ಹೊಳೆನರಸೀಪುರದಲ್ಲಿ ಮೂರು ದಿನ ರಾಮಲಿಂಗೇಶ್ವರನ ಪೂಜಾ ಕೈಂಕರ್ಯ

| Published : Jun 29 2024, 12:35 AM IST

ಹೊಳೆನರಸೀಪುರದಲ್ಲಿ ಮೂರು ದಿನ ರಾಮಲಿಂಗೇಶ್ವರನ ಪೂಜಾ ಕೈಂಕರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರದ ದೇವಾಂಗ ಬಡಾವಣೆಯ ಶ್ರೀ ರಾಮಲಿಂಗಚೌಡೇಶ್ವರಿ, ಶ್ರೀ ರಾಮಲಿಂಗೇಶ್ವರ ಹಾಗೂ ಗಣಪತಿ ದೇವರ ನೂತನ ವಿಗ್ರಹ, ದೇವಾಲಯ ಸಂಪ್ರೋಕ್ಷಣ, ಶಿಖರ ಕಳಸ ಪ್ರತಿಷ್ಠಾಪನಾ ಕುಂಭಾಭಿಷೇಕ ಸೇರಿ ವಿವಿಧ ಪೂಜಾ ಮಹೋತ್ಸವ ಶನಿವಾರದಿಂದ 3 ದಿನ ಜರುಗಲಿದೆ.

ರಾಮಲಿಂಗಚೌಡೇಶ್ವರಿ, ಗಣಪತಿ ನೂತನ ವಿಗ್ರಹ ಸ್ಥಾಪನೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ದೇವಾಂಗ ಬಡಾವಣೆಯ ಶ್ರೀ ರಾಮಲಿಂಗಚೌಡೇಶ್ವರಿ, ಶ್ರೀ ರಾಮಲಿಂಗೇಶ್ವರ ಹಾಗೂ ಗಣಪತಿ ದೇವರ ನೂತನ ವಿಗ್ರಹ, ದೇವಾಲಯ ಸಂಪ್ರೋಕ್ಷಣ, ಶಿಖರ ಕಳಸ ಪ್ರತಿಷ್ಠಾಪನಾ ಕುಂಭಾಭಿಷೇಕ ಸೇರಿ ವಿವಿಧ ಪೂಜಾ ಮಹೋತ್ಸವ ಶನಿವಾರದಿಂದ 3 ದಿನ ಜರುಗಲಿದೆ.

ಜೂ.29ರ ಶನಿವಾರ ಸಂಜೆ ಗೋಧೂಳಿ ಲಗ್ನದಲ್ಲಿ ಅನುಜ್ಞಾ ಪೂರ್ವಕ ಅಗ್ರ ತೀರ್ಥ ಸಂಗ್ರಹ ಗೋಧೇನು ಸಮೇತ ಸುಮಂಗಲಿ ಯಜಮಾನರ ಸಹಿತವಾಗಿ ಪೂರ್ಣ ಕುಂಭದೊಡನೆ ಯಾಗ ಶಾಲೆ ಪ್ರವೇಶ, ಬಲಿ ಹಾಗೂ ಸಂಪ್ರದಾಯದ ಆಚರಣೆಯಂತೆ ವಿಶೇಷ ಪೂಜಾ ಮಹೋತ್ಸವ ಜರುಗಲಿದೆ. ಭಾನುವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಧ್ವಜಾರೋಹಣ, ವಿಶೇಷ ಅಷ್ಠಾವರಣ ಮಹಾಗಣಪತಿ, ಅಷ್ಠಧ್ರವ್ಯ ಗಣಪತಿ ಪೂಜೆ, ಹೋಮ, ಫೂರ್ಣಹುತಿ ನಂತರ ಪಂಚಬ್ರಹ್ಮ, ನವಗ್ರಹ, ಮೃತ್ಯುಂಜಯ, ದಿಕ್ಷಾಲಕ, ಸಪ್ತ ಸಭಾದೇವತೆ, ಪರಿವಾರ ದೇವತೆ, ಶಿಖರ ಕಲಶದೇವತೆ, ಆರಾಧನೆ, ಹೋಮ, ಫೂರ್ಣಹುತಿ ಹಾಗೂ ಇತರೆ ಪೂಜಾ ಕೈಂಕರ್ಯ ಜರುಗಲಿದೆ.

ಸೋಮವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶಿಖರ ಕಳಸ ಕಲಶಾರೋಹಣ, ಯಂತ್ರಸ್ಥಾಪನೆ, ಅಷ್ಠಬಂಧ, ರತ್ನನ್ಯಾಸ, ಪ್ರಾಣಪ್ರತಿಷ್ಠಾಪನೆ ಪೂರ್ವಕ ಅಭಿಷೇಕ, ಹೇಮವತಿ ನದಿ ತೀರದಲ್ಲಿ ಗಂಗೆಪೂಜೆ, ಕಲಾ ತಂಡಗಳ ಪ್ರದರ್ಶದೊಂದಿಗೆ ಕಳಸ ಹೊತ್ತ ಸುಮಂಗಲಿಯರ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮನ, ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ನೇತ್ರೋನ್ಮಿಲನ, ನಾಮಕರಣ, ಕದಲಿ ಛೇದನ, ಕನ್ಯಾಥೇನ, ದರ್ಪಣ ದರ್ಶನ, ಮಹಾನೈವೇಧ್ಯ, ಮಹಾ ಸಂಕಲ್ಪದೊಂದಿಗೆ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ರಾಜೋಪಚಾರ, ಮಹಾಮಂಗಳಾರತಿ, ಮಂತ್ರಪುಷ್ಪ, ತೀರ್ಥ, ಪ್ರಸಾದ ವಿನಿಯೋಗ ನೆರವೇರಸಲಾಗುತ್ತದೆ ಎಂದು ದೇವಾಂಗ ಸಂಘ ಹಾಗೂ ದೇವಾಂಗ ಯುವಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.