.ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವೆ ಚಾಲನೆ

| Published : Mar 07 2024, 01:54 AM IST

ಸಾರಾಂಶ

ಬೆಳಗಾವಿ: ಬೆಳಗಾವಿ‌ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದ ವತಿಯಿಂದ ಕುವೆಂಪು ನಗರದ ಚಿಕ್ಕುಬಾಗ್ ಹಾಗೂ ಪಾರ್ವತಿ ಲೇಔಟ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.

ಕುವೆಂಪು ನಗರದ ರಸ್ತೆ, ಉದ್ಯಾನ, ಗಟಾರ, ಯೋಗ ಸೆಂಟರ್ ಹಾಗೂ ಫೇವರ್ಸ್ ಅಳವಡಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಗೀತಾ ಉಸುಲ್ಕರ್, ಪ್ರಿಯಾಂಕಾ ಉಸುಲ್ಕರ್, ಸುನೀತಾ ಉಸುಲ್ಕರ್, ರೇಣುಕಾ ಉಸುಲ್ಕರ್, ಲಕ್ಷ್ಮೀ ಉಸುಲ್ಕರ್, ಮಾಲನ್ ಉಸುಲ್ಕರ್, ನೂತನ್ ಉಸುಲ್ಕರ್, ಮಾಧುರಿ ಬಂಡಾಚೆ, ಸೋನಾಲಿ ಕಿಲ್ಲೇಕರ್, ಭಾರತಿ ಜೈನಕೋಪ್, ರೋಹಿಣಿ ರಾಜಣ್ಣವರ್, ಶೃತಿ ಬಂಡಿವಾಡೇಕರ್, ದೀಪಾ ಅಥಣಿಕರ್, ರೂಪಾ ಪಾಟೀಲ, ಅಶ್ವಿನಿ ಪಾಟೀಲ, ಜಾಕಲಿನ್ ಫರ್ನಾಂಡೀಸ್, ಉಮಾಕಾಂತ ಯರಗಟ್ಟಿ ಮುಂತಾದವರು ಉಪಸ್ಥಿತರಿದ್ದರು.