ಸಾರಾಂಶ
ವಿವಿಧ ಯೋಜನೆಗಳ ಜನಜಾಗೃತಿ ಅಭಿಯಾನಕ್ಕೆ ಯಾದಗಿರಿ ಅಂಚೆ ವಿಭಾಗದ ಮುಖ್ಯಸ್ಥ ಆರ್.ಹೆಚ್. ಶಿವಾನಂದ ಚಾಲನೆ.
ಕನ್ನಡಪ್ರಭ ವಾರ್ತೆ ಸುರಪುರ
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಚಾರ್ ದಿನ್ ಚಾರ್ ಲಾಕ್ ಯೋಜನೆಯಡಿಯಲ್ಲಿ ಎಂಡಿಜಿಯ ಪೋಸ್ಟ್ ಆಫೀಸ್ ವತಿಯಿಂದ ನಡೆದ ವಿವಿಧ ಯೋಜನೆಗಳ ಜನಜಾಗೃತಿ ಅಭಿಯಾನಕ್ಕೆ ಯಾದಗಿರಿ ಅಂಚೆ ವಿಭಾಗದ ಮುಖ್ಯಸ್ಥ ಆರ್.ಹೆಚ್. ಶಿವಾನಂದ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಪ್ರತಿ ಬಿಪಿಎಂ ಪೋಸ್ಟ್ ಮ್ಯಾನ್, ಎಂಟಿಎಸ್ ಹಾಗೂ ಬಿಪಿಎಂ, ಎಬಿಪಿಎಂ ಅವರು ತಲಾ ಮೂವತ್ತು ಹೊಸ ಖಾತೆಗಳನ್ನು ಮೂರು ದಿನಗಳಲ್ಲಿ ತೆರೆಯಬೇಕು. ಅದರಂತೆ ಸಿಬ್ಬಂದಿಗಳು ಶಕ್ತಿಮೀರಿ ಕಾರ್ಯನಿರ್ವಹಿಸಬೇಕು. ಅಂಚೆ ಯೋಜನೆಗಳು ಜನರ ಜೀವನಕ್ಕೆ ತುಂಬ ಉಪಯೋಗವಾಗಿವೆ. ಆದ್ದರಿಂದ ಅಂಚೆ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸುರಪುರದ ಪೋಸ್ಟ್ ಮಾಸ್ಟರ್ ಕುಪೇಂದ್ರ ವಠಾರ, ಲಕ್ಷ್ಮಣ ಠಾಣಗುಂದಿ, ವಿಶ್ವರಾಧ್ಯ, ಶ್ರೀದೇವಿ ಭಜಂತ್ರಿ, ಸರಸ್ವತಿ, ನೀಲಕಂಠರಾಯ ಗೌಡ, ವೈಜಿನಾಥ ಗೌಡ, ರಾಮನಗೌಡ, ಶಿವಣ್ಣ ಪೂಜಾರಿ ಸೇರಿದಂತೆ ಇತರರಿದ್ದರು.