ಸಿವಿಲ್ ಕಾನ್‌ಸ್ಟೇಬಲ್ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ ಮಹಿಳಾ ಅಭ್ಯರ್ಥಿಯ ಎಂಟು ತಿಂಗಳ ಹಸುಗೂಸನ್ನು ಲಾಲಿಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಪೊಲೀಸರ ಮಾತೃ ಹೃದಯ ಮಿಡಿತಕ್ಕೆ ಸಾರ್ವಜನಿಕ ವಲಯದಲ್ಲಿ ಭಾನುವಾರ ಪ್ರಶಂಸೆ ವ್ಯಕ್ತವಾಯಿತು.

ಕನ್ನಡ ಪ್ರಭ ವಾರ್ತೆ ಬೆಂಗಳೂರು

ಸಿವಿಲ್ ಕಾನ್‌ಸ್ಟೇಬಲ್ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ ಮಹಿಳಾ ಅಭ್ಯರ್ಥಿಯ ಎಂಟು ತಿಂಗಳ ಹಸುಗೂಸನ್ನು ಲಾಲಿಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಪೊಲೀಸರ ಮಾತೃ ಹೃದಯ ಮಿಡಿತಕ್ಕೆ ಸಾರ್ವಜನಿಕ ವಲಯದಲ್ಲಿ ಭಾನುವಾರ ಪ್ರಶಂಸೆ ವ್ಯಕ್ತವಾಯಿತು.

ಕಾನ್‌ಸ್ಟೇಬಲ್‌ಗಳಾದ ಲಕ್ಷ್ಮೀ ಕನಕನವಾಡಿ, ಗಿರಿಜಾ ಹಾಗೂ ಗೃಹ ರಕ್ಷಕಿ ವಿಜಯಾ ಅವರಿಗೆ ಮಾತೃತ ವಾತ್ಸಲ್ಯ ತೋರಿದ್ದು, ಮಗುವನ್ನು ಜೋಲಿಕಟ್ಟಿ ಲಾಲಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕತ್ರಿಗುಪ್ಪೆಯ ಕೃಷ್ಣ ಕಾಲೇಜಿನ ಪರೀಕ್ಷಾ ಕೇಂದಕ್ಕೆ ಕಾನ್‌ಸ್ಟೇಬಲ್‌ ಹುದ್ದೆ ಪರೀಕ್ಷೆ ಬರೆಯಲು ಶಿವಮೊಗ್ಗದ ಸುನೀತಾ ಬಂದಿದ್ದರು. ಆದರೆ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆ ಬಳಿಕ ಮಗುವನ್ನು ಪತಿಗೆ ಮಡಿಲಿಗೆ ಬಿಟ್ಟು ಅವರು ತೆರಳಿದ್ದರು. ತಾಯಿ ಇಲ್ಲದೆ ಮಗು ಅಳುತ್ತ ರಚ್ಚೆ ಹಿಡಿದಿದೆ. ಆಗ ಆ ಮಗುವನ್ನು ಆ ಕೇಂದ್ರದ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದ ಕಾನ್‌ಸ್ಟೇಬಲ್‌ಗಳಾದ ಲಕ್ಷ್ಮೀ, ಗಿರಿಜಾ ಹಾಗೂ ಗೃಹ ರಕ್ಷಿಕ ವಿಜಯಾ ಎತ್ತಿಕೊಂಡಿದ್ದಾರೆ. ಬಳಿಕ ಮಗುವನ್ನು ಸಮಾಧಾನಪಡಿಸಲು ಅವರು ಯತ್ನಿಸಿದರೂ ಅಳು ನಿಲ್ಲಿಸಿಲ್ಲ. ಕೊನೆಗೆ ಗೇಟಿಗೆ ಜೋಲಿ ಕಟ್ಟಿ ತೂಗಿ ಮಗುವನ್ನು ಸಂತೈಸಿ ಪೊಲೀಸರು ಮಲಗಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕಜಾಲತಾಣಗಳಲ್ಲಿ ಆಪ್ ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಜನರ ವೀಕ್ಷಣೆ ಪಡೆದಿವೆ. ಪೊಲೀಸರ ಈ ನಡವಳಿಕೆಗೆ ನಾಗರಿಕರು ಶ್ಲಾಘಿಸಿದ್ದಾರೆ.