ರಾಜಕಾರಣಿಗಳಲ್ಲಿ ಸಭ್ಯತೆ ಮಾಯ

| Published : Nov 07 2025, 02:00 AM IST

ಸಾರಾಂಶ

ಸಂಸದರಾಗಿದ್ದ ಕೃಷ್ಣರಾಯರು ತಮ್ಮ ಸಾರ್ವಜನಿಕ ಜೀವನದಲ್ಲಿ ಸರಳತೆ, ಸಭ್ಯತೆ, ವಿನಯಯ ಮೈಗೂಡಿಸಿಕೊಂಡು ಅಪ್ಪಟ ಗಾಂಧಿವಾಧಿಯಂತೆ ಜೀವನ ಸಾಗಿಸಿದರು. ತಮ್ಮ ಬದುಕನ್ನು ಸಾರ್ವಜನಿಕರಿಗಾಗಿ ಮೀಸಲಿಟ್ಟಿದ್ದರು. ಜಾತಿ ,ಧರ್ಮ ಗಳನ್ನು ಮೀರಿ ಸಾರ್ವಜನಿಕರಿಗಾಗೀಯೇ ಬದುಕಿದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜಕಾರಣಿಗಳಲ್ಲಿ ಸಭ್ಯತೆ, ವಿನಯ ಮಾಯವಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ನಗರದ ಕನ್ನಡಭವನದಲ್ಲಿ ಬುಧವಾರ ವಿ.ಕೃಷ್ಣರಾವ್ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಮಾಜಿ ಸಂಸದ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ವಿ. ಕೃಷ್ಣರಾವ್ ಅವರ 100ನೇ ಹುಟ್ಟುಹಬ್ಬ ಆಚರಣೆಯಲ್ಲಿ ಮಾತನಾಡಿ, ಒಂದೆಡೆ ಹೊಗಳುಭಟ್ಟರು ಮತ್ತೊಂದೆಡೆ ಭ್ರಷ್ಟರು ನಾಯಕರನ್ನು ಓಲೈಸಿ ಒಲಿಸಿಕೊಳ್ಳಲು ಎಲ್ಲಕ್ಕೂ ಸೈ ಎನ್ನುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವುದರಿಂದ ಪ್ರಜಾ ಪ್ರಭುತ್ವಕ್ಕೇ ಸಂಚಕಾರ ತಂದಿದೆ ಎಂದರು.

ಸಭ್ಯ ರಾಜಕಾರಣಿ ಕೃಷ್ಣರಾವ್‌

ಸಂಸದರಾಗಿದ್ದ ಕೃಷ್ಣರಾಯರು ತಮ್ಮ ಸಾರ್ವಜನಿಕ ಜೀವನದಲ್ಲಿ ಸರಳತೆ, ಸಭ್ಯತೆ, ವಿನಯಯ ಮೈಗೂಡಿಸಿಕೊಂಡು ಅಪ್ಪಟ ಗಾಂಧಿವಾಧಿಯಂತೆ ಜೀವನ ಸಾಗಿಸಿದರು. ತಮ್ಮ ಬದುಕನ್ನು ಸಾರ್ವಜನಿಕರಿಗಾಗಿ ಮೀಸಲಿಟ್ಟಿದ್ದರು. ಜಾತಿ ,ಧರ್ಮ ಗಳನ್ನು ಮೀರಿ ಸಾರ್ವಜನಿಕರಿಗಾಗೀಯೇ ಬದುಕಿದರು. ಅವರು ಸಾಮಾನ್ಯರಂತೆ ಬಸ್ ಮತ್ತು ರೈಲಿನಲ್ಲಿಯೇ ಸಂಚಾರ ಮಾಡುತ್ತಿದ್ದರೇ ಹೋರತು ಕಾರು, ಹೆಲಿಕ್ಯಾಪ್ಟರ್ ಬಳಸಲಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ವಿ.ಕೃಷ್ಣರಾವ್ ರವರು ಮೂರು ಬಾರಿ ಸಂಸದರಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಾರ್ವಜನಿಕ ಜೀವನದಲ್ಲಿ ಸರಳತೆ, ಸಭ್ಯತೆ, ವಿನಯಯ ಮೈಗೂಡಿಸಿಕೊಂಡಿದ್ದರು. ತಮ್ಮ ಬದುಕನ್ನು ಸಾರ್ವಜನಿಕರಿಗಾಗಿ ಮೀಸಲಿಟ್ಟಿದ್ದರು ಎಂದರು .

ಕಾರ್ಯಕ್ರಮದಲ್ಲಿ ರಾಜ್ಯ ಬೀಜ ನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಮಾಜಿ ಸಚಿವ ಎನ್.ಹೆಚ್. ಶಿವಶಂಕರ್ ರೆಡ್ಡಿ, ಮಾಜಿ ಸಭಾಪತಿ ವಿ.ಆ‌ರ್. ಸುದರ್ಶನ್, ಮಾಜಿ ಶಾಸಕರಾದ ಎ. ನಾಗರಾಜ್ , ಎಸ್.ಎಂ. ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಲಾಯರ್ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ ಮತ್ತಿತರರು ಇದ್ದರು.

ಸಿಕೆಬಿ-3....ಚಿಕ್ಕಬಳ್ಳಾಪುರ ನಗರದ ಕನ್ನಡಭವನದಲ್ಲಿ ದಿ. ಮಾಜಿ ಸಂಸದ ವಿ. ಕೃಷ್ಣರಾವ್ ಅವರ 100ನೇ ಜನ್ಮದಿನ ಸಮಾರಂಭವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು. ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಇದ್ದಾರೆ.