ಪ್ಲಾಸ್ಟಿಕ್ ಹಾವಳಿಯಿಂದ ಕುಂಬಾರಿಕೆ ಕಣ್ಮರೆ: ಶಾಸಕ ಸಿ.ಸಿ. ಪಾಟೀಲ

| Published : Oct 20 2025, 01:04 AM IST

ಸಾರಾಂಶ

ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಕಟ್ಟಡ, ಕೋಣೆಗಳನ್ನು ತರಬೇತಿ ಕಾರ್ಯಾಗಾರಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಿದ್ಧಗೊಳಿಸಬೇಕು.

ನರಗುಂದ: ಚಿಕ್ಕದಾದ ಕುಂಬಾರ ಸಮಾಜವು ಸಮಾಜಕ್ಕೆ ಆರೋಗ್ಯಕರವಾದ ನಿತ್ಯ ಬಳಕೆ ವಸ್ತುಗಳನ್ನು ಸಿದ್ಧಪಡಿಸುತ್ತಿದೆ. ಆದರೆ ಆಧುನಿಕ ಯುಗದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಹಾವಳಿಯಿಂದ ಕುಂಬಾರಿಕೆ ಪರಿಕರಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡಿ ಕರಕುಶಲ ತರಬೇತಿಗೆ ಸಿದ್ಧಗೊಳಿಸುವಂತೆ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಭಾನುವಾರ ಪಟ್ಟಣದ ಸರಸ್ವತಿ ನಗರದ ಹತ್ತಿರವಿರುವ ಸಾಯಿ ನಗರದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ₹5 ಲಕ್ಷ ಅನುದಾನದಲ್ಲಿ ಸರ್ವಜ್ಞ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಕಟ್ಟಡ, ಕೋಣೆಗಳನ್ನು ತರಬೇತಿ ಕಾರ್ಯಾಗಾರಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಿದ್ಧಗೊಳಿಸಬೇಕು. ಜತೆಗೆ ಸಾರ್ವಜನಿಕ ಸಭೆ, ಸಮಾರಂಭಕ್ಕೆ ಉಪಯೋಗ ಆಗುವಂತಿರಬೇಕು ಎಂದರು.ಸರ್ವಜ್ಞ ಕನ್ನಡ ವಚನಕಾರರಲ್ಲಿ ಅಗ್ರಗಣ್ಯರಾಗಿದ್ದು, ಆದರೆ ಅವರು ಸಾಹಿತಿ, ವಿದ್ವಾಂಸರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಅಧ್ಯಯನ ನಡೆದು ಪ್ರಚಾರಗೊಂಡು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದರು.ಈಗಾಗಲೇ ₹5 ಲಕ್ಷ ಅನುದಾನ ನೀಡಲಾಗಿದೆ. ಹೆಚ್ಚುವರಿಯಾಗಿ ₹15 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ನರಗುಂದ ಬಂಡಾಯದ ನೆಲದಲ್ಲಿ 50 ವರ್ಷಗಳ ಹಿಂದೆಯೇ ಸರ್ವಜ್ಞ ವೃತ್ತ ಸ್ಥಾಪಿಸುವ ಮೂಲಕ ಅವರ ಬಗ್ಗೆ ಹೆಮ್ಮೆಯಿದೆ. ಅವರ ಸಾಹಿತ್ಯ ಇಲ್ಲಿ ಪ್ರತಿಯೊಬ್ಬರ ಬಾಯಲ್ಲಿ ನಲಿದಾಡುತ್ತಿದೆ. ಅವರ ಸಮಾಜವಾದ ಕುಂಬಾರ ಸಮಾಜದ ಕೊಡುಗೆ ಸಮಾಜಕ್ಕೆ ಅಪಾರ ಎಂದರು.

ಸಮಾಜದ ಅಧ್ಯಕ್ಷ ವೈ.ವೈ. ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಬಿ.ವಿ. ಚಕ್ರಸಾಲಿ, ಗುರುನಾಥ ಆದೆಪ್ಪನವರ, ಉಮೇಶಗೌಡ ಪಾಟೀಲ, ಬಸವರಾಜ ಕುಂಬಾರ, ನಾಗರಾಜ ನೆಗಳೂರ, ಚಂದ್ರು ದಂಡಿನ, ಶಿವಾನಂದ ಮುತ್ತವಾಡ, ಪ್ರಕಾಶ ಪಟ್ಟಣಶೆಟ್ಟಿ, ಹಸನ ನವದಿ, ದೇವಣ್ಣ ಕಲಾಲ, ಅನೀಲ ಧರಿಯಣ್ಣವರ, ಉಮೇಶ ಯಳ್ಳೂರ, ಚನ್ನಯ್ಯ ಸಂಗಳಮಠ, ಸುರೇಶ ಕುಂಬಾರ ಹಸನ್ ನವದಿ, ಪ್ರಕಾಶ ಪಟ್ಟಣಶೆಟ್ಟಿ, ಕೆ.ಎಸ್. ದೊಡ್ಡಮನಿ, ಬಸವರಾಜ ಚಕ್ರಸಾಲಿ ಇದ್ದರು.