್ಣವರ, ಪರಸುರಾಮ ಧಾರವಾಡ ಇವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಂ.ಬಿ. ಸಂಕದ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.