ಸಾರಾಂಶ
ಚನ್ನಗಿರಿ ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ತಾಲೂಕಿನ ಹರೋನಹಳ್ಳಿ ಗ್ರಾಮದ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಅತಿ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದ ಸಾಧನೆ ಪರಿಗಣಿಸಿ, ಶುಕ್ರವಾರ ಇಲಾಖೆ ಸಿಬ್ಬಂದಿ ಅಭಿನಂದಿಸಿ, ಗೌರವಿಸಿದರು.
ಚನ್ನಗಿರಿ: ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ತಾಲೂಕಿನ ಹರೋನಹಳ್ಳಿ ಗ್ರಾಮದ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಅತಿ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದ ಸಾಧನೆ ಪರಿಗಣಿಸಿ, ಶುಕ್ರವಾರ ಇಲಾಖೆ ಸಿಬ್ಬಂದಿ ಅಭಿನಂದಿಸಿ, ಗೌರವಿಸಿದರು.
ಎಚ್.ಬಸವರಾಜಪ್ಪ 2023-2024ನೇ ಸಾಲಿನಲ್ಲಿ ದಕ್ಷಿಣ ಕರ್ನಾಟಕ ಅಂಚೆ ವಲಯಮಟ್ಟದಲ್ಲಿ ಅತಿ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದು, ಪ್ರಥಮ ಸ್ಥಾನ ಗಳಿಸಿದ್ದರು. ಈ ಕಾರಣಕ್ಕೆ ಮಂಗಳೂರಿನ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಅಂಚೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರಕುಮಾರ್ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.ಈ ಹಿನ್ನೆಲೆ ಚನ್ನಗಿರಿ ಮುಖ್ಯ ಅಂಚೆ ಕಚೇರಿಯ ಸಿಬ್ಬಂದಿ ಶುಕ್ರವಾರ ಪಟ್ಟಣದ ಅಂಚೆ ಕಚೇರಿಯಲ್ಲಿ ಹರೋನಹಳ್ಳಿ ಗ್ರಾಮದ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭ ಅಂಚೆ ಉಪ ವಿಭಾಗದ ನಿರೀಕ್ಷಕ ಜೆ.ಡಿ.ಸ್ವಾಮಿ, ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಂದ್ರಪ್ಪ, ಸಿಬ್ಬಂದಿ ತೀರ್ಥಪ್ರಕಾಶ್, ಸುಪ್ರೀತ್, ನಾಗರಾಜ್, ಕರಿಬಸಪ್ಪ, ಮುಬೀನ, ಶೋಭಾ ಹಾಜರಿದ್ದರು.- - - -19ಕೆಸಿಎನ್‌ಜಿ2:
ಚನ್ನಗಿರಿ ಪಟ್ಟಣದ ಅಂಚೆ ಕಚೇರಿಯಲ್ಲಿ ಹರೋನಹಳ್ಳಿ ಗ್ರಾಮದ ಉಪ ಅಂಚೇ ಕಚೇರಿಯ ಅಂಚೆ ಪಾಲಕ ಎಚ್.ಬಸವರಾಜಪ್ಪ ಅವರನ್ನು ಗೌರವಿಸಲಾಯಿತು.