ಪೊಲೀಸರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ: ಅಲೋಕ್ ಕುಮಾರ್

| Published : Oct 16 2025, 02:00 AM IST

ಪೊಲೀಸರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ: ಅಲೋಕ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಪ್ರಶಿಕ್ಷಣಾರ್ಥಿಗಳು ದರ್ಪ ತೋರಿಸದೆ ವೃತ್ತಿಪರ ಜೀವನ ಅಳವಡಿಸಿಕೊಂಡು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಪೊಲೀಸ್ ತರಬೇತಿ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ಕುಮಾರ್ ಸಲಹೆ ನೀಡಿದರು.

- ಕಡೂರು ಪೊಲೀಸ್ ತರಬೇತಿ ಕೇಂದ್ರದ ಕವಾಯತು ಮೈದಾನದಲ್ಲಿ 5 ನೇ ತಂಡದ ಸಶ ಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಕನ್ನಡಪ್ರಭ ವಾರ್ತೆ, ಕಡೂರು

ಪ್ರಶಿಕ್ಷಣಾರ್ಥಿಗಳು ದರ್ಪ ತೋರಿಸದೆ ವೃತ್ತಿಪರ ಜೀವನ ಅಳವಡಿಸಿಕೊಂಡು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಪೊಲೀಸ್ ತರಬೇತಿ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ಕುಮಾರ್ ಸಲಹೆ ನೀಡಿದರು.

ತಾಲೂಕಿನ ಗೆದ್ಲೆಹಳ್ಳಿ ಬಳಿ ಕಡೂರು ಪೊಲೀಸ್ ತರಬೇತಿ ಕೇಂದ್ರದ ಕವಾಯತು ಮೈದಾನದಲ್ಲಿ ಬುಧವಾರ ನಡೆದ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೆಬ ಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ನಾಡಿನ ರಕ್ಷಣೆ ಮತ್ತು ಸುರಕ್ಷತೆಗೆ ತೊಡಗಿಸಿಕೊಳ್ಳುವ ಪ್ರಶಿಕ್ಷಣಾರ್ಥಿಗಳಿಗೆ ಸರಿಯಾದ ತರಬೇತಿ ನೀಡಲಾಗಿದೆ. ಸಶಸ್ತ್ರ ಪಡೆಗೆ ದೇಶದಲ್ಲಿ ಅಷ್ಟೊಂದು ಕಾಳಜಿ ವಹಿಸುತ್ತಿಲ್ಲ. ರಾಜ್ಯದಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಿವಿಲ್ ಪೊಲೀಸ್, ಪಿಎಸೈ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪಠ್ಯದ ಪರಿಷ್ಕರಣೆ ನಡೆದರೂ ಪೊಲೀಸ್ ಪೇದೆ ತರಬೇತಿ ವಿಭಾಗದಲ್ಲಿ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ರಾಜ್ಯದಲ್ಲಿ ಕಳೆದ 2 ವರ್ಷದಿಂದಲೂ ಸಶಸ್ತ್ರ ಪಡೆಗೆ ಉತ್ತಮ ತರಬೇತಿ ನೀಡಲು ಎಲ್ಲ ರೀತಿ ಪರಿಷ್ಕೃತ ಪಠ್ಯಕ್ರಮದಂತೆ ಕಾಳಜಿ ವಹಿಸಲಾಗುತ್ತಿದೆ ಎಂದರು.

ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗ ಮಾನಸಿಕ ಒತ್ತಡದಿಂದ ಹೊರಬಂದು ಮೊದಲು ಆರೋಗ್ಯಕ್ಕೆ ಒತ್ತು ಕೊಟ್ಟು ಶಾರೀರಿಕ ಮತ್ತು ಮಾನಸಿಕವಾಗಿ ಸಧೃಡಗೊಳ್ಳಬೇಕು. ಆಗ ಮಾತ್ರ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ. ಸಾರ್ವಜನಿಕ ಸೇವೆಯಲ್ಲಿ ಸೌಜನ್ಯತೆ ಬೆಳೆಸಿಕೊಂಡು ಎಲ್ಲಿ ಗಟ್ಟಿಧ್ವನಿಯಾಗಿ ಮಾತನಾಡಬೇಕು ಎಲ್ಲಿ ಮಾತನಾಡ ಬಾರದು ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಇಲಾಖೆಯಲ್ಲಿ ಟೆಕ್ನಾಲಜಿ ಹೊಣೆಗಾರಿಕೆ ಹೆಚ್ಚಾಗಿದೆ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವಾಗ ಕಾರ್ಯಕ್ಷಮತೆ ಎಂಬುದು ಬಹಳ ಮುಖ್ಯ. ಪೊಲೀಸ್ ಇಲಾಖೆ ತಾಂತ್ರಿಕತೆಯಲ್ಲಿ ಹೆಚ್ಚು ಮುಂದುವರಿಯಲಾಗುತ್ತಿದೆ ಎಂದರು.ಆಪತ್ತು ನಿರ್ವಹಣೆಯಲ್ಲಿ ಕಾರ್ಯವೈಖರಿ ಎಂಬುದು ಮುಖ್ಯ. ಇದಕ್ಕೆ ಹೊಸವಿಧಾನ ಅಳವಡಿಸಿಕೊಳ್ಳುವ ಮೂಲಕ ಎಲ್ಲಾ ರೀತಿಯಲ್ಲಿ ತರಬೇತಿ ಕೊಡಿಸಲಾಗಿದೆ. ಸಮಸ್ಯೆ ಬಂದಾಗ ಧೃತಿಗೆಡದೆ ಧೈರ್ಯವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡುವವರಿಗೆ ಎಲ್ಲಾ ಕಡೆ ಬೆಲೆ ಇದೆ ಇದನ್ನು ಅರಿತು ಸಮಾಜಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.ಉತ್ತಮ ಸಮವಸ್ತ್ರದೊಂದಿಗೆ ಕವಾಯಿತು ಮೈದಾನದಲ್ಲಿ ಪ್ರಶಿಕ್ಷಣಾರ್ಥಿಗಳು ತಂಡೋಪ ತಂಡದಲ್ಲಿ ಪರೇಡ್ ಕಮಾಂಡೊಗಳು ಅತ್ಯುತ್ತಮವಾಗಿ ನಡೆಸಿದ ಆಕರ್ಷಕ ನಿರ್ಗಮನ ಪಥಸಂಚಲನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಆಕರ್ಷಕ ಬ್ಯಾಂಡ್ ನುಡಿಸಿದ ತಂಡಕ್ಕೆ 2 ಸಾವಿರ ನಗದು ಪುರಸ್ಕಾರ ನೀಡಿ ಎಡಿಜಿಪಿ ಅಲೋಕ್‌ ಕುಮಾರ್ ಗೌರವಿಸಿದರು.ಪೊಲೀಸ್ ತರಬೇತಿ ಕೇಂದ್ರದ ಅಧೀಕ್ಷಕ ಪಿ.ಪಾಪಣ್ಣ ಮಾತನಾಡಿ, ರಾಜ್ಯದ ವಿವಿಧ 24 ಘಟಕಗಳಿಂದ 488 ಪ್ರಶಿಕ್ಷಣಾರ್ಥಿ ಗಳಿಗೆ 10 ತಿಂಗಳು ಕಾಲ ಬುನಾದಿ ತರಬೇತಿ ನೀಡಲಾಗಿದೆ. ಈ ವರೆಗೂ ತರಬೇತಿ ಶಾಲೆಯಲ್ಲಿ 7ಸಿಪಿಸಿ, 2ಕೆಎಸ್ಐ ಎಸ್ಎಫ್, 4ಎಪಿಸಿ ತಂಡಗಳ ಒಟ್ಟು 3020 ಪ್ರಶಿಕ್ಷಣಾರ್ಥಿಗಳಿಗೆ ವೃತ್ತಿ ಬುನಾದಿ ತರಬೇತಿ, ಸಿಪಿಸಿ/ಎಪಿಸಿ ತಂಡಗಳಿಗೆ ಬ್ರಿಡ್ಜ್ ಕೋರ್ಸ್, ಪಿಎಸ್ಐ/ಎಎಸ್ಐ ಮತ್ತುಸಿಎಚ್ಸಿ ತಂಡಗಳಿಗೆ ಮುಂಬಡ್ತಿ ನಂತರದ ತರಬೇತಿ, ಅಧಿಕಾರಿ ಸಿಬ್ಬಂದಿಗೆ ಕಾರ್ಯಾ ಗಾರ ತರಬೇತಿ ನೀಡಲಾಗಿದೆ. 2016ರಿಂದ ಇಲ್ಲಿವರೆಗೆ 14565 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಕೊಡಲಾಗಿದೆ ಎಂದು ವರದಿ ಮಂಡಿಸಿದರು. 5ನೇ ತಂಡದ ತರಬೇತಿಯಲ್ಲಿ 277 ಜನ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆಕವಾಯತು ಮೈದಾನದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ತರಬೇತಿಯಲ್ಲಿ ಒಳಾಂಗಣ, ಹೊರಾಂಗಣ, ರೈಫಲ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಆಕರ್ಷಕ ಟ್ರೋಫಿ ನೀಡಿ ಪುರಸ್ಕರಿಸಲಾಯಿತು.

ಸಿಎಆರ್, ಉತ್ತರ ಬೆಂಗಳೂರು, ಡಿಎಆರ್ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಕೇಂದ್ರದಳದ ಎಚ್.ಶ್ರೀಧರ್, ಬಿ.ಕೆ. ಮೋಹನ್ಕುಮಾರ್, ಎಚ್.ಎನ್. ಲಕ್ಷ್ಮಣ್ ನೇತೃತ್ವದ ಪೊಲೀಸ್ ಬ್ಯಾಂಡ್ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಮೂರು ಸಾವಿರಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳ ಪೋಷಕರು ನಿರ್ಗಮನ ಪಥಸಂಚಲನವನ್ನು ಕುತೂಹಲದಿಂದ ಕಣ್ತುಂಬಿಕೊಂಡರು.

ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್, ಐಮಂಗಲ ಪೊಲೀಸ್ ತರಬೇತಿ ಕೇಂದ್ರದ ಅಧೀಕ್ಷಕ ಎನ್. ಶ್ರೀನಿವಾಸ್, ಹಾಸನ ತರಬೇತಿ ಕೇಂದ್ರದ ಅಧೀಕ್ಷಕ ಎಂ.ಟಿ.ನಾಗರಾಜ್, ಡಿವೈಎಸ್ಪಿ ಮಲ್ಲಿಕಾರ್ಜುನ ಮುರುಳಾ, ಆರ್ಪಿಐ ವಿಠಲ್ಶಿಂಧೆ, ಇನ್ಸಪೆಕ್ಟರ್‌ಗಳಾದ ಎ. ಮಂಜು, ಪುಷ್ಪಾ, ಪಿಎಸೈ ಭವಾನಿ, ಹೇಮಂತ್‌ ಕುಮಾರ್, ಕಡೂರು ಸಿಪಿಐ ರಫೀಕ್, ಮಂಜುನಾಥ್, ನಿವೃತ್ತ ಇನ್ಸಪೆಕ್ಟರ್ ಸತ್ಯನಾರಾಯಣ್ ಸೇರಿದಂತೆ ವಿವಿಧ ಠಾಣೆಗಳ ಸಿಪಿಐ, ಪಿಎಸೈ ಮತ್ತು ಸಿಬ್ಬಂದಿ ಹಾಜರಿದ್ದರು.

-- ಬಾಕ್ಸ್ಸ್--

ಸರ್ವೋತ್ತಮ ಶ್ರೇಷ್ಠ ಪ್ರಶಸ್ತಿ

- ಎಂಟೆಕ್ ಸ್ನಾತಕೋತ್ತರ ಪದವೀಧರ ಹುಚ್ಚಪ್ಪ ಕ ಕೆಂಚಣ್ಣನವರ (ದಕ್ಷಿಣ ಕನ್ನಡ ಜಿಲ್ಲೆಗೆ ನೇಮಕಗೊಂಡ ಎಪಿಸಿ) ಈ ಸಾಲಿನ ಸರ್ವೋತ್ತಮ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

--

ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದ ಪ್ರಶಿಕ್ಷಣಾರ್ಥಿಗಳು

• ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ಗಳ ಒಳಾಂಗಣ ವಿಭಾಗ* ಹುಚ್ಚಪ್ಪ ಕ. ಕೆಂಚಣ್ಣನವರ, ಕೂರಗುಂದ ಗ್ರಾಮ, ಹಾವೇರಿ ಜಿಲ್ಲೆ,* ಸಚಿನ್ ಹತ್ತಿಕುಣಿ ಗ್ರಾಮ, ಯಾದಗಿರಿ ಜಿಲ್ಲೆ* ಸಿ.ಎಸ್. ಶಶಿ ಚಿಕ್ಕದಮ್ಮತ್ತಿ ಗ್ರಾಮ, ಹಾಸನ ಜಿಲ್ಲೆ• ಸಶ್ರಸ್ತ್ರ ಪೊಲೀಸ್ ಕಾನ್ಸಟೇಬಲ್ಗಳ ಹೊರಾಂಗಣ ವಿಭಾಗ

* ಚಂದನ, ರಾಯಶೆಟ್ಟಿಪುರ ಮೊಳೆ ಗ್ರಾಮ, ಮಂಡ್ಯ ಜಿಲ್ಲೆ,* ಎಚ್.ಎಂ. ಅರುಣ ಹೊಂಕೇರಿ ಗ್ರಾಮ, ಶಿವಮೊಗ್ಗ ಜಿಲ್ಲೆ* ಡಿ. ಸಿದ್ದಾರ್ಥ ಅಜ್ಜಿಪುರ ಗ್ರಾಮ, ಚಾಮರಾಜನಗರ ಜಿಲ್ಲೆ--• ಫೈರಿಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದವರು : * ಅರುಣ ಅಟಪಟಕರ ಮೊಳೆ ಗ್ರಾಮ, ಬೆಳಗಾವಿ ಜಿಲ್ಲೆ* ರಾಕೇಶ ಹೊಸತಳವಾರ ಯಡಿಹಳ್ಳಿ ಗ್ರಾಮ, ವಿಜಯನಗರ ಜಿಲ್ಲೆ* ಎಂ.ಎಸ್. ಸಚಿನ್ ರಂಗನಾಯಕನ ಕೊಪ್ಪಲು ಗ್ರಾಮ, ಹಾಸನ ಜಿಲ್ಲೆ

15ಕೆಡಿಆರ್1 ಸರ್ವೋತ್ತಮ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೂರಗುಂದ ಗ್ರಾಮ, ಹಾವೇರಿ ಜಿಲ್ಲೆಯ ಕೂರಗುಂದ ಗ್ರಾಮದ ಹುಚ್ಚಪ್ಪ ಕ. ಕೆಂಚಣ್ಣನವರ15ಕೆಡಿಆರ್2ಕಡೂರು ಪೊಲೀಸ್ ತರಬೇತಿ ಕೇಂದ್ರದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರಾದ ಪ್ರಶಿಕ್ಷಾಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್, ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಪಿ.ಪಾಪಣ್ಣ, ಶ್ರೀನಿವಾಸ್, ನಾಗರಾಜ್ ಮತ್ತಿತರಿದ್ದರು.15ಕೆಡಿಆರ್3ದೂರದ ಊರುಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಪೋಷಕರು ಪಥಸಂಚಲನ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.