ವಿದ್ಯುತ್ ಮಾರ್ಗ ಚಾಲನೆ: ಎಚ್ಚರಿಕೆ ವಹಿಸಲು ಸೂಚನೆ

| Published : Jan 23 2025, 12:46 AM IST

ಸಾರಾಂಶ

ಮೈಸೂರು ತಾಲೂಕು ಉದ್ಬೂರು (ಡಿ.ಸಾಲುಂಡಿ) ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರಕ್ಕೆ ಉದ್ದೇಶಿಸಿ ಹಾಲಿ ಇರುವ ಕಡಕೊಳ ಜಯಪುರ ಮಾರ್ಗದಿಂದ ಉದ್ದೇಶಿತ ಸುಮಾರು 2.999 ಕಿ.ಮೀ. ವಿದ್ಯುತ್ ಲಿಲೋ ಮಾರ್ಗವನ್ನು ಜ.27ರಿಂದ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ಉದ್ಬೂರು (ಡಿ.ಸಾಲುಂಡಿ) ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರಕ್ಕೆ ಉದ್ದೇಶಿಸಿ ಹಾಲಿ ಇರುವ ಕಡಕೊಳ ಜಯಪುರ ಮಾರ್ಗದಿಂದ ಉದ್ದೇಶಿತ ಸುಮಾರು 2.999 ಕಿ.ಮೀ. ವಿದ್ಯುತ್ ಲಿಲೋ ಮಾರ್ಗವನ್ನು ಜ.27ರಿಂದ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ.

ಸದರಿ ಜೋಡಿ ವಿದ್ಯುತ್ ಮಾರ್ಗವು ಸುಮಾರು 2.999 ಕಿ.ಮೀ ವಿಸ್ತಾರಗೊಂಡಿದರಿoದ ಕಡಕೊಳ ಜಯಪುರ ನಗರ ವಿದ್ಯುತ್ ಮಾರ್ಗದಿಂದ ಸಂಪರ್ಕಗೊoಡು ಉದ್ಬೂರು (ಡಿ.ಸಾಲುಂಡಿ), ಜಯಪುರ, ತರೀಪುರ, ಕಲ್ಲಹಳ್ಳಿ ಮತ್ತು ದನಗಳ್ಳಿ ಗ್ರಾಮಗಳ ಎಲ್ಲೆಯಲ್ಲಿ ಹಾದು ಹೋಗಿ ನೂತನವಾಗಿ ನಿರ್ಮಾಣವಾಗಿರುವ ಉದ್ಬೂರು (ಡಿ.ಸಾಲುಂಡಿ) ವಿದ್ಯುತ್ ವಿತರಣಾ ಕೇಂದ್ರಕ್ಕೆ ಪ್ರವರಿಸಲಾಗುತ್ತದೆ.

ಆದ್ದರಿಂದ ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲೀ, ಲೋಹದ ಪಟ್ಟಿಯನ್ನು ತೆಗೆಯುವುದರಲ್ಲಿ, ಗೋಪುರಗಳನ್ನು ಹತ್ತುವುದಾಗಲಿ ತಂತಿಗಳನ್ನು ಮುಟ್ಟುವುದಾಗಲೀ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲೀ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದವುಗಳನ್ನು ಎಸೆಯುವುದಾಗಲೀ ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲೀ ಮಾಡುವುದು ತುಂಬಾ ಅಪಾಯಕಾರಿಯಾಗಿರುತ್ತದೆ ಹಾಗೂ ಪ್ರಾಣ ಹಾನಿಯಾಗುತ್ತದೆಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಲಾಗುತ್ತದೆ.

ಈ ಸೂಚನೆಯನ್ನು ಉಲ್ಲಂಗಿಸಿದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣ ಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರರೆಲ್ಲ ಎಂದು ಕವಿಪ್ರನಿನಿ., ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ತಿಳಿಸಿದ್ದಾರೆ.ನಾಳೆಯಿಂದ ರೇಷ್ಮೆ ಉದ್ಯಮದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ಸಿ.ಎಸ್.ಬಿ.ಸಿ, ಎಸ್.ಆರ್.ಐ ಮೈಸೂರಿನಲ್ಲಿ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬoದಿಸಿದoತೆ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜ. 24 ರಂದು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ, ನವದೆಹಲಿಯ ಸಹಯೋಗದೊಂದಿಗೆ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದೆ. ಈ ಶಿಬಿರದಲ್ಲಿ, ಇಥಿಯೋಪಿಯಾ, ಘಾನಾ, ಫಿಲಿಪೈನ್ಸ್, ಉಗಾಂಡಾ, ಥೈಲ್ಯಾಂಡ್, ರೊಮೇನಿಯಾ, ದಕ್ಷಿಣ ಸುಡಾನ್ ದೇಶಗಳಿಂದ ಸುಮಾರು 22 ಅಭ್ಯರ್ಥಿಗಳು ಭಾಗವಹಿಸುವುದರಿಂದ ತರಬೇತಿ ಕಾರ್ಯಕ್ರಮವನ್ನು ನಾಲ್ಕು ವಾರಗಳವರೆಗೆ (ಜನವರಿ 23 ರಿಂದ 19 ಫೆಬ್ರವರಿಯವರೆಗೆ) ನಡೆಯಲಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿಗೆ ಸಂಬoಧಿಸಿದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ಅಭಿವೃದ್ಧಿ ಪಡಿಸಿರುವ ಹೊಸ ಕೌಶಲ್ಯಗಳು ಮತ್ತು ತಾಂತ್ರಿಕತೆಗಳ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಮತ್ತು ರೇಷ್ಮೆ ಕೃಷಿ ಪ್ರಗತಿಪರ ರೈತರು ರೇಷ್ಮೆ ಕೃಷಿಗೆ ಸಂಬoಧಿಸಿದ ಘಟಕಗಳಿಗೆ ಭೇಟಿ ನೀಡುವರು.

ಈ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಅಂತರಾಷ್ಟ್ರೀಯ ರೇಷ್ಮೆ ಆಯೋಗದ ಕೇಂದ್ರ ರೇಷ್ಮೆ ಮಂಡಳಿ ಮತ್ತು ಮಹಾ ಕಾರ್ಯದರ್ಶಿ, ಐ. ಎಸ್. ಎಸ್ ನ ಸದಸ್ಯ ಕಾರ್ಯದರ್ಶಿಯಾದ ಪಿ. ಶಿವಕುಮಾರ್, ಅವರು ಉದ್ಘಾಟಿಸಲಿದ್ದಾರೆ.

ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್. ಗಾಂಧಿದಾಸ್, ಹಾಗೂ ಮುಖ್ಯಸ್ಥರಾದ ಪದ್ಮನಾವ ನಾಯಕ್, ವಿಜ್ಞಾನಿಗಳಾದ ಡಾ. ಆರ್. ಮೀನಾಲ್ ಡಿ, ಮತ್ತು ತರಬೇತಿ ವಿಭಾಗ ಹಾಗೂ ಸುಮಾರು 150 ಕ್ಕೂ ಹೆಚ್ಚು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರು ಯಲ್ಲಿ ತಿಳಿಸಿದ್ದಾರೆ.

ಕಡಕೊಳ ಪಪಂ: ನಾಳೆ ಆಯವ್ಯಯ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಮೈಸೂರು,ಕಡಕೊಳ ಪಟ್ಟಣ ಪಂಚಾಯ್ತಿ ಕಾರ್ಯಾಲಯದ ವತಿಯಿಂದ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಜ. 24 ರಂದು ಬೆಳಗ್ಗೆ 11 ಗಂಟೆಗೆ ಕಡಕೊಳ ಪಟ್ಟಣದ ಪಂಚಾಯಿತಿಯ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಕಡಕೊಳ ಪಟ್ಟಣದ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗ್ರಾ. ಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ನಾಮ ನಿರ್ದೇಶಿತ ಸದಸ್ಯರು ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಎನ್ಜಿಒ ಹಾಗೂ ಸ್ವಸಹಾಯ ಸಂಘದವರು ಆಗಮಿಸಿ ಸಲಹೆ ಸೂಚನೆ ನೀಡಬೇಕೆಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.