ಸಾರಾಂಶ
ಅಧಿಕಾರಿಗಳಿಗೆ ನೀವು ಏನು ಮಾಡುತ್ತಿರೋ ಗೊತ್ತಿಲ್ಲ, ಆದರೆ ತಾಲೂಕಿನ ಜನತೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ತಾಕೀತು ಮಾಡಿದರು.
- ಜಲ್ ಜೀವನ್ ಮಿಷನ್ ಕಳಪೆ ಕಾಮಗಾರಿಫೋಟೋ- 6ಎಂವೈಎಸ್ 72
------ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಜಲ್ ಜೀವನ್ ಮಿಷನ್ ಅಡಿಯಲ್ಲಿ ತಾಲೂಕಿನಾದ್ಯಂತ ಅತ್ಯಂತ ಕಳಪೆ ಕಾಮಗಾರಿ ನಡೆದಿರುವುದರಿಂದ ಗ್ರಾಮಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ, ಕುಡಿಯಲು ನೀರು ಸಿಗುತ್ತಿಲ್ಲ ಎಂದು ಇಒ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.ತಾಲೂಕಿನ ದೊಡ್ಡ ಹೊಸೂರು ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ನೀರಿನ ಸರಬರಾಜು ನಲ್ಲಿ ಗಳನ್ನು ಅಳವಡಿಸಿದ್ದು, ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ, ಗುಂಡಿ ತೆಗೆದ ಹಾಗೆ ಇದೆ ಹಾಗೂ ನೀರಿಗೆ ಮಣ್ಣು ಮಿಶ್ರ ಮಿಶ್ರಣವಾಗುತ್ತಿದೆ ಎಂದು ಗ್ರಾಮಸ್ಥರು ಪಶುಸಂಗೂಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಗೆ ದೂರು ನೀಡಿದರು.
ನಂತರ ಸಚಿವರು ಮಾತನಾಡಿ, ಅಧಿಕಾರಿಗಳಿಗೆ ನೀವು ಏನು ಮಾಡುತ್ತಿರೋ ಗೊತ್ತಿಲ್ಲ, ಆದರೆ ತಾಲೂಕಿನ ಜನತೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು ಎಂದು ತಾಕೀತು ಮಾಡಿದರು.ನಂತರ ಗ್ರಾಮಸ್ಥರು ಇಒ ಸುನಿಲ್ ಕುಮಾರ್ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೃಷ್ಣಮೂರ್ತಿ ಹಾಗೂ ಕೊಪ್ಪ ಪಿಡಿಒ ಸತೀಶ್ ಅವರನ್ನು ಗ್ರಾಮಸ್ಥರು ಸುತ್ತುವರೆದು ಘೇರಾವ್ ಹಾಕಿದರು. ನೀವು ಸರಿಯಾದ ರೀತಿ ಸಮರ್ಪಕವಾಗಿ ನೀರು ಸರಬರಾಜು ಮಾಡಿ ಇಲ್ಲದಿದ್ದರೆ ಗ್ರಾಪಂಗೆ, ಎಂಜಿನಿಯರಿಂಗ್ಕಚೇರಿಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.
ಒಂದು ಗಂಟೆಗಳ ಹೆಚ್ಚು ಕಾಲ ಅಧಿಕಾರಿಗಳನ್ನು ತಡೆಹಿಡಿದ ಗ್ರಾಮಸ್ಥರು, ನಮಗೆ ಎರಡು ದಿನದಲ್ಲಿ ನೀರು ಸರಬರಾಜು ಸರಿ ಮಾಡಿಕೊಡದಿದ್ದರೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.