ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ.ಮೈದೂರ ಭಾನುವಾರ ನಗರದ ಜೆ.ಪಿ. ರೋಟರಿ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ.ಮೈದೂರ ಭಾನುವಾರ ನಗರದ ಜೆ.ಪಿ. ರೋಟರಿ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಮ್. ಜಯಾನಂದ ಅವರು ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿರುವುದರಿಂದ, ಕರ್ನಾಟಕದಲ್ಲಿ ಪೋಲಿಯೋ ಪ್ರಕರಣಗಳು ಕಂಡುಬಂದಿರುವುದಿಲ್ಲ, ಆರೋಗ್ಯ ಇಲಾಖೆಯು ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟುವಿಕೆಯಲ್ಲಿ ಯಶಸ್ವಿಯಾಗಿರುತ್ತದೆ.ಹಾವೇರಿ ಜಿಲ್ಲೆಯಲ್ಲಿ ಒಟ್ಟು ೫ ವರ್ಷದೊಳಗಿನ ೧,೪೮,೨೬೩ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹಾಕಿಕೊಂಡಿದ್ದು, ೧,೦೦೧ ಪೋಲಿಯೋ ಬೂತ್‌ಗಳಲ್ಲಿ ೨,೦೦೨ ಜನ ಲಸಿಕೆ ಹಾಕಲು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ೧೯೯೫ ರಿಂದ ಪೋಲಿಯೋ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಚಾಲನೆಗೊಳಿಸಿದ್ದು, ೨೦೧೧ರಲ್ಲಿ ನಮ್ಮ ದೇಶದಲ್ಲಿ ಪೋಲಿಯೋ ನಿರ್ಮೂಲನೆಯಾಗಿರುತ್ತದೆ. ಆದರೆ ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿಯೂ ಸಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಬಾರಿ ವಲಸಿಗರ ಮಕ್ಕಳನ್ನು ಪತ್ತೆ ಹಚ್ಚಿ ಪೋಲಿಯೋ ಹನಿ ಹಾಕಲು ಹೆಚ್ಚು ಒತ್ತು ನೀಡಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.ರೋಟರಿ ಕ್ಲಬ್‌ನ ಅಸಿಸ್ಟಂಟ್ ಗವರ್ನರ್ ದಯಾನಂದ ಯಡ್ರಾಮಿ, ಕಾಶೀನಾಥ ಅರಾವತ್, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾರಿ ಡಾ. ಸರೀತಾ, ತಾಲೂಕು ಆರೋಗ್ಯಾಕಾರಿ ಪ್ರಭಾಕರ ಕುಂದೂರ, ರೋಟರಿ ಕ್ಲಬ್‌ನ ಪ್ರದಾಧಿಕಾರಿಗಳಾದ ಗಣೇಶ ಮುಷ್ಠಿ, ಬಸವರಾಜ ಮಾಸೂರ, ಸುರೇಶ ಕಡಕೋಳ, ಹೇಮಂತ ಅನೂರಶೆಟ್ಟರ, ಆರ್.ಸಿ.ಎಚ್.ಕಚೇರಿಯ ಅಶೋಕ ಸಾವಂತ, ಅರೀಫ ಯಲಿಗಾರ, ಎ.ಪಿ. ಪಾಟೀಲ್ ಇತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್‌ನ ಎಸ್.ಸಿ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.