ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನಲ್ಲಿ ಜಲಜೀವನ್ ಯೋಜನೆಯ ಕಾಮಗಾರಿಗಳು ಕಳಪೆಯಾಗಿದೆ, ಅನೇಕ ಗ್ರಾಮಗಳಲ್ಲಿ ಗುತ್ತಿಗೆದಾರರು ಅರೆಬರೆ ಕೆಲಸ ಮಾಡಿ ಹೋಗಿದ್ದಾರೆ ಕೆಲವು ಕಡೆ ನೀರು ಪೋಲಾಗುತ್ತಿವೆ ಸಂಬಂಧಿಸಿದ ಇಂಜಿನಿಯರ್ ಗಳು ಇತ್ತ ಗಮನ ಹರಿಸುತ್ತಿಲ್ಲ ಇದು ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಅವರಿಗೆ ದೂರುಗಳ ಸುರಿಮಳೆಗೈದರು.ಅಧ್ಯಕ್ಷರು ಹಾಗೂ ಪಿಡಿಒಗಳ ದೂರಿಗೆ ಸ್ಪಂದಿಸಿ ಸಭೆಯಲ್ಲಿದ್ದ ಜಲ ಜೀವನ್ ಯೋಜನೆಯ ಎಇಇ ಪ್ರಸನ್ನ ಹಾಗೂ ಶಾಖಾಧಿಕಾರಿ ಗಳಿಗೆ 2 ವಾರಗಳ ಗಡವು ನೀಡಿ ಆಗಿರುವ ತೊಂದರೆಗಳನ್ನು ಸರಿಪಡಿಸಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ನಂತರ ಸಭೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಎಇ ಅಮರನಾಥ ಜೈನ ಅವರಿಗೆ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಬೇಕು ಎಂದು ತಾಕೀತು ಮಾಡಿದರು.ಉಪ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಗ್ರಾಪಂ ಸ್ವಂತ ಸಂಪನ್ಮೂಲ ಕ್ರೂಢೀಕರಿಸಬೇಕು, ಗುರಿ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಮುಂದಿನ 4 ತಿಂಗಳಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದರು.
ಕೆಲಸ ಮಾಡಲು ಇಚ್ಛಾಶಕ್ತಿ ಇದ್ದವರು ಮಾತ್ರ ಕೆಲಸದ ಬಗ್ಗೆ ಗಮನ ನೀಡುತ್ತಾರೆ ಕೇವಲ ಮಾಡುತ್ತೀನಿ ಎಂದು ಹೇಳುವುದು ಸರಿಯಲ್ಲ ಮುಂದಿನ ಮೀಟಿಂಗ್ ವೇಳೆಗೆ ವಸೂಲಿ ಆಗದಿದ್ದರೆ ಪರಿಣಾಮ ಕೆಟ್ಟದಾಗುತ್ತದೆ ಕಡಿಮೆ ತೆರಿಗೆ ಸಂಗ್ರಹ ಮಾಡಿದ್ದ ದೊಡ್ಡ ತಕಲವಟ್ಟಿ ಎಸ್.ನೇರಲಕೆರೆ ಅತ್ತಿಮಗ್ಗೆ ಕಾರೇಹಳ್ಳಿ ಕಂಗುವಲ್ಲಿ ಗ್ರಾಪಂ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.ಎಸ್.ನೇರಲಕೆರೆ ಗ್ರಾಪಂ ಅಧ್ಯಕ್ಷ ದೇವರಾಜ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮ ಸಭೆಗಳಲ್ಲಿ ಕೈಗೊಂಡ ನಾವು ಮಾಡಿದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಆಗುತ್ತಿಲ್ಲ ಈಗಾದರೆ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕೈನಡು ಗ್ರಾಪಂ ಅಧ್ಯಕ್ಷ ಪ್ರಸನ್ನ ಕುಮಾರ್ ಗ್ರಾಮಸಭೆ ನರೇಗಾ ಕೆಲಸ ಮಾಡುವುದು ಸುಲಭ ಗ್ರಾಮ ಸಭೆಯಲ್ಲಿ ನಿರ್ಧರಿಸಿದಂತೆ ಕೆಲಸಕ್ಕೆ ಅನುಮೋದನೆ ಮಾಡಿಕೊಡಬೇಕು ಜನರಿಂದ ಗ್ರಾಪಂ ಗಲಾಟೆ ಮಾಡುತ್ತಾರೆ ವೈಯಕ್ತಿಕ ಕೆಲಸಕ್ಕೆ ಅವಕಾಶ ನೀಡಿ ಗ್ರಾಪಂ ಮಟ್ಟದಲ್ಲಿಯೇ ಕೆಲವು ತಾಂತ್ರಿಕ ಕೆಲಸವನ್ನು ಗ್ರಾಪಂ ಮಟ್ಟದಲ್ಲಿಯೇ ಪೂರ್ಣಗೊಳಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.ಕೇವಲ ಮೀಟಿಂಗನಲ್ಲಿ ಹೇಳುತ್ತಾರೆ ಯಾವುದೋ ಕಾರ್ಯರೂಪಕ್ಕೆ ಬರುತ್ತಿಲ್ಲ 22 ಇಲಾಖೆಗಳಿವೆ ಯಾವುದೇ ಇಲಾಖೆಯೊಂದಿಗೆ ಸಹಕಾರ ಇಲ್ಲ ಯಾವುದೇ ಕೆಲಸಕ್ಕೂ ಸರಿಯಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲ ಎಂದರು.
ಉಪ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ನರೇಗಾ ಮಾರ್ಗಸೂಚಿ ಇನ್ನೂ ಬಿಗಿಯಾಗುತ್ತೆ. ಈಗಿನ ಪ್ರಸ್ತುತ ಅವಧಿಯಲ್ಲಿನ ಮಾರ್ಗ ಸೂಚಿಯಂತೆ ಕೆಲಸ ಮಾಡಿ ಪೂರ್ಣಗೊಳಿಸಿ ಗಣಕಯಂತ್ರದ ಕೆಲಸ ವಾಗಿರುವುದರಿಂದ ನಾವು ಯಾವುದೇ ಬದಲಾವಣೆ ಮಾಡಲು ಬರುವುದಿಲ್ಲ ಎಂದು ತಿಳಿಸಿದರು.ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಗಾಯತ್ರೀ, ಯೋಜನಾ ನಿರ್ದೇಶಕಿ ಜಯಲಕ್ಷ್ಮಿ, ತಾಲೂಕಿನ 33 ಗ್ರಾಪಂಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪಿಡಿಒಗಳು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))