ಮಹರ್ಷಿ ಭಗೀರಥರ ಭಾವಚಿತ್ರ ಮೆರವಣಿಗೆ

| Published : May 16 2024, 12:50 AM IST

ಸಾರಾಂಶ

ನಗರದ ಕೆಳಗಡೆ ಉಪ್ಪಾರ ಬೀದಿಯಲ್ಲಿ ಟೌನ್ ಉಪ್ಪಾರ ಸಂಘದ ವತಿಯಿಂದ ಶ್ರೀಮಹರ್ಷಿ ಭಗೀರಥ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಕೆಳಗಡೆ ಉಪ್ಪಾರ ಬೀದಿಯಲ್ಲಿ ಟೌನ್ ಉಪ್ಪಾರ ಸಂಘದ ವತಿಯಿಂದ ಶ್ರೀಮಹರ್ಷಿ ಭಗೀರಥ ಜಯಂತಿಯನ್ನು ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ನಂತರ ತೆರೆದ ವಾಹನದಲ್ಲಿ ಭಗೀರಥರ ಭಾವಚಿತ್ರವಿಟ್ಟು ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಸಂಘದ ಅಧ್ಯಕ್ಷ ರಾಚಶೆಟ್ಟಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿಯು ಸಂಘದ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ಮಹರ್ಷಿ ಭಗೀರಥರ ಆದರ್ಶಗಳನ್ನೂ ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಧರೆಗೆ ಗಂಗೆಯ ತಂದ ಮಹಾಪುರುಷ:

ಸಮುದಾಯದ ಮೂಲ ಪುರುಷರಾದ ಮಹರ್ಷಿ ಭಗೀರಥರು ಕಠಿಣ ತಪಸ್ಸಿನ ಮೂಲಕ ಧರೆಗೆ ಗಂಗೆಯನ್ನು ತಂದ ಮಹಾಪುರುಷರು. ಅವರ ಪ್ರಯತ್ನದ ಹಾದಿಯಲ್ಲಿ ಸಾಗುವ ಮೂಲಕ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡುವ ಮೂಲಕ ಸಹೋದರ ಸಮಾಜಗಳ ರೀತಿಯಲ್ಲಿ ಮುಖ್ಯವಾಹಿನಿಗೆ ಬರುವಂತ ಕೆಲಸವನ್ನು ಸಮುದಾಯದ ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾವಂತರು, ಯುವಕರು ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಟೌನ್ ಉಪ್ಪಾರ ಸಂಘದ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ರಮೇಶ್, ಸಹ ಕಾರ್ಯದರ್ಶಿ ಮಹದೇವಪ್ರಸಾದ್, ಸಂಘಟನಾ ಕಾರ್ಯದರ್ಶಿ ಮಹದೇವ, ಖಜಾಂಚಿ ಕುಮಾರ್, ಕಾರ್ಯಕಾರಿಣಿ ಸಮಿತಿ ಸದಸ್ಯ ಸುರೇಶ್, ರಾಜೇಂದ್ರ, ರಾಜು, ಸುರೇಶ್ ಜಿಮ್, ಮಹದೇವಸ್ವಾಮಿ, ರಾಮುಕುಮಾರ್, ರಮೇಶ್, ಗಿರಿ, ರಾಘವೇಂದ್ರ, ಶಿವು, ಪುಟ್ಟಣ್ಣ ಶಿವಕುಮಾರ್, ಪುನೀತ್ ,ಅಜಯ್, ಗಿರಿ, ಸುರೇಶ್, ರಮೇಶ್ ಇತರರು ಭಾಗವಹಿಸಿದ್ದರು.