ಸಾರಾಂಶ
ಜ. 9ರಂದು ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೂ ವಿಜಯಪುರ ಪಟ್ಟಣ, ಯಲುವಳ್ಳಿ, ಹಾರೋಹಳ್ಳಿ, ದಂಡಿಗಾನಹಳ್ಳಿ, ಕೊಮ್ಮಸಂದ್ರ,ತಿಮ್ಮಳ್ಳಿ, ಮುದ್ದೇನಹಳ್ಳಿ, ನಾರಾಯಣಪುರ, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ದೇವನಹಳ್ಳಿ: ತಾಲೂಕಿನ ವಿಜಯಪುರದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳಲಿರುವುದರಿಂದ ಜ. 9ರಂದು ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೂ ವಿಜಯಪುರ ಪಟ್ಟಣ, ಯಲುವಳ್ಳಿ, ಹಾರೋಹಳ್ಳಿ, ದಂಡಿಗಾನಹಳ್ಳಿ, ಕೊಮ್ಮಸಂದ್ರ,ತಿಮ್ಮಳ್ಳಿ, ಮುದ್ದೇನಹಳ್ಳಿ, ನಾರಾಯಣಪುರ, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ವಿಜಯಪುರದ ಶಿವ ಸರ್ಕಲ್‌ನಿಂದ ಕೋಲಾರ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಜ.10 ರಂದು ಸಂಬಂಧಿಸಿದ ಇಲಾಖೆ ಕೈಗೊಳ್ಳುವುದರಿಂದ ವಿಜಯಪುರ ಪಟ್ಟಣ, ಯಲವಳ್ಳಿ, ಗುರಪ್ಪನಮಠ, ಮಿತ್ತನಹಳ್ಳಿ, ಕೋಲಾರ ರಸ್ತೆ, ವಿಜಯಪುರ ಪೊಲೀಸ್ ಠಾಣೆಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಅಡಚಣೆಯಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.