ಸ್ಥಳೀಯ ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ ಹಾಗೂ ಪರಿವಾರ ದೇವರುಗಳ 8ನೇ ವಾರ್ಷಿಕ ಪೂಜಾ ಮಹೋತ್ಸವ 30ರಂದು ನಡೆಯಲಿದೆ ಎಂದು ಪರಿವಾರ ದೇವರ ಸೇವಾ ಸಮಿತಿ ತಿಳಿಸಿದೆ.
ಕನ್ನಡಪ್ರಭವಾರ್ತೆ ಶನಿವಾರಸಂತೆ
ಸ್ಥಳೀಯ ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ ಹಾಗೂ ಪರಿವಾರ ದೇವರುಗಳ 8ನೇ ವಾರ್ಷಿಕ ಪೂಜಾ ಮಹೋತ್ಸವ 30ರಂದು ನಡೆಯಲಿದೆ ಎಂದು ಪರಿವಾರ ದೇವರ ಸೇವಾ ಸಮಿತಿ ತಿಳಿಸಿದೆ. ಸೋಮವಾರ ಬೆಳಗ್ಗೆ 5-30 ಗಂಟೆಗೆ ಗಂಗಾಪೂಜೆ, ಗೋಪೂಜೆ, ಮಂಗಳಾರತಿ ನಂತರ ಪಟ್ಟಣದ ಸಹಕಾರ ಬ್ಯಾಂಕಹತ್ತಿರದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ವರೆಗೆ ಕಳಸ ಕುಂಭ ಮೆರವಣಿಗೆ ನಡೆಯುತ್ತದೆ ಬೆಳಗ್ಗೆ 7 ಗಂಟೆಗೆ ಶ್ರೀ ಗಣಪತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾ ಸಂಕಲ್ಪ ನಡೆಯಲಿದ್ದು ಬೆಳಗ್ಗೆ 7-30 ಕ್ಕೆ ಊರೊಡೆಯ ಗುಡಿಯಲ್ಲಿ ದೇವರಿಗೆ ಮಹಾಪೂಜೆ, ಮಹಾ ಮಂಗಳಾರತಿ ಮತ್ತು ಉಪಹಾರ ವಿನಿಯೋಗ, ಬೆಳಗ್ಗೆ 9 ಗಂಟೆಗೆ ಬ್ರಹ್ಮದೇವರಿಗೆ ವಿಶೇಷ ಪೂಜೆ, ಬೆಳಗ್ಗೆ 9-30 ಕ್ಕೆ ಬಿದರೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜಾ ಕಾರ್ಯ, ಬೆಳಗ್ಗೆ 10 ಗಂಟೆಗೆ ಹೆಮ್ಮನೆ ಗ್ರಾಮದ ಮಾರಮ್ಮ, ಊರೊಡೆಯ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇ಼ಷ ಪೂಜೆ, ಬೆಳಗ್ಗೆ 11 ಗಂಟೆಗೆ ತ್ಯಾಗರಾಜ ಕಾಲೋನಿಯಲ್ಲಿ ಶ್ರೀ ಚೌಡೇಶ್ವರಿ ಬನದಲ್ಲಿ ದೇವಿಗೆ ವಿಶೇಷ ಪೂಜೆ ಮತ್ತು 11.30 ಕ್ಕೆ ಶ್ರೀವಿಜಯ ವಿನಾಯಕ ದೇವಸ್ಥಾನದಲ್ಲಿ ದೇವರಿಗೆ ಮಹಾಪೂಜೆ ನಡೆಯುತ್ತದೆ ಮಧ್ಯಾಹ್ನ 12 ಗಂಟೆಗೆ ಬನ್ನಿ ಮಂಟಪದಲ್ಲಿ ಮಹಾಪೂಜೆ, ಮಧ್ಯಾಹ್ನ 12-30 ಗಂಟೆಗೆ ಶ್ರೀರಾಮ ಮಂದಿರದಲ್ಲಿ ದೇವರಿಗೆ ಮಹಾಪೂಜೆ ನೆರವೇರುತ್ತದೆ ಮಧ್ಯಾಹ್ನ 1 ಗಂಟೆಗೆ ಮುಖ್ಯ ರಸ್ತೆಯಲ್ಲಿರುವ ಜಾಮೀಯಾ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 1-30 ಕ್ಕೆ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವರಿಗೆ ಮಹಾಪೂಜೆ ನೆರವೇರಿಸಲಾಗುತ್ತದೆ ತದನಂತರ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ದಾಸೋಹ ನೆರವೇರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ಸಂಜೆ 5 ಗಂಟೆಯಿಂದ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ಸನ್ನಧಿಯಲ್ಲಿ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ಪುಣ್ಯಾಹ, ದೇವನಾಂದಿ, ನವಗ್ರಹ ಮತ್ತು ಮೃತ್ಯಂಜಯ ಪೂಜೆ, ನವಗ್ರಹ ಮತ್ತು ಮೃತ್ಯುಂಜಯ ಹೋಮ, ಗಣಪತಿ ಹೋಮ, ಧನ್ವಂತರಿ ಹೋಮ ಮೂಲ ದೇವರಿಗೆ ಫಲ-ಪಂಚಾಮೃತ ಅಭಿಷೇಕ, ಏಕವಾರು ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾ ಮಂಗಳಾರತಿ ನಂತರ ತೀರ್ಥ ಪ್ರೋಕ್ಷಣೆ ಮುಂತಾದ ವಿಧಿ ವಿಧಾನಗಳು ನೆರವೇರಿಸಲಾಗುತ್ತದೆ ಎಂದು ದೇವರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.