ಜಾಗೃತಿ ಪಟ್ಟಣ ಪೊಲೀಸರು ಪಶ್ಚಿಮವಾಹಿನಿ ರೈಲ್ವೆ ಸೇತುವೆ ಬಳಿ ವಾಹನ ತಡೆದು ಪರಿಶೀಲಿಸಿದ ವೇಳೆ ಚರ್ಮ ಹಾಗೂ ಗೋವಿನ ಮಾಂಸ ತುಂಬಿರುವುದು ತಿಳಿದು ವಾಹನ ಸಹಿತ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹುಣಸೂರಿನಿಂದ ರಾಮನಗರಕ್ಕೆ ಗೋವಿನ ಮಾಂಸ ಹಾಗೂ ಚರ್ಮ ಸಾಗಿಸುತ್ತಿದ್ದ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಹುಣಸೂರಿನಿಂದ ವಾಹನದಲ್ಲಿ ಗೋವಿನ ಮಾಂಸ ಹಾಗೂ ಚರ್ಮ ಸಾಗಿಸುತ್ತಿದ್ದ ಮಾಹಿತಿಯನ್ನು ಖಾಸಗಿ ಕಂಪನಿಯಲ್ಲಿ (2ನೇ ಶಿಪ್ಟ್)ನ ರಾತ್ರಿ ಪಾಳ್ಯದಲ್ಲಿ ಕೆಲಸ ಮಾಡಿ ಬರುವ ನೌಕರರು ಹಾಗೂ ಸಾರ್ವಜನಿಕರು ತಾಲೂಕಿನ ಪಿ.ಹೊಸಹಳ್ಳಿ ಬಳಿ ಬರುವ ವಾಹನ ಬಗ್ಗೆ ದೂರವಾಣಿ ಮೂಲಕ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಜಾಗೃತಿ ಪಟ್ಟಣ ಪೊಲೀಸರು ಪಶ್ಚಿಮವಾಹಿನಿ ರೈಲ್ವೆ ಸೇತುವೆ ಬಳಿ ವಾಹನ ತಡೆದು ಪರಿಶೀಲಿಸಿದ ವೇಳೆ ಚರ್ಮ ಹಾಗೂ ಗೋವಿನ ಮಾಂಸ ತುಂಬಿರುವುದು ತಿಳಿದು ವಾಹನ ಸಹಿತ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ.ವೇದಿಕೆ ಕಾರ್ಯಕರ್ತರಾದ ಚಂದನ್, ಆಟೋ ರಾಘು , ಚಂದ್ರು ಕಿರಂಗೂರು ರವಿ , ದೇವಾನಂದ ಇತರ ಕಾರ್ಯಕರ್ತರು ಪೊಲೀಸರಿಗೆ ಸಾಥ್ ನೀಡಿದರು.
--------ಶಾಸಕರಿಂದ ಟಾರ್ಪಲ್ ವಿತರಣೆ
ಶ್ರೀರಂಗಪಟ್ಟಣ; ತಾಲೂಕಿನ ಚನ್ನಹಳ್ಳಿ ಬೋರೆ ವ್ಯಾಪ್ತಿಯ ಮಹದೇವಪುರ ಬೋರೆ ಗ್ರಾಮದ ಸ.ನಂ.342ರಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಟಾರ್ಪಲ್ ವಿತರಿಸಿದರು. ನಂತರ ಮಾತನಾಡಿದ ಅವರು, ಅಲೆಮಾರಿ ಸಮುದಾಯ ಸೇರಿದಂತೆ ಇತರ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯಗಳಿಗೆ ಸರ್ಕಾರ ಅವರ ಅಗತ್ಯತೆಗೆ ಬೇಕಾಗುವ ಸಲಕರಣೆಗಳನ್ನು ನೀಡುತ್ತಿದೆ. ಜನಸಾಮಾನ್ಯರ ಅಗತ್ಯಗಳನ್ನು ಪೂರೈಸಲು ಸರ್ಕಾರ ಕ್ರಮ ಕೈಗೊಂಡಿದೆ. ಸಮುದಾಯದ ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಈ ವೇಳೆ 130 ಕುಟುಂಬಗಳಿಗೆ ಟಾರ್ಪಲ್ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜು, ತಾಪಂ ಮಾಜಿ ಸದಸ್ಯ ಕಾಳೇಗೌಡ ಸೇರಿದಂತೆ ಇತರ ಮುಖಂಡರು ಹಾಗೂ ಅಧಿಕಾರಿವರ್ಗ ಇದ್ದರು.