ಸಾರಾಂಶ
ವಿಜಯಪುರ: ಕಣ್ಣಿಗೆ ಕಾಣುವ ದೇವರು ತಾಯಿ, ಜೀವನದ ಭವಿಷ್ಯ ರೂಪಿಸುವವರು ಗುರುಗಳು. ವಿದ್ಯಾರ್ಥಿಗಳು-ಶಿಕ್ಷಕರ ಸಂಬಂಧ ತಾಯಿ-ಮಕ್ಕಳಂತಿರಬೇಕು ಎಂದು ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.
ವಿಜಯಪುರ: ಕಣ್ಣಿಗೆ ಕಾಣುವ ದೇವರು ತಾಯಿ, ಜೀವನದ ಭವಿಷ್ಯ ರೂಪಿಸುವವರು ಗುರುಗಳು. ವಿದ್ಯಾರ್ಥಿಗಳು-ಶಿಕ್ಷಕರ ಸಂಬಂಧ ತಾಯಿ-ಮಕ್ಕಳಂತಿರಬೇಕು ಎಂದು ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.
ಪ್ರಗತಿ ಆಂಗ್ಲ ಶಾಲೆಯಲ್ಲಿ ೨೦೨೩ -೨೪ನೇ ಶೈಕ್ಷಣಿಕ ವರ್ಷದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿದಿನ ದೇವರಿಗೆ ಕೈ ಮುಗಿದು ಹತ್ತು ನಿಮಿಷ ಧ್ಯಾನ ಮಾಡಿದರೆ ಮನಸ್ಸು ಸ್ಥಿಮಿತವಾಗಿ, ಪ್ರಶಾಂತವಾಗಿರುತ್ತದೆ. ಓದಿದ ಪಾಠಪ್ರವಚನಗಳು ಶಾಶ್ವತವಾಗಿ ಮೆದುಳಿನಲ್ಲಿ ಉಳಿಯುತ್ತದೆ. ಆಯಾ ದಿನದ ಪಾಠವನ್ನು ಅಂದಂದೆ ಅಭ್ಯಾಸ ಮಾಡಬೇಕು ಎಂದರು.ಪ್ರಾಂಶುಪಾಲ ಡಾ.ಎನ್.ನಾಗರಾಜ್ ಮಾತನಾಡಿ, ಪರೀಕ್ಷೆ ಎಂದರೆ ಭಯಪಡದೆ ಎದುರಿಸಬೇಕು. ಅದನ್ನು ಒಂದು ಹಬ್ಬದಂತೆ ಸಂಭ್ರಮಿಸಬೇಕು. ಕಲಿಕೆಯ ಜೊತೆಗೆ ದೇಹದ ವ್ಯಾಯಾಮಕ್ಕೂ ಆದ್ಯತೆ ನೀಡಬೇಕು ಎಂದರು.
ಮುಖ್ಯಶಿಕ್ಷಕ ಜೆ.ಎನ್.ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಚ್.ಶಾಂತಮೂರ್ತಿ, ೨೦೨೩ -೨೪ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿ ವಾಚನ ಮಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ೬ ಮತ್ತು ೭ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಉತ್ತಮ ಪ್ರಯೋಗಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.