ಪೊನ್ನಂಪೇಟೆ: 12ರಂದು ಕೊಡವ ಯುವಮೇಳ-2026

| Published : Sep 15 2025, 01:01 AM IST

ಸಾರಾಂಶ

ಎರಡನೇ ಕೊಡವ ಯುವ ಮೇಳವನ್ನು 2026 ಏ. 12ಕ್ಕೆ ಪೊನ್ನಂಪೇಟೆಯಲ್ಲಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆಯಲ್ಲಿ ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎರಡನೇ ಕೊಡವ ಯುವ ಮೇಳವನ್ನು 2026 ಏ.12ಕ್ಕೆ ಪೊನ್ನಂಪೇಟೆಯಲ್ಲಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.

ಜಬ್ಭೂಮಿ ಸಂಘಟನೆಯ ಸಂಚಾಲಕ ಚೊಟ್ಟೆಕ್''''''''ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ಸಮೀಪ ಹೊದ್ದೂರಿನ ‘ಟ್ವಿನ್ ರಿವರ್ ರಿಟ್ರೀಟ್’ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

2023ರಲ್ಲಿ ಮಡಿಕೇರಿಯಲ್ಲಿ ಪ್ರಥಮ ಕೊಡವ ಯುವ ಮೇಳವನ್ನು ಜಬ್ಭೂಮಿ ಸಂಘಟನೆ ಯಶಸ್ವಿಯಾಗಿ ನಡೆಸಿತ್ತು. ಇದೀಗ ಎರಡನೇ ಕೊಡವ ಯುವಮೇಳವನ್ನು ಪೊನ್ನಂಪೇಟೆಯಲ್ಲಿ ನಡೆಸಿ ಸುಮಾರು 10 ಸಾವಿರ ಜನಾಂಗದ ಯುವ ಪೀಳಿಗೆಯನ್ನು ಸೇರಿಸಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶಕ್ಕೂ ಮೊದಲು ಗೋಣಿಕೊಪ್ಪದಿಂದ ಪೊನ್ನಂಪೇಟೆವರೆಗೆ ಸುಮಾರು 5 ಕಿ.ಮೀ. ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಯುವ ಮೇಳದ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಕೊಡಗಿನ ನೆಲದೊಂದಿಗೆ ಕೊಡವರಿಗೆ ಇರುವ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ದಿಂದ ಯುವಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ, ಮಕ್ಕಳಲ್ಲಿ ತಂದೆ ತಾಯಿ ಕುಟುಂಬದ ಪ್ರಯೋಜನದ ಬಗ್ಗೆ ಅರಿವು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸಮಾವೇಶದಲ್ಲಿ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಜಬ್ಭೂಮಿ ಸಂಘಟನೆಯ ಕಾರ್ಯಾಚಟುವಟಿಕೆ, ಮುಂದಿನ ಕಾರ್ಯಯೋಜನೆ ಚರ್ಚಿಸಲಾಯಿತು. ಸಭೆಯಲ್ಲಿ ಲೆಕ್ಕ ಪತ್ರ ಮಂಡಿಸಲಾಯಿತು. ಉಳುವಂಗಡ ಲೋಹಿತ್ ಭೀಮಯ್ಯ ಜಬ್ಭೂಮಿ ಗೀತೆ ಹಾಡಿದರು.

ಜಬ್ಬೂಮಿ ಸಹ ಸಂಚಾಲಕರು ಅಚ್ಚಾಂಡಿರ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ, ಮಲ್ಲಮಾಡ ಪ್ರಭು ಪೂಣಚ್ಚ ಮಚ್ಚಾಮಾಡ ಅನೀಶ್ ಮಾದಪ್ಪ, ಮಾಳೇಟಿರ ಶ್ರೀನಿವಾಸ್, ಚೈಯ್ಯಂಡ ಸತ್ಯ, ಮಂಞೀರ ಕುಟ್ಟಪ್ಪ, ಬಲ್ಲಿಮಾಡ ಸಂಪತ್ ಕೋಟೆರ ಕಿಶನ್ ಉತ್ತಪ್ಪ , ಕಿಮ್ಮುಡೀರ ರವಿ ಚಂಗಪ್ಪ, ಚೆಕ್ಕೆರ ಸಚಿನ್ ಸೋಮಯ್ಯ, ಚೆನ್ನಪ್ಪಂಡ ದರ್ಶನ್ ಪೊನ್ನಪ್ಪ, ಶಾಂತೇಯಂಡ ನಿರನ್ ನಾಚಪ್ಪ, ಚೆಟ್ಟಂಗಡ ಕಂಬ ಕಾರ್ಯಪ್ಪ, ಚೆಟ್ಟಂಗಡ ರವಿ ಸುಬ್ಬಯ್ಯ, ಅಚ್ಚಪಂಡ ಮಹೇಶ್ ಮಾಚಯ್ಯ, ಸೋಮಣ್ಣ, ಪುಚ್ಚಿಮಂಡ ಅಪ್ಪಯ್ಯ, ಮೂಡೆರ ರಾಯ್, ಮಂಡೆಪಂಡ ಕುಟ್ಟಯ್ಯ, ಅಮ್ಮಟಂಡ ಎಂ ದೇವಯ್ಯ, ಚಂಗಂಡ ಸೂರಜ್ ತಮ್ಮಯ್ಯ, ಅವರೆಮಾದಂಡ ಅನಿಲ್, ಚೌರಿರ ಮಂದಣ್ಣ, ತೇಲಪಂಡ ಸುಬ್ಬಯ್ಯ, ಬಲ್ಯಾಟಂಡ ಕೌಶಿಕ್ ಕುಟ್ಟಯ್ಯ, ಬೊಳ್ಳಚೆಟ್ಟಿರ ಮೈನ ಕಾಳಪ್ಪ, ಪಳಗಂಡ ರೇಖಾ ತಮ್ಮಯ್ಯ, ಕುಂಜಿಲಂಡ ಗ್ರೇಸಿ ಪೂಣಚ್ಚ, ಕಳ್ಳಿಚಂಡ ದೀನಾ ಅಣ್ಣಯ್ಯ, ಮೂಕಳೆರ ಕಾವ್ಯ ಮಧು, ಚೊಟ್ಟೆಕ್''''''''ಮಾಡ ನಾಚಪ್ಪ,ಬಡುವಂಡ ಎಂ ಹರೀಶ್, ಚೇದಂಡ ಶಮ್ಮಿ ಮಾದಯ್ಯ, ಹಂಚಿಟ್ಟಿರ ಮನು ಮುದ್ದಪ್ಪ, ಚೆನ್ನಪ್ಪಂಡ ಮನು ಉತ್ತಪ್ಪ, ಕುಂಡಿಯೋಳಂಡ ದಿನೇಶ್ ಕಾರ್ಯಪ್ಪ, ಚೇಂದಂಡ ನವೀನ್, ಉಳುವಂಗಡ ಲೋಹಿತ್ ಭೀಮಯ್ಯ, ನೇರವಂಡ ಅನೂಪ್ ಉತ್ತಯ್ಯ ಮತ್ತಿತರರು ಹಾಜರಿದ್ದರು.