ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರಿಗೆ ಜನರ ಸಹಕಾರ ಅಗತ್ಯ: ಜಯಕುಮಾರ್

| Published : Nov 16 2025, 02:00 AM IST

ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರಿಗೆ ಜನರ ಸಹಕಾರ ಅಗತ್ಯ: ಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಗಾಂಜಾ, ಅಫೀಮು ಮತ್ತಿತರೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹೇಳಿದರು.

- ತರೀಕೆರೆಯಲ್ಲಿ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪಂಗಡದವರ ಕುಂದು ಕೊರತೆಗಳ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಗಾಂಜಾ, ಅಫೀಮು ಮತ್ತಿತರೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹೇಳಿದರು.ಶುಕ್ರವಾರ ಪಟ್ಟಣದ ಯು.ಎಸ್.ಕನ್.ವೆನ್ಷನ್ ಹಾಲ್ ನಲ್ಲಿ ಜಿಲ್ಲಾ ಪೊಲೀಸ್‌ ನಿಂದ ನಡೆದ ತರೀಕೆರೆ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು ಕೊರತೆಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. ಅಕ್ರಮ ಮದ್ಯ ಮಾರಾಟ ಮಾಡುವವರ ಕುರಿತು ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು. ಯಾವುದೇ ಪೊಲೀಸ್ ಠಾಣೆಗಳಲ್ಲಿ ಬಲಾಡ್ಯರು ದಲಿತರ ಮೇಲೆ ದುರುದ್ದೇಶದಿಂದ ಸುಳ್ಳು ಕೇಸು ನೀಡಿದ್ದಾರೆಂಬುದು ತಿಳಿದರೆ ಅಂತಹವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು. ಕುಂದು ಕೊರತೆ ಸಭೆಯಲ್ಲಿ ಚರ್ಚೆಗೆ ಬರುವ ವಿಷಯಗಳನ್ನು ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ದಲಿತ ಮುಖಂಡ ಎಚ್.ವಿ.ಬಾಲರಾಜ್ ಮಾತನಾಡಿ, ತಾಲೂಕಿನ ನಾಗರಾಜಪುರ ಗ್ರಾಮದ ಸ.ನಂ. 34 ರಲ್ಲಿ ಭಾಗಮ್ಮ ಎಂಬುವರಿಗೆ 4.38. ಶಂಕರನಾಯ್ಕ ಅವರಿಗೆ 2.20 ಎಕರೆ ಜಾಗಕ್ಕೆ ಸಾಗುವಳಿ ಚೀಟಿ ನೀಡಿದ್ದು, ಎಲ್ಲಾ ದಾಖಲಾತಿಗಳು ಫಲಾನುಭವಿಗಳ ಹೆಸರಿನಲ್ಲಿವೆ. ಆದರೂ ಅರಣ್ಯ ಇಲಾಖೆಅಧಿಕಾರಿಗಳು ಉಳುಮೆ ಮಾಡಲು ಬಿಡದೆ ತೊಂದರೆ ನೀಡುತ್ತಿ ದ್ದಾರೆ ಎಂದು ಆರೋಪಿಸಿದರು.ದಲಿತ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ಪಟ್ಟಣದ ಕೋಟೆ ಕ್ಯಾಂಪ್‌ನಲ್ಲಿರುವ ದಲಿತ ಕಾಲೋನಿಯಲ್ಲಿ ಆಯು ಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಿದರು.ಮುಖಂಡ ಸುನಿಲ್ ಮಾತನಾಡಿ, ತಾಲೂಕಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ದೇವಸ್ಥಾನಗಳಾಗಿ ಬದ ಲಾಗಿವೆ. ಭವನಗಳಾಗಿಯೇ ಉಳಿಯುವಂತೆ ಕ್ರಮಕೈಗೊಳ್ಳಬೇಕು. ದೋರನಾಳು ಗ್ರಾಮದ ಪರಿಶಿಷ್ಟ ಸಮುದಾಯದವರು ವಾಸಿಸುವ ಜಾಗದಲ್ಲಿರುವ ತುರುಮಂದಿ ಸ್ಥಳಾಂತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಮುಖಂಡ ಎಸ್.ಕೆ.ಸ್ವಾಮಿ ಮಾತನಾಡಿ, ಮಹಿಳಾ ವಿದ್ಯಾರ್ಥಿ ನಿಲಯಗಳಿರುವ ಸ್ಥಳಗಳಲ್ಲಿ ಪೊಲೀಸ್ ಬೀಟ್ ಹೆಚ್ಚಿಸಬೇಕು. ವಿದ್ಯಾರ್ಥಿ ನಿಲಯಗಳಿಗೆ ಇಲಾಖೆ ಮೇಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ದೊರಕುವಂತೆ ಗಮನಹರಿಸಬೇಕು ಎಂದರು. ಮುಖಂಡರಾದ ಎಸ್.ಎನ್.ಸಿದ್ರಾಮಪ್ಪ, ಜಿ.ಟಿ.ರಮೇಶ್, ಮಂಜಪ್ಪ, ಶಿವರಾಜ್, ಮಲ್ಲಿಕಾರ್ಜುನ್, ಶೂದ್ರಶ್ರೀನಿವಾಸ್, ವಸಂತಕುಮಾರ್, ಚಂದ್ರಶೇಖರ್ ಹಾಗೂ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಡಿವೈಎಸ್‌ಪಿ ಪರಶುರಾಮಪ್ಪ, ತಾ.ಪಂ. ಇಒ ಡಾ.ಆರ್.ದೇವೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಎಸಿಎಫ್ ಉಮ್ಮರ್‌ಬಾದ್‌ಷಾ, ಆರ್‌ಎಫ್‌ಒ ಆಸಿಫ್‌ಅಹಮದ್, ಕಂದಾಯ ಇಲಾಖೆ ಕೃಷ್ಣಮೂರ್ತಿ, ಪೊಲೀಸ್ ನಿರೀಕ್ಷಕರಾದ ಗಿರೀಶ್, ರಫೀಕ್, ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು.-

14ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ನಡೆದ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಮಾತನಾಡಿದರು. ಡಿವೈಎಸ್‌ಪಿ ಪರಶುರಾಮಪ್ಪ, ತಾ.ಪಂ. ಇಒ ಡಾ.ಆರ್.ದೇವೇಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.