ಸಾರಾಂಶ
ಭಾಲ್ಕಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ನಡೆದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಶಿವು ಲೋಖಂಡೆ, ಸೋಮನಾಥಪ್ಪ ಅಷ್ಟೂರೆ, ಶಿವರಾಜ ಮಲ್ಲೇಶಿ, ಸಂತೋಷ ಬಿಜಿ ಪಾಟೀಲ್, ಸಂತೋಷ ಇದ್ದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಬಡವರು, ನಿರ್ಗತಿಕರ ಕಲ್ಯಾಣವಾಗಿಸುವುದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶಿವು ಲೋಖಂಡೆ ಹೇಳಿದರು.ಪಟ್ಟಣದ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ನವರಾತ್ರಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಪರಿಣಾಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವು ವಿಧಾಯಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಬಡಜನರು, ನಿರ್ಗತಿಕರು, ದುರ್ಬಲ ವರ್ಗದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿರುವುದು ಮಾದರಿ ಎನಸಿದೆ ಎಂದು ಹೇಳಿದರು.
ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂತೋಷ ಮಾತನಾಡಿ, ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೂರಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಜನರನ್ನು ಆರ್ಥಿಕ ಮತ್ತು ಸಾಮಾಜಿಕ ಸಶಕ್ತರನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.ಈ ವೇಳೆ ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಸಂತೋಷ ಬಿಜಿ ಪಾಟೀಲ್, ಶಿವರಾಜ ಮಲ್ಲೇಶಿ, ಶೇಖರ್, ಶಿವಾನಂದ, ಲಾಯಪ್ಪ, ಸುರೇಶ್, ಶ್ರೀಕಾಂತ, ಪೀರಪ್ಪ, ಸಬೀನಾ, ಸುಜಾತಾ, ಮಲ್ಲಿಕಾರ್ಜುನ, ಶಿವರಾಜ, ವಿನಯ, ಗುರುರಾಜ, ಜ್ಞಾನೇಶ್ವರ ಸೇರಿದಂತೆ ಹಲವರು ಇದ್ದರು.