ಬ್ಯಾಡಗಿ: ಬಹುತೇಕ ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸ್ ವಾಹನ ಕೆಲಸ ನಿರ್ವಹಿಸಲಿದೆ. ಹೀಗಾಗಿ ಪೊಲೀಸ್ ವಾಹನಗಳು ರಕ್ಷಣಾ ಇಲಾಖೆಗೆ ಜೀವನಾಡಿಗಳಿದ್ದಂತೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಪಟ್ಟಣದ ಪೊಲೀಸ್ ಠಾಣೆಗೆ 2 ವಾಹನಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಬ್ಯಾಡಗಿ ಆರಕ್ಷಕ ವೃತ್ತ ಸುಮಾರು 59 ಕಿ.ಮೀ. ಸುತ್ತಳತೆ ಹೊಂದಿದೆ. ಯಾವುದೇ ಘಟನೆ ಜರುಗಿದರೂ ಸಹ ತತಕ್ಷಣ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ದಕ್ಷತೆ ಹೆಚ್ಚಿಸುವ ದೃಷ್ಟಿಯಿಂದ ಅಗತ್ಯವಿರುವ ಎರಡು ವಾಹನಗಳನ್ನು ನೀಡಲಾಗುತ್ತಿದೆ ಎಂದರು.

ಕಳೆದ ಐದಾರು ವರ್ಷಗಳ ಬೇಡಿಕೆ: ಹೊಸ ವಾಹನಕ್ಕಾಗಿ ಕಳೆದ ಐದಾರು ವರ್ಷಗಳಿಂದ ಸ್ಥಳೀಯ ಪೊಲೀಸ್‌ ಇಲಾಖೆ ಅಧಿಕಾರಿಗಳಿಂದ ಬೇಡಿಕೆಯಿತ್ತು, ಆದರೆ ಸರ್ಕಾರದಿಂದ ನೇರವಾಗಿ ಹೊಸ ಜೀಪಗಳನ್ನು ನೀಡಲು ಸಾಧ್ಯವಾಗದ ಕಾರಣ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲಾಗಿದೆ ಎಂದರು.ಕ್ಯಾಮರಾ ಕಣ್ಗಾವಲಿಗೆ ರು. 10 ಲಕ್ಷ: ಪಟ್ಟಣದಲ್ಲಿರುವ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಿತ್ಯವೂ ನೂರಾರು ಕೋಟಿ ಹಣಕಾಸಿನ ವಹಿವಾಟು ನಡೆಯುತ್ತದೆ. ದೇಶದ ವಿವಿಧ ಕಡೆಗಳಿಂದ ರೈತರು, ವ್ಯಾಪಾರಸ್ಥರು ಪಟ್ಟಣದ ಮಾರುಕಟ್ಟೆಗೆ ಬಂದು ಹೋಗುತ್ತಾರೆ, ಅಲ್ಲದೇ ಹೊರ ರಾಜ್ಯದ ನೂರಾರು ವಾಹನಗಳು ಚಲನವಲನ ನಡೆಯುತ್ತದೆ, ಜನಸಂದಣಿ ಹಾಗೂ ವಾಹನಗಳ ದಟ್ಟಣೆ ಇರುವ ಕಡೆಗಳಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತವೆ. ಹೀಗಾಗಿ ಇವುಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕ್ಯಾಮೆರಾ ಕಣ್ಗಾವಲಿಗೆ (ಸಿಸಿ ಕ್ಯಾಮೆರಾ)ಅಳವಡಿಸಲು ರು. 10 ಲಕ್ಷ ನೀಡುವುದಾಗಿ ಭರ ವಸೆ ನೀಡಿದರು.ಸಾರ್ವಜನಿಕ ಸೇವಾ ಕಾರ್ಯಗಳು ಇನ್ನಷ್ಟು ವೇಗ: ಹಾವೇರಿ ಎಸ್ಪಿ ಯಶೋದಾ ಒಂಟಗೋಡಿ ಮಾತನಾಡಿ, ಪೊಲೀಸ್ ಇಲಾಖೆಗೆ ಜನಪ್ರತಿನಿಧಿಗಳ ಸಹಕಾರ ದೊರಕುತ್ತಿರುವುದು ಸಾರ್ವಜನಿಕ ಸೇವೆಯ ಗುಣಮಟ್ಟ ಹೆಚ್ಚಿಸಲು ನೆರವಾಗಲಿದೆ. ಪೊಲೀಸ್‌ ಠಾಣೆಗಳಿಗೆ ಹೊಸ ವಾಹನ ದೊರೆತಿದ್ದು ಅಪರಾಧ ತಡೆ, ಗಸ್ತು ಕಾರ್ಯ, ತುರ್ತು ಸ್ಪಂದನೆ ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳು ಇನ್ನಷ್ಟು ವೇಗವಾಗಿ ನಡೆಯಲಿವೆ ಎಂದರು.ಇಲಾಖೆ ಮೇಲೆ ಸಾರ್ವಜನಿಕರ ನಿರೀಕ್ಷೆಗಳು ಹೆಚ್ಚಾಗುತ್ತಿದೆ: ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ ಮಾತನಾಡಿ, ಇತ್ತೀಚೆಗೆ ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರ ನಿರೀಕ್ಷೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಠಾಣೆ ಬಳಿ ಸಮರ್ಪಕ ವಾಹನ ಸೌಲಭ್ಯ ಇರುವುದು ಅಗತ್ಯ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಹವಾಲುಗಳಿಗೆ ತಕ್ಷಣ ಸ್ಪಂದಿಸುವುದು ಸೇರಿ ದಂತೆ ಹಲವು ಕಾರ್ಯಗಳಲ್ಲಿ ಹೊಸ ವಾಹನಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಆಶ್ರಯಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ ಏರೇಶಿಮಿ, ಉದ್ಯಮಿ ನಾಗರಾಜ ಆನ್ವೇರಿ, ಸತೀಶಗೌಡ ಪಾಟೀಲ, ಬೀರಪ್ಪ ಬಣಕಾರ ರಮೇಶ ಸುತ್ತಕೋಟಿ, ಡಾ.ಎ. ಎಂ.ಸೌದಾಗರ, ಮಜೀದ್ ಮುಲ್ಲಾ, ದುರ್ಗೆಶ ಗೋಣೆಮ್ಮನವರ, ರಾಜೇಸಾಬ್ ಕಳ್ಯಾಳ, ಖಾದರಸಾಬ್ ದೊಡ್ಮನಿ, ಭಾಷಾಸಾಬ್ ದೊಡ್ಮನಿ ಸೇರಿದಂತೆ ಪೊಲೀಸ್ ಇಲಾಖೆ ಸಿಪಿಐ ಎಂ.ಜಿ. ಚಿಕ್ಕಣ್ಣವರ, ಆರ್.ಪಿ.ಐ. ಶಂಕರಗೌಡ ಪಾಟೀಲ, ಪಿಎಸ್‌ಐ ಭಾರತಿ ಕುರಿ, ಸಾಗರ್, ಎನ್.ಕೆ. ನಿಂಗನಹಳ್ಳಿ, ಬಸವರಾಜ ಅಂಜುಟಗಿ, ಎನ್.ಎಚ್.ದೊಡ್ಡಮನಿ.

ಮಂಜುನಾಥ ಮುಚ್ಚಟ್ಟಿ, ಹನುಮಂತ ಸುಂಕದ, ಬೀರಪ್ಪ ಹೂಲಿಹಳ್ಳಿ, ಹಲವರು ಸೇರಿದಂತೆ ಉಪಸ್ಥಿತರಿದ್ದರು.