ಮುದ್ದಂಡ ಕಪ್ : ಪೊನ್ನಿಮಾಡ, ಕನ್ನಂಬಿರ, ಪುಟ್ಟಿಚಂಡ ತಂಡಗಳ ಗೆಲುವು

| Published : Apr 04 2025, 12:50 AM IST

ಮುದ್ದಂಡ ಕಪ್ : ಪೊನ್ನಿಮಾಡ, ಕನ್ನಂಬಿರ, ಪುಟ್ಟಿಚಂಡ ತಂಡಗಳ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದಂಡ ಹಾಕಿ ಕಪ್‌ನ ಗುರುವಾರ ನಡೆದ ಪಂದ್ಯದಲ್ಲಿ ಪೊನ್ನಿಮಾಡ, ಕನ್ನಂಬಿರ, ಪುಟ್ಟಿಚಂಡ ತಂಡಗಳು ಗೆಲುವು ಸಾಧಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಗುರುವಾರ ನಡೆದ ಪಂದ್ಯದಲ್ಲಿ ಪೊನ್ನಿಮಾಡ, ಕನ್ನಂಬಿರ, ಪುಟ್ಟಿಚಂಡ ತಂಡಗಳು ಗೆಲುವು ಸಾಧಿಸಿವೆ.

ಕುಂದಿರ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೊನ್ನಿಮಾಡ ತಂಡ ಗೆಲುವು ದಾಖಲಿಸಿತು. ಚಟ್ಟಂಗಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಕುಟ್ಟಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು.

ಪಾಲೆಂಗಡ ಮತ್ತು ಕನ್ನಂಬಿರ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕನ್ನಂಬಿರ ಜಯ ಸಾಧಿಸಿತು. ಪುಟ್ಟಿಚಂಡ ಮತ್ತು ಕುಟ್ಟೇಟಿರ ನಡುವಿನ ಪಂದ್ಯದಲ್ಲಿ ಪುಟ್ಟಿಚಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೈರೇಟಿರ ಮತ್ತು ಪಳೆಯಂಡ (ಹಮ್ಮಿಯಾಲ) ಬೈರೇಟಿರ ತಂಡ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ಮಂದಂಗಡ ಮತ್ತು ಐಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂದಂಗಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಂಡೇಡ ಮತ್ತು ದೇಯಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮಂಡೇಡ ಜಯ ಸಾಧಿಸಿತು.

ಅನ್ನಡಿಯಂಡ ಮತ್ತು ಬಟ್ಟಕಾಳಂಡ ವಾಕ್ ಓವರ್‌ನಲ್ಲಿ ಅನ್ನಡಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಚೇರಂಡ ಮತ್ತು ಚೆನ್ನಪಂಡ ನಡುವಿನ ಪಂದ್ಯ ಯಾವುದೇ ಗೋಲು ದಾಖಲಾಗದೆ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೇರಂಡ ತಂಡ ಜಯ ಸಾಧಿಸಿತು. ನಂದಿನೆರವಂಡ ಮತ್ತು ಐತಿಚಂಡ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ಮುಂಡಂಡ ಮತ್ತು ಅಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಗೆಲುವು ದಾಖಲಿಸಿತು. ಕಟ್ಟೆರ ಮತ್ತು ಮಾಳೇಟಿರ (ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ಮಾಳೇಟಿರ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಚೇಂದ್ರಿಮಾಡ ಮತ್ತು ಸುಳ್ಳಿಮಾಡ ನಡುವಿನ ಪಂದ್ಯದಲ್ಲಿ ಸುಳ್ಳಿಮಾಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮುಂಡೋಟಿರ ಮತ್ತು ಚೋಡುಮಾಡ ನಡುವಿನ ಪಂದ್ಯದಲ್ಲಿ ತಲಾ 2 ಗೋಲುಗಳ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಚೋಡುಮಾಡ ತಂಡ ಗೆಲುವು ದಾಖಲಿಸಿತು.

ಚೋಕಿರ ಮತ್ತು ವಲ್ಲಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಚೋಕಿರ ಜಯ ಸಾಧಿಸಿತು. ಚೊಟ್ಟೆಯಂಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ತೆಕ್ಕಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಯಪಂಡ ಮತ್ತು ಉಪ್ಪಂಗಡ ನಡುವಿನ ಪಂದ್ಯದಲ್ಲಿ ಕಾಯಪಂಡ 5-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮಾಳೇಟಿರ (ಕುಕ್ಲೂರು) ಮತ್ತು ಅವರೆಮಾದಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ ತಂಡ 1-0 ಗೋಲು ಅಂತರದಲ್ಲಿ ಗೆಲುವು ದಾಖಲಿಸಿತು. ಕಾವಾಡಿಚಂಡ ಮತ್ತು ಕಾಳಚಂಡ ನಡುವಿನ ಪಂದ್ಯದಲ್ಲಿ ಕಾವಾಡಿಚಂಡ 3-0 ಗೋಲುಗಳ ಅಂತರದಿಂದ ಜಯಸಾಧಿಸಿತು. ಮೇಕೇರಿರ ಮತ್ತು ಕೈಬುಲಿರ ತಂಡಗಳ 4-0 ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ ತಂಡ ಗೆಲುವು ಸಾಧಿಸಿತು.