ಸಾರಾಂಶ
ಸಕಲೇಶಪುರ ತಾಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸುಳ್ಳಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು, ಸ್ಥಳಕ್ಕೆ ಹೋಗುವ ಮುನ್ನವೇ ಸುಳ್ಳಕ್ಕಿಯಿಂದ ಬ್ಯಾಕರವಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಕೆಎ-೪೬-೬೭೧೩ ಗೂಡ್ಸ್ ಆಟೋ ವಾಹನದಲ್ಲಿ ಅಕ್ರಮವಾಗಿ ೨ ಹೋರಿಗಳು ೧ ಹಸುವನ್ನು ತುಂಬಿ ಕಳುಹಿಸಲು ಯತ್ನಿಸಿದಾಗ, ಗ್ರಾಮಾಂತರ ಠಾಣೆಯ ಪೋಲಿಸ್ ಸಬ್‌ಇನ್ಸ್‌ಪೆಕ್ಟರ್ ತಿಪ್ಪಾರೆಡ್ಡಿ ವಾಹನದಲ್ಲಿದ್ದ ಹಸುಗಳನ್ನು ವಶಪಡಿಸಿಕೊಂಡು ಅರಸೀಕೆರೆ ಗೋಶಾಲೆಗೆ ಕಳುಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಬಜರಂಗದಳದ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರು ಶನಿವಾರ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಮುಂದಾಗಿದ್ದ ಗೋವುಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ.ತಾಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸುಳ್ಳಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು, ಸ್ಥಳಕ್ಕೆ ಹೋಗುವ ಮುನ್ನವೇ ಸುಳ್ಳಕ್ಕಿಯಿಂದ ಬ್ಯಾಕರವಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಕೆಎ-೪೬-೬೭೧೩ ಗೂಡ್ಸ್ ಆಟೋ ವಾಹನದಲ್ಲಿ ಅಕ್ರಮವಾಗಿ ೨ ಹೋರಿಗಳು ೧ ಹಸುವನ್ನು ತುಂಬಿ ಕಳುಹಿಸಲು ಯತ್ನಿಸಿದಾಗ, ಗ್ರಾಮಾಂತರ ಠಾಣೆಯ ಪೋಲಿಸ್ ಸಬ್‌ಇನ್ಸ್‌ಪೆಕ್ಟರ್ ತಿಪ್ಪಾರೆಡ್ಡಿ ವಾಹನದಲ್ಲಿದ್ದ ಹಸುಗಳನ್ನು ವಶಪಡಿಸಿಕೊಂಡು ಅರಸೀಕೆರೆ ಗೋಶಾಲೆಗೆ ಕಳುಹಿಸಿದ್ದಾರೆ. ಇಬ್ಬರ ಮೇಲೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೋಟೋ ಶೀರ್ಷಿಕೆ:ಅಕ್ರಮವಾಗಿ ಗೋವುಗಳನ್ನು ತುಂಬಲಾಗಿದ್ದ ವಾಹನ.