ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಕುಂಬಾರ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು. ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.ಪಟ್ಟಣದ ಶ್ರೀ ರಾಮ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕುಂಬಾರ ಸಮುದಾಯದ ಜನಜಾಗೃತಿ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸಿದ್ದರಾಮಯ್ಯನ ಹಾಗೂ ಕೆ. ವೆಂಕಟೇಶ್ ಅವರು ಹಿಂದುಳಿದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ಕುಂಬಾರ ಸಮಾಜದ ಬಗ್ಗೆ ಅವರಿಗೆ ಹೆಚ್ಚಿನ ಕಳಕಳಿ ಮತ್ತು ಅಭಿಮಾನವಿದೆ. ತಾಲೂಕಿನಲ್ಲಿ ವಾಸವಾಗಿರುವ ಕುಂಬಾರ ಸಮಾಜದವರಿಗೆ ಗ್ರಾಮಾಂತರ ಪ್ರದೇಶದಗಳಲ್ಲಿ ಸಮುದಾಯ ಭವನ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ, ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಿಕೊಳ್ಳಲು 20 ಗುಂಟೆ ಜಾಗ ನೀಡಬೇಕು, ಈಗಿರುವ ಸ್ಮಶಾನಕ್ಕೆ ತಂತಿಬೇಲಿ ವ್ಯವಸ್ಥೆ ಹಾಗೂ ಶೆಡ್ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ನಡೆಯುವ ಸಮಾವೇಶಕ್ಕೆ ನಮ್ಮ ತಂದೆ ಕೆ. ವೆಂಕಟೇಶ್ ಅವರೊಂದಿಗೆ ಚರ್ಚಿಸಿ ಅಗತ್ಯ ಸಹಕಾರ ಮತ್ತು ನೆರವು ನೀಡಲಾಗುವುದು ಎಂದರು.ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರಕಾಶ್ ಮಾತನಾಡಿ, ಅವಕಾಶ ವಂಚಿತರ ಪರವಾಗಿ ಸರ್ಕಾರ ನಿಲ್ಲಬೇಕು, ಆದರೆ ಲಕ್ಷ್ಮಿ ಸಾಗರ್ ಹೊರತು ಪಡಿಸಿ ಈ ಸಮಾಜದ ಬೇರೊಬ್ಬರು ರಾಜಕೀಯ ಸ್ಥಾನಮಾನ ಪಡೆಯಲು ಯಾವ ಪಕ್ಷಗಳು ಮನಸ್ಸು ಮಾಡಿಲ್ಲ, ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದಕ್ಕಾಗಿ ಇರುವ ವಿಧಾನ ಪರಿಷತ್ ಹಾಗೂ ನಿಗಮ ಮಂಡಲಿಗಳು ಹಣವಂತರು ಹಾಗೂ ಬಲಾಢ್ಯರಿಗೆ ಮಾರಾಟವಾಗುತ್ತಿವೆ, ಹೀಗಿರುವಾಗ ನೊಂದ ಸಮಾಜಗಳು ತಮ್ಮ ಧ್ವನಿಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ವಿಷಾದಿಸಿದರು.ತಾಲೂಕು ಅಧ್ಯಕ್ಷ ಸೋಮಶೇಖರ್, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಡಿ. ಗಣೇಶ್, ಜಿಲ್ಲಾ ಕುಂಬಾರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ವೆಂಕಟೇಶ್, ಮೈಸೂರು ತಾಲೂಕು ಅಧ್ಯಕ್ಷ ಬಾಲಕೃಷ್ಣ, ತಾಲೂಕು ಗೌರವಾಧ್ಯಕ್ಷ ಮಹೇಶ್ ಮಾತನಾಡಿದರು.ಟೌನ್ ಸಂಘದ ಅಧ್ಯಕ್ಷ ರಾಮಣ್ಣ, ತಾಲೂಕು ಕಾರ್ಯದರ್ಶಿ ಉಪಾಧ್ಯಕ್ಷ ರಾಮಚಂದ್ರ, ಸ್ವಾಮಿಶೆಟ್ಟಿ, ಖಜಾಂಚಿ ರಮೇಶ್, ಮಾದಶೆಟ್ಟಿ, ನಾಗರಾಜ್, ಅರುಣ್, ಸಣ್ಣಶೆಟ್ಟಿ, ನೌಕರರ ಸಂಘದ ಜೈ ಮಾರುತಿ ಯುವಕರ ಸಂಘದ ಸುರೇಶ್, ಮುಖಂಡರಾದ ಪ್ರಭು, ಬಸವಶೆಟ್ಟಿ, ವೀರಭಧ್ರಶೆಟ್ಟಿ, ವಿಷ್ಣುವರ್ಧನ್, ರಾಜಣ್ಣ, ರಾಮಚಂದ್ರ, ವೆಂಕಟೇಶ್, ಪ್ರಸನ್ನ, ಜಗದೀಶ್, ಲೋಕೇಶ್, ಮಂಜುನಾಥ್, ವಿನಾಯಕ ಯುವಕರ ಸಂಘ, ಕೊಣಸೂರು ಅಂಕನಾಥೇಶ್ವರ ಯುವಕರ ಸಂಘ, ಭ್ಯಾಲಮ್ಮತಾಯಿ ಕುಂಬಾರ ಯುವಕರ ಸಂಘ, ಮಾಕೋಡು ಅಂಕನಾಥೇಶ್ವರ ಕುಂಬಾರ ಯುವಕರ ಸಂಘದ ಪದಾಧಿಕಾರಿಗಳು ಇದ್ದರು.