ಬೇಲೂರು ವೈಡಿಡಿ ಕಾಲೇಜಲ್ಲಿ ಅಂಚೆ ಮತದಾನ: ಸಹಾಯಕ ಚುನಾವಣಾ ಅಧಿಕಾರಿ

| Published : Apr 21 2024, 02:23 AM IST

ಬೇಲೂರು ವೈಡಿಡಿ ಕಾಲೇಜಲ್ಲಿ ಅಂಚೆ ಮತದಾನ: ಸಹಾಯಕ ಚುನಾವಣಾ ಅಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುವ ೧೧೦ ಸಿಬ್ಬಂದಿಗೆ ಇದೇ ಭಾನುವಾರ ೨೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ರ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಂ.ಎನ್. ಮಂಜುನಾಥ್ ಮತ್ತು ತಹಸೀಲ್ದಾರ್ ಮಮತಾ ಎಂ. ತಿಳಿಸಿದರು. ಬೇಲೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತಹಸೀಲ್ದಾರ್ ಮಮತಾ ಮಾಹಿತಿ

ಬೇಲೂರು: ಇಲ್ಲಿಯ ವಿಧಾನಸಭಾ ಕ್ಷೇತ್ರದಲ್ಲಿ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುವ ೧೧೦ ಸಿಬ್ಬಂದಿಗೆ ಇದೇ ಭಾನುವಾರ ೨೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ರ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಂ.ಎನ್. ಮಂಜುನಾಥ್ ಮತ್ತು ತಹಸೀಲ್ದಾರ್ ಮಮತಾ ಎಂ. ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸಿಬ್ಬಂದಿಗೆ ಮಾಹಿತಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವು ಸೇರಿದಂತೆ ಒಟ್ಟು ೧೧೦ ಸಿಬ್ಬಂದಿ ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಪೋಸ್ಟರ್ ಬ್ಯಾಲೆಟ್ ಮೂಲಕ ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಮಾಡುವ ಅವಕಾಶವನ್ನು ಏ.21 ರಂದು ಬೆಳಿಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೆ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೦೦೭೨೫ ಗಂಡು, ಹೆಣ್ಣು ೧೦೦೫೧೦ ಸೇರಿ ೨೦೧೨೩೫ ಮತದಾರರಿದ್ದಾರೆ. ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ೬ ಹೋಬಳಿ ಕೇಂದ್ರಗಳಿಂದ ೨೭೦ ಮತಗಟ್ಟೆಗಳಿದ್ದು ಕ್ರಿಟಿಕಲ್ ಮತಗಟ್ಟೆಗಳ ಸಂಖ್ಯೆ ೮೧, ನಾನ್ ಕ್ರಿಟಿಕಲ್ ಮತಗಟ್ಟೆಗಳು ೧೮೯, ಈ ಬಾರಿ ಚುನಾವಣೆಯಲ್ಲಿ ೯೮೬ ಸಿಬ್ಬಂದಿ ಕೆಲಸ ಮಾಡಲಿದ್ದು ಅಲ್ಲಿಯೇ ಅವರಿಗೆ ಇಡಿಸಿ ಮೂಲಕ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ, ಉಡುಗೊರೆ ಮೂಲಕ ಆಮಿಷ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದರೆ ಕೂಡಲೇ ತಾಲೂಕು ಕಚೇರಿ ಚುನಾವಣಾ ಶಾಖೆ ದೂರವಾಣಿ ಸಂಖ್ಯೆ 08177230800 ಇಲ್ಲಿಗೆ ಮಾಹಿತಿ ನೀಡಬೇಕು. ತಾಲೂಕಿನ ಗಡಿಭಾಗದಲ್ಲಿ ಚನ್ನಾಪುರ ಚೀಕನಹಳ್ಳಿ ಜಾವಗಲ್ ಚೆಕ್ ಪೋಸ್ಟ್ ತೆರಯಲಾಗಿದ್ದು ಇದು ಎಲ್ಲಾ ರೀತಿಯ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಬೇಲೂರು ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿ ಸುದ್ದಿಗಾರರೊಂದಿಗೆ ಸಹಾಯಕ ಚುನಾವಣಾ ಅಧಿಕಾರಿ ಎಂ.ಎನ್. ಮಂಜುನಾಥ್ ಮತ್ತು ತಹಸೀಲ್ದಾರ್ ಮಮತಾ ಎಂ. ತಿಳಿಸಿದರು.