ಸಾರಾಂಶ
ಜನರು ಪೊಲೀಸ್ ಸಿಬ್ಬಂದಿ ಜತೆ ಸ್ನೇಹದಿಂದ ಇರಬೇಕು. ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು
ಕುಕನೂರು: ಸಮಾಜದ ಭದ್ರತೆಯಲ್ಲಿ ಪೊಲೀಸರ ಕೊಡುಗೆ ಅಪಾರ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಜರುಗಿದ ಪೊಲೀಸ್ ರನ್ ಆಫ್ ಯೂನಿಟಿ ಮ್ಯಾತಥಾನ್ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕವಾಗಿ ಪೊಲೀಸರು ಭದ್ರತೆ ಹಾಗೂ ರಕ್ಷಣೆಯಲ್ಲಿ ತಮ್ಮದೆ ಆದ ಕೊಡುಗೆ ನೀಡುತ್ತಾರೆ. ಹಗಲು ರಾತ್ರಿ ಎನ್ನದೆ ಜನರಿಗೆ ಸಮಸ್ಯೆ ಆಗದಂತೆ ರಕ್ಷಣಾ ಕಾರ್ಯ ಮಾಡುತ್ತಾರೆ. ಸರ್ದಾರ ವಲ್ಲಭಭಾಯ್ ಪಟೇಲರು ರಾಷ್ಟ್ರದ ಏಕತೆಗೆ ಹಾಗೂ ಭದ್ರತೆಗಾಗಿ ಶ್ರಮಿಸಿದರು. ಅವರ ಜನ್ಮ ದಿನಾಚರಣೆ ಪ್ರಯುಕ್ತ ಪೊಲೀಸ್ ರನ್ ಆಫ್ ಯೂನಿಟಿ ಮ್ಯಾರಾಥಾನ್ ಹಮ್ಮಿಕೊಂಡಿರುವುದು ನಿಜಕ್ಕೂ ಮಾದರಿ ಕಾರ್ಯ. ಇದರಿಂದ ಸಮಾಜದ ಪ್ರತಿಯೊಬ್ಬರು ಸಹ ರಾಷ್ಟ್ರದ ಏಕತೆ ಹಾಗೂ ಭದ್ರತೆ, ರಕ್ಷಣೆಗಾಗಿ ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆ ಜತೆ ಇರಬೇಕು ಎಂಬುದು ದೃಢ ಆಗಬೇಕು ಎಂದರು.ಪಿಎಸ್ಐ ನಾಗಪ್ಪ ಮಾತನಾಡಿ, ಜನರು ಪೊಲೀಸ್ ಸಿಬ್ಬಂದಿ ಜತೆ ಸ್ನೇಹದಿಂದ ಇರಬೇಕು. ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದರು. ಪಪಂ ಮಾಜಿ ಉಪಾಧ್ಯಕ್ಷ ರೆಹೆಮಾನಸಾಬ್ ಮಕ್ಕಪ್ಪನವರ್,ತೆನ್.ಆರ್. ಕುಕನೂರು, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.
;Resize=(128,128))
;Resize=(128,128))
;Resize=(128,128))