ಡೈರಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ಚುನಾವಣೆ ಮುಂದೂಡಿಕೆ:ಚುನಾವಣಾಧಿಕಾರಿಗಳ ವಿರುದ್ಧ ನಿರ್ದೇಶಕರು, ಗ್ರಾಮಸ್ಥರೊಂದಿಗೆ ಪ್ರತಿಭಟನೆ

| Published : Jan 07 2025, 12:16 AM IST

ಡೈರಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ಚುನಾವಣೆ ಮುಂದೂಡಿಕೆ:ಚುನಾವಣಾಧಿಕಾರಿಗಳ ವಿರುದ್ಧ ನಿರ್ದೇಶಕರು, ಗ್ರಾಮಸ್ಥರೊಂದಿಗೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಆನಂತರ ಜನವರಿ 6 ರಂದು ನಡೆಯಬೇಕಿದ್ದ ಅಧ್ಯಕ್ಷ, ಪದಾಧಿಕಾರಿಗಳ ಚುನಾವಣೆಯನ್ನು ಯುಗಾದಿಗೆ ಮುಂದೂಡಲಾಗಿತ್ತು. ಆದರೆ, ಉಪನಿಬಂಧಕರು ಚುನಾವಣೆ ಅಧಿಕಾರಿಗಳ ಅನಾರೋಗ್ಯದ ನೆಪ ನೀಡಿ ಚುನಾವಣೆ ಮುಂದೂಡಿರುವುದು ಸರಿಯಲ್ಲ ಎಂದು ಅಪ್ಪು ಪಿ ಗೌಡ ಆಕ್ಷೇಪ ವ್ಯಕ್ತಪಡಿಸಿ, ಮುಂದಿನ ಏಳು ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಚುನಾವಣಾ ದಿನಾಂಕ ನಿಗದಿ ಮಾಡಿ ಚುನಾವಣೆ ನಡೆಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ವೈದ್ಯನಾಥಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಚುನಾವಣೆಯನ್ನು ಚುನಾವಣಾ ಅಧಿಕಾರಿಗಳು ಅನಾರೋಗ್ಯದ ನೆಪವೊಡ್ಡಿ ಮುಂದೂಡಿರುವ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರ ಕ್ರಮ ವಿರೋಧಿಸಿ ಸಂಘದ ನಿರ್ದೇಶಕರು, ಗ್ರಾಮಸ್ಥರ ಬೆಂಬಲದೊಂದಿಗೆ ಸಂಘದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಪ್ಪು ಪಿ.ಗೌಡ ನೇತೃತ್ವದಲ್ಲಿ ನಿರ್ದೇಶಕರು ದಿಢೀರ್ ಪ್ರತಿಭಟನೆಗಿಳಿದು ಅನಾರೋಗ್ಯದ ನೆಪದಲ್ಲಿ ಸೋಮವಾರ ನಿಗದಿಯಾಗಿದ್ದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆಯನ್ನು ರಾಜಕೀಯ ಒತ್ತಡಕ್ಕೆ ಒಳಗಾಗಿ ಚುನಾವಣಾಧಿಕಾರಿಗಳು, ಸಹಕಾರ ಸಂಘಗಳ ಉಪನಿಬಂಧಕರು ಮುಂದೂಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮದ ಡೇರಿ ನಿರ್ದೇಶಕರ ಚುನಾವಣೆ ಮುನ್ನ ನಡೆದ ಸರ್ವ ಸದಸ್ಯರ ಸಭೆಯಲ್ಲಿ 275 ಸದಸ್ಯರ ಪೈಕಿ ಕೇವಲ 76 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು . ಈ ಬಗ್ಗೆ ಹೈಕೋರ್ಟ್ ಕಳೆದ ಡಿ.22ರಂದು ಆದೇಶ ನೀಡಿ ನ.5ರಂದು ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ಆದೇಶ ನೀಡಿತ್ತು. ಅದರಂತೆ ಚುನಾವಣೆ ನಡೆದು 7 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಆನಂತರ ಜನವರಿ 6 ರಂದು ನಡೆಯಬೇಕಿದ್ದ ಅಧ್ಯಕ್ಷ, ಪದಾಧಿಕಾರಿಗಳ ಚುನಾವಣೆಯನ್ನು ಯುಗಾದಿಗೆ ಮುಂದೂಡಲಾಗಿತ್ತು. ಆದರೆ, ಉಪನಿಬಂಧಕರು ಚುನಾವಣೆ ಅಧಿಕಾರಿಗಳ ಅನಾರೋಗ್ಯದ ನೆಪ ನೀಡಿ ಚುನಾವಣೆ ಮುಂದೂಡಿರುವುದು ಸರಿಯಲ್ಲ ಎಂದು ಅಪ್ಪು ಪಿ ಗೌಡ ಆಕ್ಷೇಪ ವ್ಯಕ್ತಪಡಿಸಿ, ಮುಂದಿನ ಏಳು ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಚುನಾವಣಾ ದಿನಾಂಕ ನಿಗದಿ ಮಾಡಿ ಚುನಾವಣೆ ನಡೆಸುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ನಿರ್ದೇಶಕರಾದ ಸಿದ್ದಪ್ಪ, ವಿ.ಕೆ.ನಾಣಯ್ಯ, ವಿ.ಎನ್.ಕೃಷ್ಣ, ಸುರೇಶ, ವಿ.ಎ.ನಾರಾಯಣ, ವಿಶಾಲ, ರತ್ನಮ್ಮ, ಶಂಕರ್, ಮುಖಂಡರಾದ ವಿ.ಟಿ.ರಾಜಣ್ಣ, ಕೃಷ್ಣ, ಸಕಲೇಶ, ವಿ.ಟಿ.ಪ್ರಕಾಶ, ಪುಟ್ಟೇಗೌಡ ಮತ್ತಿತರರು ಭಾಗವಹಿಸಿದ್ದರು.