ಸಾರಾಂಶ
ಉತ್ಖನನದ ವೇಳೆಯಲ್ಲಿ ವಿಜಯನಗರ ಕಾಲಕ್ಕೆ ಸೇರಿದ ಮಡಿಕೆ ಚೂರುಗಳು ಪತ್ತೆಯಾಗಿವೆ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಪಾನ್ ಸುಪಾರಿ ಬಜಾರ್‌ನಲ್ಲಿ ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿರುವ ಉತ್ಖನನದ ವೇಳೆಯಲ್ಲಿ ವಿಜಯನಗರ ಕಾಲಕ್ಕೆ ಸೇರಿದ ಮಡಿಕೆ ಚೂರುಗಳು ಪತ್ತೆಯಾಗಿವೆ.
ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಹಂಪಿ ಉತ್ಸವ ನಡೆಸಲು ಜಿಲ್ಲಾಡಳಿತ ಹಾಗೂ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲೇ ಈಗ ಈ ಸಾಮ್ರಾಜ್ಯಕ್ಕೆ ಸೇರಿದ ಅವಶೇಷಗಳು ಪತ್ತೆಯಾಗುತ್ತಿವೆ. ಹಂಪಿ ನೆಲದ ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆ ಉತ್ಖನನ ಕಾರ್ಯ ಕೈಗೊಂಡಿದ್ದು, ಆಗಿನ ಕಾಲಕ್ಕೆ ಸೇರಿದ ಮಡಿಕೆ ಚೂರುಗಳು ಪತ್ತೆಯಾಗಿವೆ. ಈ ಅವಶೇಷಗಳ ಬಗ್ಗೆ ಅಧ್ಯಯನ ನಡೆಸಲು ಪುರಾತತ್ವ ಇಲಾಖೆ ಮುಂದಾಗಿದೆ.ಹಂಪಿಯಲ್ಲಿ ಕಳೆದ ಕೆಲ ವರ್ಷಗಳಿಂದ ಉತ್ಖನನ ನಡೆಸಲಾಗಿಲ್ಲ. ಈಗ ಮತ್ತೆ ಪುರಾತತ್ವ ಇಲಾಖೆ ಪಾನ್ ಸುಪಾರಿ ಬಜಾರ್‌ನಲ್ಲಿ ಉತ್ಖನನ ಕಾರ್ಯ ಕೈಗೆತ್ತಿಕೊಂಡಿದೆ. ಈ ವೇಳೆ ಮಡಿಕೆ ಚೂರುಗಳು ದೊರೆತಿವೆ.
ಹಂಪಿಯಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಈಗ ದೊರೆತಿರುವ ಮಡಿಕೆ ಚೂರುಗಳ ಬಗ್ಗೆ ಅಧ್ಯಯನ ನಡೆಸಲು ಪುರಾತತ್ವ ಇಲಾಖೆಗೆ ಸೂಚಿಸಲಾಗುವುದು. ತಜ್ಞರು ಹಾಗೂ ಇತಿಹಾಸಕಾರರು ಅಧ್ಯಯನ ನಡೆಸಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಇನ್ನಷ್ಟು ಕಟ್ಟಿಕೊಡಲು ಉತ್ಖನನ ಕಾರ್ಯ ಸಹಕಾರಿ ಆಗಲಿದೆ ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.