ಹುಬ್ಬಳ್ಳಿ:

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಶಾಸಕ ಮಹೇಶ ಟೆಂಗಿನಕಾಯಿ ಅವರು ತಮ್ಮ ಜನ್ಮದಿನದಂಗವಾಗಿ ಪೌರಕಾರ್ಮಿಕರು, ಪವರ್‌ಮನ್‌ಗಳ ಪಾದಪೂಜೆ ಮಾಡಿದರು.

ಶಾಸಕರ ಅಭಿಮಾನಿ ಬಳಗ ಹಾಗೂ ರಾಜೇಶ್ವರಿ ಪ್ರಾಪರ್ಟಿಸ್‌ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 300 ಪೌರಕಾರ್ಮಿಕರು ಹಾಗೂ ಪವರ್‌ಮನ್‌ಗಳ ಪಾದಪೂಜೆ ಮಾಡಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಪೌರಕಾರ್ಮಿಕರು ಒಂದು ದಿನ ಕೆಲಸ ಬಿಟ್ಟರೆ ನಗರದ ಚಿತ್ರಣವೇ ಅಹೋಮಯವಾಗುತ್ತದೆ. ಅದೇ ರೀತಿ ಮಳೆ, ಗಾಳಿ, ಚಳಿ ಎನ್ನದೆ ಪವರ್‌ಮನ್‌ಗಳು ಎಲ್ಲರಿಗೂ ಬೆಳಕು ನೀಡುತ್ತಾರೆ. ಎಂತಹ ಸಂಕಷ್ಟದ ಸಂದರ್ಭದಲ್ಲೂ ಎದೆಗುಂದದೆ ಕಾರ್ಯನಿರ್ವಹಿಸುತ್ತಾರೆ ಎಂದರು.

ಶಾಸಕ ಮಹೇಶ ಟೆoಗಿನಕಾಯಿ ಮಾತನಾಡಿ, ಪೌರಕಾರ್ಮಿಕರು ಹಾಗೂ ಪವರ್‌ಮನ್‌ಗಳ ಶ್ರಮಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.


ಮೂರುಸಾವಿರ ಮಠದ ಶ್ರೀಗುರುಸಿದ್ಧರಾಜಯೋಗೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿಪ ಸದಸ್ಯ ಲಿಂಗರಾಜ್ ಪಾಟೀಲ್, ಮೇಯರ್‌ ಜ್ಯೋತಿ ಪಾಟೀಲ್, ಉಪಮೇಯರ್‌ ಸಂತೋಷ ಚವ್ಹಾಣ, ರಾಜು ಕಾಳಿ, ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ಚಂದ್ರಿಕಾ ಮೇಸ್ತ್ರಿ, ರೂಪಾ ಶೆಟ್ಟಿ, ಅಕ್ಕಮ್ಮ ಹೆಗಡೆ ಉಪಸ್ಥಿತರಿದ್ದರು.