ಸಾರಾಂಶ
ಕಳೆದುಕೊಂಡಿದ್ದ 74 ಜನರಿಗೆ ಮೊಬೈಲ್ ಗಳನ್ನು ಯಾದಗಿರಿ ನಗರದ ಜಿಲ್ಲಾ ಎಸ್ಪಿ ಜಿ.ಸಂಗೀತಾ ನೇತೃತ್ವದಲ್ಲಿ ಹಿಂತಿರುಗಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
2024ರ ಸಾಲಿನಲ್ಲಿ ಕಳ್ಳತನವಾಗಿದ್ದ 16 ಲಕ್ಷ ರು. ಮೌಲ್ಯದ 74 ವಿವಿಧ ಕಂಪನಿಯ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ವಿತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿದ್ದಾರೆ.ಇದೇ ಜನವರಿಯಿಂದ ಮೇ ತಿಂಗಳ ವರೆಗೆ ಕಳ್ಳತನವಾಗಿದ್ದ ಮೊಬೈಲ್‌ಗಳಲ್ಲಿ ಒಟ್ಟು 287 ಮೊಬೈಲ್‌ಗಳನ್ನು ಯಾದಗಿರಿ ಎಸ್‌ಪಿ ಕಚೇರಿ ಬಳಿ ಸಿಇಐಆರ್ ಸಹಾಯದಿಂದ ಪತ್ತೆಹಚ್ಚಿದ್ದು, ಅವುಗಳಲ್ಲಿ 74 ಮೊಬೈಲ್‌ಗಳನ್ನು ವಾರಸುದಾರರ ಆಧಾರ್ ಹಾಗೂ ಮೊಬೈಲ್ ಸಿಮ್ ವಿಳಾಸದ ಮೂಲಕ ಗುರುತಿಸಿ ಹಂಚಿಕೆ ಮಾಡಲಾಗಿದೆ ಎಂದರು.
2019 ರಿಂದ 2024ರವರೆಗೂ 1,925 ಮೊಬೈಲ್‌ಗಳು ಕಳುವಾದ ಬಗ್ಗೆ ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ಮತ್ತು ಕೆಎಸ್‌ಪಿ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಿದ್ದರು. ಅದರಲ್ಲಿ 1,113 ಮೊಬೈಲ್‌ಗಳನ್ನು ಪತ್ತೆಹಚ್ಚಿ 560 ಮೊಬೈಲ್‌ಗಳನ್ನು ವಾರಸುದಾರರಿಗೆ ನೀಡಲಾಗಿದೆ ಎಂದರು.