ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಧುಳಗನವಾಡಿ ಗ್ರಾಮದಲ್ಲಿ ಕಲ್ಯಾಣ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಮಹಿಳಾ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿಯತ್ತು. ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಪೂನಾ ತಂಡ ಪ್ರಥಮ ಸ್ಥಾನವನ್ನು ತನ್ನಗಾಗಿಸಿಕೊಂಡಿದೆ.
ಧುಳಗಣವಾಡಿಯಲ್ಲಿ ಜರುಗಿದ ಫೈನಲ್ ಪಂದ್ಯದ ನೇರಾನೇರ ಸ್ಪರ್ಧೆಯಲ್ಲಿ ಪೂನಾ ತಂಡ ಮೈಸೂರ ತಂಡವನ್ನು 22-24 ಅಂತರದಿಂದ ಸೋಲಿಸಿ ಪೂನಾ ತಂಡ ₹ 25000 ನಗದು ಬಹುಮಾನದೊಂದಿಗೆ ಪ್ರಥಮಸ್ಥಾನದ ಟ್ರೋಪಿಯನ್ನು ಕೂಡ ತಮ್ಮದಾಗಿಸಿಕೊಂಡರು.ಯುವ ಧುರಿಣ ಶಿವಕುಮಾರ ಕಮತೆ ಟ್ರೋಪಿ ನಗದು ಬಹುಮಾನವನ್ನು ವಿತರಿಸಿದರು. ವಿತರಿಸಿ ಮಾತನಾಡಿದ ಅವರು, ಯುವಕ್ರೀಡಾ ಪಟುಗಳು ಕ್ರೀಡೆಯಲ್ಲಿ ಆಸ್ತಕಿಯಿಂದ ಬೆರೆತು ಸದೃಢವಾರಿಬೇಕು. ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಎಲ್ಲರೂ ಮುಂದಾಗಬೇಕೆಂದು ಮನವಿ ಮಾಡಿದರು. ದ್ವಿತೀಯ ಬಹುಮಾನವನ್ನು ಮೈಸೂರು ತಂಡ ಪಡೆದು ₹ 20 ಸಾವಿರ ನಗದನ್ನು ಪಡೆದುಕೊಂಡಿದ್ದು, ತೃತೀಯ ಬಹುಮಾನ ಧಾರವಾಡ ತಂಡ ₹15 ಸಾವಿರ ಹಾಗೂ ಬ್ಯಾಹಟ್ಟಿ ತಂಡ 4ನೇ ಬಹುಮಾನ ₹ 7 ಸಾವಿರ ರೂ. ಪಡೆದುಕೊಂಡರು.ಬಹುಮಾನ ವಿತರಣಾ ಸಮಾರಂಭದಲ್ಲಿ ಅಪ್ಪಾಸಾಹೇಬ ಕಮತೆ, ಚೇತನ ಮಗದುಮ್ಮ,ಶಿವಕುಮಾರ ಕಮತೆ, ಶಿದ್ದಗೌಡಾ ಕಮತೆ, ದೀಲಿಪ ಮಗದುಮ್ಮ ಹಾಗೂ ಜಾತ್ರೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಅಪ್ಪಾಸಾಹೇಬ ಕಮತೆ, ಚೇತನ ಮಗದುಮ್ಮ, ಶಿದ್ದಗೌಡಾ ಕಮತೆ, ದೀಲಿಪ ಮಗದುಮ್ಮ ಉಪಸ್ಥಿತರಿದ್ದರು. ಶಿಕ್ಷಕ ಮಹಾದೇವ ಹಾಲಪ್ಪನವರ ನಿರೂಪಿಸಿ ವಂದಿಸಿದರು.