ಬಿಜೆಪಿ ಬಳ್ಳಾರಿ ಸಮಾವೇಶಕ್ಕೆ ಅನುಮತಿ ನಿರಾಕರಣೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ಬಳ್ಳಾರಿ ಸಮಾವೇಶಕ್ಕೆ ಅನುಮತಿ ನಿರಾಕರಣೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಶಿಕಾರಿಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಆರ್‌ಎಸ್‌ಎಸ್ ಶಾಖೆ ಸಾರ್ವಜನಿಕ ಸ್ಥಳದಲ್ಲಿ ಮಾಡಲು ಬಿಡಲ್ಲ ಎಂದಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದ ಮಹಾನ್ ನಾಯಕ ರಾಹುಲ್ ಗಾಂಧಿಯವರು ಸಹ ಅಲ್ಲಿ ಸಮಾವೇಶ ಮಾಡಿದ್ದಾರೆ. ಅವರಿಗೊಂದು ಕಾನೂನು ನಮಗೊಂದು ಕಾನೂನಾ..? ಯಾರು ಕೂಡ ರಾಜಕಾರಣದಲ್ಲಿ ಗೂಟ ಹೊಡೆದುಕೊಂಡು ಕೂರಲ್ಲ. ಈ ರೀತಿಯ ದ್ವೇಷದ ರಾಜಕಾರಣ ಬಿಡಬೇಕು ಎಂದು ಹರಿಹಾಯ್ದರು.
ಎಲ್ಲಾ ರಾಜಕೀಯ ಪಕ್ಷಗಳು ಸಹ ಚುನಾವಣಾ ಆಯೋಗದ ಅಡಿಯಲ್ಲೇ ನೋಂದಣಿ ಆಗಿರುತ್ತೆ. ಸಂಜೆ ಕಾರ್ಯಕ್ರಮ ಇದೆ ಮಕ್ಕಳಿಗೆ ಯಾವುದೇ ತೊಂದರೆ ಆಗಲ್ಲ ಪರೀಕ್ಷೆಗಳು ಸಹ ಇಲ್ಲ. ಬಳ್ಳಾರಿ ಚಲೋಗೆ ಸಿಕ್ಕಿರುವ ಜನಸ್ಪಂದನೆ ನೋಡಿ ಗಾಬರಿ ಆಗಿರಬೇಕು, ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕುಟುಕಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವಿಚಾರದಲ್ಲಿ ಪರ ವಿರೋಧ ಚರ್ಚೆ ಆಗುತ್ತಿದೆ. ಸಂಸದನಾಗಿ ನಾನು ಎಲ್ಲಿಯೂ ಸಹ ರಾಜಕೀಯ ಭಾಷಣ ಮಾಡಿಲ್ಲ. ಕಸ್ತೂರಿ ರಂಗನ್ ವರದಿ, ಗಾಡ್ಗಿಲ್ ವರದಿ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಕಸ್ತೂರಿ ರಂಗನ್ ವರದಿಗೆ ನಮ್ಮ ವಿರೋಧ ಸಹ ಇದೆ. ಈ ಸಂಬಂಧ ಪಾದಯಾತ್ರೆಗಳು ನಡೆಯುತ್ತಿದೆ. ಶಿಕಾರಿಪುರ ತಾಲೂಕಿನಲ್ಲಿ 11 ಹಳ್ಳಿಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುತ್ತವೆ. ಜನರಿಗೆ ಗಾಬರಿ ಪಡಿಸುವ ಕೆಲಸ ಅವಶ್ಯಕತೆ ಇಲ್ಲ. ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದರು.