ಮೂಲ್ಕಿ ರಾಮಕೃಷ್ಣ ಪೂಂಜ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಟ್ರಸ್ಟಿ ಭಾಸ್ಕರ್ ಪೂಂಜ ಸಹಕಾರದೊಂದಿಗೆ ಮೂಲ್ಕಿಯ ಕಾರ್ನಾಡ್ ಪೂಂಜ ವಿಲ್ಲಾದಲ್ಲಿ ನಡೆದ ಅಸಹಾಯಕರಿಗೆ ಸಹಾಯಹಸ್ತ, ವೈದ್ಯಕೀಯ ಚಿಕಿತ್ಸೆಗೆ ನೆರವು ಸಮಾರಂಭ

ಕನ್ನಡಪ್ರಭವಾರ್ತೆ ಮೂಲ್ಕಿ

ಸಮಾಜಗಳ ನಡುವಿನ ಸಂಘರ್ಷದ ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳ ಮೂಲಕ ಸರ್ವ ಧರ್ಮದವರನ್ನು ಒಗ್ಗೂಡಿಸಿ ಸಾಮಾಜಿಕ ಸಹಾಯ ಹಸ್ತ ನೀಡುತ್ತಿರುವುದು ಅಭಿನಂದನೀಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.ಮೂಲ್ಕಿ ರಾಮಕೃಷ್ಣ ಪೂಂಜ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಟ್ರಸ್ಟಿ ಭಾಸ್ಕರ್ ಪೂಂಜ ಸಹಕಾರದೊಂದಿಗೆ ಮೂಲ್ಕಿಯ ಕಾರ್ನಾಡ್ ಪೂಂಜ ವಿಲ್ಲಾದಲ್ಲಿ ನಡೆದ ಅಸಹಾಯಕರಿಗೆ ಸಹಾಯಹಸ್ತ, ವೈದ್ಯಕೀಯ ಚಿಕಿತ್ಸೆಗೆ ನೆರವು ಸಮಾರಂಭದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಂಜಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರವಿಂದ ಪೂಂಜ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮನಸ್ಸು ಹಾಗೂ ಹೃದಯಶ್ರೀಮಂತಿಕೆ ಮೂಲಕ ಕಷ್ಟದಲ್ಲಿರುವವರಿಗೆ ಸಹಕಾರ ನೀಡುವ ಉತ್ತಮ ಕಾರ್ಯ ಟ್ರಸ್ಟ್‌ ಮೂಲಕ ನಡೆಯುತ್ತಿದೆ ಎಂದು ಹೇಳಿದರು.ಈ ಸಂದರ್ಭ ಸುಮಾರು 10 ಲಕ್ಷ ರುಪಾಯಿ ವೆಚ್ಚದಲ್ಲಿ 125 ಮಂದಿಗೆ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ನೀಡಲಾಯಿತು. ಪೂಂಜ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಅಶ್ವಿನಿ ಪೂಂಜಾ, ಅಪೂರ್ವ ಪೂಂಜಾ, ಆದಿತ್ಯ ಪೂಂಜ, ಸಂಜನಾ ಆದಿತ್ಯ ಪೂಂಜ, ಮೂಲ್ಕಿ ನ.ಪಂ. ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಟ್ರಸ್ಟ್ ನ ನಿರ್ದೇಶಕರಾದ ಹರ್ಷರಾಜ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಉದಯ್ ಕುಮಾರ್ ಶೆಟ್ಟಿ ಅಧಿಧನ್, ಸುಭಾಷ್ ಶೆಟ್ಟಿ , ಅಶೋಕ್ ಕುಮಾರ್ ಶೆಟ್ಟಿ, ಸಂಜೀವ ದೇವಾಡಿಗ, ಹೇಮನಾಥ ಅಮೀನ್ ತೋಕೂರು, ಮಾಜಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಮಂಗಳೂರು, ನವೀನ್ ಶೆಟ್ಟಿ ಪೆರ್ಮಾರ್ ಗುತ್ತು, ಶಶೀಂದ್ರ ಸಾಲ್ಯಾನ್, ನಿಶಾಂತ್ ಶೆಟ್ಟಿ ಕಿಲೆಂಜೂರು, ನಿವೃತ್ತ ಉಪನ್ಯಾಸಕ ವೈ.ಎನ್. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಪೂಂಜಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರವಿಂದ ಪೂಂಜ ಸ್ವಾಗತಿಸಿದರು. ಸುನಿಲ್ ಆಳ್ವ ವಂದಿಸಿದರು. ವೈ. ಎನ್. ಸಾಲ್ಯಾನ್ ನಿರೂಪಿಸಿದರು.