ಸಾರಾಂಶ
ದಾಳಿಂಬೆಗೆ ಇದೀಗ ಒಮ್ಮೆಲೆ ದುಂಡಾಣು ರೋಗ ಭಾದಿಸುತ್ತಿರುವುದು ಬೆಳದಿರುವ ರೈತರನ್ನು ಸಂಪೂರ್ಣ ಕಂಗೆಡಿಸಿದ್ದು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು
ಕನ್ನಡಪ್ರಭ ವಾರ್ತೆ ಕೊಟ್ಟೂರುದಾಳಿಂಬೆಗೆ ಇದೀಗ ಒಮ್ಮೆಲೆ ದುಂಡಾಣು ರೋಗ ಭಾದಿಸುತ್ತಿರುವುದು ಬೆಳದಿರುವ ರೈತರನ್ನು ಸಂಪೂರ್ಣ ಕಂಗೆಡಿಸಿದ್ದು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ.
ತಾಲೂಕಿನ ನಿಂಬಳಗೇರಿ ಗ್ರಾಮದ ಬಣಕಾರ್ ಕೊಟ್ರೇಶ್ ಬೆಳೆದ ದಾಳಿಂಬೆ ಬೆಳೆ ಸಂಪೂರ್ಣ ದುಂಡಾಣು ರೋಗದಿಂದ ಹರಡಿ ಗಿಡಗಳು ಒಣಗಲಾರಂಭಿಸಿವೆ. ಈ ರೈತ ಸೇರಿದಂತೆ ಇತರ ರೈತರ 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ದಾಳಿಂಬೆ ಬೆಳೆಗಳು ಇದೀಗ ಈ ದುಂಡಾಣು ರೋಗದಿಂದ ಬಳಲುವಂತಾಗಿದ್ದು, ರೈತರಿಗೆ ದೊಡ್ಡ ಬಗೆಯ ಚಿಂತೆಗೀಡು ಮಾಡಿದೆ. ಈ ರೋಗದಿಂದ ದಾಳಿಂಬಿ ಗಿಡದ ಎಲೆಗಳು, ಹೂವುಗಳು, ಹಣ್ಣು ನಾಶವಾಗುತ್ತವೆ ಅಲ್ಲದೇ ಕೊಳತು ಹೋಗುವ ಸ್ಥಿತಿ ತಲುಪಿವೆ. ಇದರ ಜೊತೆಗೆ ಎಲೆಯ ಮೇಲೆ ನೀರಿನಿಂದ ಕೂಡಿದ ಚುಕ್ಕೆ ಕಾಣುಸುತ್ತಿವೆ. ನಂತರದ ದಿನಗಳಲ್ಲಿ ಚುಕ್ಕೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಇದು ಅಂಡಾಣು ರೋಗ ಉಲ್ಬಣಗೊಂಡಿರುವ ಸಂಕೇತ ಎನ್ನುವಂತಾಗಿದೆ.ಅಂಡಾಣು ರೋಗ ನಿವಾರಣೆಗೆ ಕೆಲವು ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರದಂತಾಗಿದೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.
ಕೊಟ್ಟಿಗೆ ಗೊಬ್ಬರ ಅಥಾವ ರಸಾಯನಿಕ ಗೊಬ್ಬರ ಸಿಂಪಡಿಸಲು 1 ಗಿಡಕ್ಕೆ ₹600ರಿಂದ 700 ಖರ್ಚು ಆಗುತ್ತದೆ. ಇಂತಹ ಸ್ಥಿತಿಯಲ್ಲಿ ಗೊಬ್ಬರ ನೀಡಿದರೂ ಗಿಡಗಳು ಬೆಳೆಯದೇ ಸಂಪೂರ್ಣ ಹಾಳಾಗುತ್ತಿವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.2 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದು, ಸಾಕಷ್ಟು ಔಷಧದ ಉಪಚಾರ ಮಾಡಿದರೂ ದುಂಡಾಣು ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಗಿಡಗಳನ್ನು ಕಿತ್ತು ಹಾಕುತ್ತಿದ್ದೇವೆ ಎನ್ನುತ್ತಾ ನಿಂಬಳಗೇರಿ ಗ್ರಾಮದ ರೈತ ರಮೇಶ.
ದಾಳಿಂಬೆ ಗಿಡದಲ್ಲಿ ಕಾಣಿಸಿಕೊಂಡಿರುವ ರೋಗ ಬರುವುದಕ್ಕಿಂತ ಮುಂಚಿತವಾಗಿ ಪ್ರತಿ ಲೀಟರ್ ನೀರಿಗೆ ಬ್ಯಾಸ್ಟೀನ್ 2 ಗ್ರಾಂ ಮತ್ತು ಕಾಪರ್ ಅಕ್ಸಿಕ್ಯೂರ್ ಡ್ 2 ಗ್ರಾಂ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಕೂಡ್ಲಿಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್. ರಾಜೇಂದ್ರ ಯೋರಿಯ ತಿಳಿಸಿದ್ದಾರೆ.