ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಪ್ರಪಂಚದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಕೀರ್ತಿಗೆ ಹಾಗೂ ಅಪಕೀರ್ತಿಗೆ ಒಳಗಾಗಿರುವುದು ನಮ್ಮ ಭಾರತ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ನಮ್ಮ ದೇಶದ ಜನಸಂಖ್ಯೆ ೧೪೪ ಕೋಟಿಯಿದ್ದು, ವಿಶ್ವದ ಶೇ.೧೭.೭೬ ಜನಸಂಖ್ಯೆ ಭಾರತದಲ್ಲಿದೆ ಎಂದರು. ಜನಸಂಖ್ಯೆಯ ದುಷ್ಪರಿಣಾಮಗಳಾದ ಬಡತನ, ನಿರುದ್ಯೋಗ, ವಸತಿ, ನೀರು, ವಿದ್ಯುತ್, ಅನಾರೋಗ್ಯ ಇವುಗಳ ಬಗ್ಗೆ ಪಠ್ಯಕ್ರಮಗಳಲ್ಲಿರುವ ವಿಷಯವನ್ನು ವಿದ್ಯಾರ್ಥಿಗಳು ತಿಳಿದುಕೊಂಡು, ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಮುಂದಾಗಬೇಕು, ಜನಸಂಖ್ಯೆ ಗುಣಾತ್ಮಕ ಬೆಳವಣಿಗೆ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕೆಂದರು.
ಬಾಲ್ಯ ವಿವಾಹ ತಡೆಗಟ್ಟಬೇಕುಇತ್ತೀಚಿಗೆ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರು ಹೆಚ್ಚಾಗುತ್ತಿದ್ದಾರೆ, ಶಿಕ್ಷಣ ವಿಲ್ಲದೇ ಇರುವುದು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಲ್ಲದೇ ಇದ್ದಾಗ ತಾಯಿ ಮತ್ತು ಮಗು ಅಪೌಷ್ಠಿಕವಾಗಿರುತ್ತಾರೆ. ಆದ್ದರಿಂದ ಹೆಣ್ಣಿಗೆ ೧೮, ಗಂಡಿಗೆ ೨೧ ವರ್ಷ ವಯಸ್ಸು ವಿವಾಹಕ್ಕೆ ಸೂಕ್ತ ಸಮಯ, ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ೧೦೯೮ ಸಹಾಯವಾಣಿಯಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಡಿಹೆಚ್‌ಒ ಡಾ.ಜಗದೀಶ್.ಎಂ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಂದನ್‌ಕುಮಾರ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಎನ್.ಸಿ. ನಾರಾಯಣಸ್ವಾಮಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ..ವಿ.ನಾರಾಯಣಸ್ವಾಮಿ, ಆರೋಗ್ಯ ಶಿಕ್ಷಣಾದಿಕಾರಿ ಪ್ರೇಮ ಇದ್ದರು.
;Resize=(128,128))
;Resize=(128,128))