ಸಹಕಾರಿ ಕ್ಷೇತ್ರಕ್ಕೆ ಅಧಿಕಾರ ಹಿಡಿಯಬೇಕೆಂಬ ಆಸೆ ವಿಫಲದ ಹಿನ್ನೆಲೆಯಲ್ಲಿ ಶಾಸಕರು ಹತಾಶರಾಗಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಲೇವಡಿ ಮಾಡಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ಸಹಕಾರಿ ಕ್ಷೇತ್ರಕ್ಕೆ ಅಧಿಕಾರ ಹಿಡಿಯಬೇಕೆಂಬ ಆಸೆ ವಿಫಲದ ಹಿನ್ನೆಲೆಯಲ್ಲಿ ಶಾಸಕರು ಹತಾಶರಾಗಿದ್ದಾರೆ ಎಂದು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ ಲೇವಡಿ ಮಾಡಿದರು. ವಿಧಾನಸಭೆಯಲ್ಲಿ ಕುಣಿಗಲ್ ಪಿಎಲ್ ಡಿ ಬ್ಯಾಂಕ್ ಬಗ್ಗೆ ಮಾತನಾಡಿದ ಕುಣಿಗಲ್ ಶಾಸಕರ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ 4 ಲಕ್ಷ ಪಾಣಿ ಇದೆ ಎಂದು ಹಾಗೂ 1 ಲಕ್ಷ ರೈತರಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿರುತ್ತಾರೆ. ಒಬ್ಬರ ಹೆಸರಲ್ಲಿ ಮೂರು ಅಥವಾ ನಾಲ್ಕು ಪಾಣಿ ಇರುತ್ತದೆ. ಉದಾಹರಣೆಗೆ 10, 20, 5 , 3ಗುಂಟೆ ಹೀಗೆಲ್ಲ ಇರುತ್ತದೆ. ಬೆಳೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕು, ಗ್ರಾಮೀಣ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕುಗಳು ಸಾಲ ರೈತರಿಗೆ ನೀಡುತ್ತಿದ್ದು ಎರಡು ಮೂರು ಬ್ಯಾಂಕ್ ಗಳಲ್ಲಿ ನೀಡಲು ಸಾಧ್ಯವಿಲ್ಲ ಎಂಬುದು ಶಾಸಕರಿಗೆ ತಿಳಿದಿಲ್ಲವೇ ಎಂದರು.ಯಾವುದಾದರೂ ಒಂದು ಬ್ಯಾಂಕಲ್ಲಿ ರೈತ ಸಾಲ ತೆಗೆದುಕೊಂಡರೆ ಮತ್ತೊಂದು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಲ್ಲದೆ ತಂದೆ ತಾಯಿ ತಾತಂದಿರ ಹೆಸರಲ್ಲಿ ಪಾಣಿ ಇದ್ದು ಮರಣ ಹೊಂದಿದ್ದು, ಪಾಣಿಗಳು ಬದಲಾಯಿಸಿಕೊಂಡಿರಲ್ಲ. ಇದರಿಂದ ಪಾಣಿದಾರರ ಸಂಖ್ಯೆ ಒಂದು ಮನೆಯಲ್ಲಿ ಹೆಚ್ಚು ಕಾಣುತ್ತವೆ. ನಮ್ಮ ತಾಲೂಕಿನಲ್ಲಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ 10843 ರೈತರಿಗೆ 37.98 ಕೋಟಿಗಳ ಸಾಲ ನೀಡಲಾಗಿದೆ. 79 ರೈತರಿಗೆ ಕೃಷಿ ಅಭಿವೃದ್ಧಿಗಾಗಿ ವಾರ್ಷಿಕ 3% ಬಡ್ಡಿ ದರದಲ್ಲಿ, 4.91 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ನಮ್ಮ ಬ್ಯಾಂಕಿನಿಂದ ಒಟ್ಟು 12,000 ರೈತರಿಗೆ ಅನುಕೂಲವಾಗಿದೆ 107 ಕೋಟಿ 17 ಲಕ್ಷ ಸಾಲ ರೈತರಲ್ಲದೆ ಬೇರೆ ಗ್ರಾಹಕರಿಗೆ ಗೃಹ, ವಾಹನ ಸಾಲ ಹಾಗೂ ಇನ್ನಿತರೆ ಸಾಲಗಳು ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುತ್ತೇವೆ.ಡಿಸಿಸಿ ಬ್ಯಾಂಕ್ ನಿಂದ ಕೆಸಿಸಿ ಸಾಲ ನೀಡುವಾಗ ನಬಾರ್ಡ್ ಹಾಗೂ ಅಪೇಕ್ಸ್ ಬ್ಯಾಂಕ್ ಹೊರತುಪಡಿಸಿ ಯಾವುದೇ ಅನುದಾನ ಸರ್ಕಾರದಿಂದ ಇರುವುದಿಲ್ಲ ನಾವು ಡಿಪೋಸಿಟರ್ ಹಣದಿಂದಲೇ ಸಾಲ ನೀಡಬೇಕು. ಸಹಕಾರ ಸಂಘಗಳಲ್ಲಿ ಮರಣ ಹೊಂದಿ ಸುಸ್ತಿಯಾಗಿರುವ ರೈತರ ಪರವಾಗಿ ಮೃತ ರೈತರ ಸಾಲ ಮನ್ನಾವನ್ನು ನಮ್ಮ ಬ್ಯಾಂಕಿನ ಸ್ವಂತ ಬಂಡವಾಳದಿಂದ ಮನ್ನಾ ಮಾಡಲಾಗುತ್ತಿದೆ. ಈ ಯೋಜನೆಗಳು ತುಮಕೂರು ಡಿಸಿಸಿ ಬ್ಯಾಂಕಿನಿಂದ ಮಾತ್ರ ಮಾಡುತ್ತಿರುತ್ತೇವೆ ಎಂದರು. ಸಹಕಾರ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಬೇಕೆಂದು ಆಸೆಯಿಂದ ಬಂದಂತ ಶಾಸಕರು ಸೋಲು ಅನುಭವಿಸಿದರು ಇದರಿಂದ ಆತಾಶಗೊಂಡು ವಿಧಾನಸಭೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿವೆ. ಯಾವ ರೀತಿ ಕಾರ್ಯನಿರ್ವಹಿಸುತ್ತೇವೆ ಆ ಸಮಸ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ ವ್ಯಾಪ್ತಿ ಮತ್ತು ಚಟುವಟಿಕೆ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿಟಿಎಪಿಎಂಎಸ್ ಉಪಾಧ್ಯಕ್ಷರಾದ ಕೆಜಿ ಶ್ರೀನಿವಾಸ್ ಹಾಗೂ ನಿರ್ದೇಶಕರಾದ ರಂಗಸ್ವಾಮಿ ಕೃಷ್ಣೇಗೌಡ , ಜೆಡಿಎಸ್ ವಕ್ತಾರ ಪ್ರಕಾಶ್ , ಗ್ರಾ.ಪಂ ಮಾಜಿ ಸದಸಯ ಮಂಜುನಾಥ್ ಸೇರಿದಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು