ಗೊಲ್ಲರಹಳ್ಳಿಯಲ್ಲಿ ಮೈತ್ರಿ ಕಾರ್ಯಕರ್ತರಿಂದ ಮತಯಾಚನೆ

| Published : Apr 23 2024, 12:47 AM IST

ಗೊಲ್ಲರಹಳ್ಳಿಯಲ್ಲಿ ಮೈತ್ರಿ ಕಾರ್ಯಕರ್ತರಿಂದ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಣ್ಣರಿಗೆ ಹೆಚ್ಚು ಮತ ನೀಡಿದರೆ ಗೆದ್ದು ದೇಶದ ಅಭಿವೃದ್ಧಿಗೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಾರೆ. ದೇಶದಲ್ಲಿ ಮೋದಿ, ರಾಜ್ಯದಲ್ಲಿ ಕುಮಾರಣ್ಣ ಇದ್ದರೆ ಮಾತ್ರ ನಮ್ಮ ರಾಜ್ಯ ಸುಭದ್ರವಾಗಿರಲು ಸಹಕಾರಿಯಾಗುತ್ತದೆ. ಮೋದಿಯವರ ಕೈ ಬಲಪಡಿಸಲು ಜೆಡಿಎಸ್ ಅಭ್ಯರ್ಥಿ ಅಧಿಕ ಮತಗಳಿಂದ ಗೆಲ್ಲಲೇಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಗೊಲ್ಲರಹಳ್ಳಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್ .ಡಿ.ಕುಮಾರಸ್ವಾಮಿ ಪರ ಕರಪತ್ರಗಳನ್ನು ನೀಡಿ ಮತಯಾಚನೆ ಮಾಡಿದರು. ಬ್ಯಾಡರಹಳ್ಳಿ ಗ್ರಾಪಂ ಸದಸ್ಯ ರಾಜೇಶ್ ಮಾತನಾಡಿ, ಕುಮಾರಣ್ಣರಿಗೆ ಹೆಚ್ಚು ಮತ ನೀಡಿದರೆ ಗೆದ್ದು ದೇಶದ ಅಭಿವೃದ್ಧಿಗೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಾರೆ. ದೇಶದಲ್ಲಿ ಮೋದಿ, ರಾಜ್ಯದಲ್ಲಿ ಕುಮಾರಣ್ಣ ಇದ್ದರೆ ಮಾತ್ರ ನಮ್ಮ ರಾಜ್ಯ ಸುಭದ್ರವಾಗಿರಲು ಸಹಕಾರಿಯಾಗುತ್ತದೆ ಎಂದರು.

ಬಿಜೆಪಿ ಮುಖಂಡ ಜಿ.ಕೆ.ನಾಗೇಶ್ ಮಾತನಾಡಿ, ಎನ್ ಡಿಎ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಮನೆಮನೆಗೆ ತೆರಳಿ ಕುಮಾರಣ್ಣನ ಸಾಧನೆ ಬಗ್ಗೆ ಹಾಗೂ ಮೋದಿಯವರ ಕೈ ಬಲಪಡಿಸಲು ಜೆಡಿಎಸ್ ಅಭ್ಯರ್ಥಿ ಅಧಿಕ ಮತಗಳಿಂದ ಗೆಲ್ಲಲೇಬೇಕು ಎಂದು ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದರು.

ಮುಖಂಡರು ಹಾಗೂ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ

ಕನ್ನಡಪ್ರಭ ವಾರ್ತೆ ಮಂಡ್ಯಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ, ದುರ್ಬಲ ವರ್ಗಗಳ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನಗಳನ್ನು ಜಾರಿ ಮಾಡುವ ಮೂಲಕ ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ ಕೆಂಪಯ್ಯ ಸಾಗ್ಯ ಮನವಿ ಮಾಡಿದರು.

ಕೋಮುವಾದಿ, ಸಂವಿಧಾನ ವಿರೋಧಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಧಿಕ್ಕರಿಸಿ ಜನಪರ ಚಿಂತನೆಯುಳ್ಳ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಬೆಂಬಲಿಸುವಂತೆ ಕೋರಿದರು.ಕಳೆದ ವರ್ಷ ೨೦೨೩ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಕೆಟ್ಟ ರೀತಿಯಲ್ಲಿ ಸೋತಿರುವುದು, ಸಂವಿಧಾನ, ಪ್ರಜಾಪ್ರಭುತ್ವ, ದೇಶದ ಜನರ ಬಗ್ಗೆ ಕಾಳಜಿ ಇರುವವರೆಲ್ಲರಿಗೂ ಹೊಸ ಉತ್ಸಾಹ, ಭರವಸೆ ಹುಟ್ಟಿಸಿದೆ ಎಂದರು.

ಲೋಕಸಭೆಯಲ್ಲಿ ಬಹುಮತವನ್ನೇ ಬಳಸಿಕೊಂಡು, ನಿರಂಕುಶ ಸರ್ವಾಧಿಕಾರದತ್ತ ಸಾಗಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮತ್ತು ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ಹಂತ ಹಂತವಾಗಿ ನಿಷ್ಕ್ರೀಯಗೊಳಿಸಿ, ಸ್ವಾಯತ್ತತೆಯನ್ನು ನಿರರ್ಥಕಗೊಳಿಸಿ ಅವುಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ ಎಂದು ದೂರಿದರು.ಮುಖಂಡರಾದ ಎನ್.ರಮಾನಂದ, ಕುಬೇರಪ್ಪ, ಎಚ್.ಸುರೇಶ ಇತರರು ಗೋಷ್ಠಿಯಲ್ಲಿದ್ದರು.