ಇಂದು, ನಾಳೆ ಮಂಗಳೂರಿನ ವಿವಿಧ ಕಡೆ ವಿದ್ಯುತ್‌ ನಿಲುಗಡೆ

| Published : Feb 05 2025, 12:32 AM IST

ಇಂದು, ನಾಳೆ ಮಂಗಳೂರಿನ ವಿವಿಧ ಕಡೆ ವಿದ್ಯುತ್‌ ನಿಲುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.5 ಮತ್ತು 6 ರಂದು ಮಂಗಳೂರಿನ ವಿವಿಧ ಕಡೆಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ. ಫೆ.5 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11 ಕೆವಿ ಕುತ್ತಾರ್‌ ಫೀಡರ್ ಮತ್ತು 11 ಕೆವಿ ತೊಕ್ಕೊಟ್ಟು ಫೀಡರ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಫೆ.5 ಮತ್ತು 6 ರಂದು ಮಂಗಳೂರಿನ ವಿವಿಧ ಕಡೆಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಫೆ.5 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11 ಕೆವಿ ಕುತ್ತಾರ್‌ ಫೀಡರ್ ಮತ್ತು 11 ಕೆವಿ ತೊಕ್ಕೊಟ್ಟು ಫೀಡರ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಕೆರೆಬೈಲ್‌, ತೊಕ್ಕೊಟ್ಟು ಜಂಕ್ಷನ್‌, ಕಲ್ಲಾಪು, ಆಡಂಕುದ್ರು, ಬುರ್ದು, ಕಲ್ಲಾಪು ಪಟ್ಲ, ನಾಗನಕಟ್ಟೆ, ಹಿದಾಯತ್‌ ನಗರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ ನಗರ, ಪ್ರಕಾಶ್‌ ನಗರ, ಪಂಡಿತ್‌ ಹೌಸ್‌, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ದಾರಂದಬಾಗಿಲು, ಹೊಸಗದ್ದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ಫೆ.6ರಂದು ಕರೆಂಟ್‌ ಇಲ್ಲ:

ಫೆ. 6ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 33/11ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11 ಕೆವಿ ವೈದ್ಯನಾಥನಗರ ಫೀಡರ್‌ ಹಾಗೂ 33/11ಕೆವಿ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11ಕೆವಿ ಫಳ್ನೀರ್ ಫೀಡರ್‌ ವ್ಯಾಪ್ತಿಯ ಅತ್ತಾವರ ಕಟ್ಟೆ, ಮೆಸ್ಕಾಂ ಆಫೀಸ್‌, ವೈದ್ಯನಾಥ ನಗರ, ಅತ್ತಾವರ 5ನೇ ಕ್ರಾಸ್‌, ಕಂಕನಾಡಿ ಮಾರ್ಕೆಟ್‌, ಹೈಲ್ಯಾಂಡ್‌, ಯುನಿಟಿ ಹಾಸ್ಪಿಟಲ್‌, ಸೈಂಟ್‌ ಮೆರಿಸ್‌ ಸ್ಕೂಲ್‌, ವಾಸ್‌ಲೇನ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಜೆಪ್ಪುವಿನಲ್ಲಿ ಕರೆಂಟ್‌ ಇಲ್ಲ:

ಫೆ.6 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 110/33/11 ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11 ಕೆವಿ ಗೋರಿಗುಡ್ಡ ಫೀಡರ್‌ ವ್ಯಾಪ್ತಿಯ ಗೋರಿಗುಡ್ಡ, ಗೋರಿಗುಡ್ಡ ನಾಗಬನ, ಗುರುಪ್ರಸಾದ್‌ ಲೇನ್‌, ಕೇಂದ್ರಿಯ ವಿದ್ಯಾಲಯ, ಅಂಗಡಿ ಮಾರ್‌, ರಿಲಾಯನ್ಸ್‌, ಗುರುಪ್ರಸಾದ್‌, , ಉಜ್ಜೋಡಿ, ಮಾರುತಿ ಗ್ಯಾರೇಜ್‌, ಸಿಟಿ ಗೇಟ್‌, ವಿಶ್ವಾಸ್‌ ಗ್ರೀನ್‌ ವ್ಯೂ, ಎಕ್ಕೂರುಗುಡ್ಡ, ಅಯ್ಯಪ್ಪ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಸುರತ್ಕಲ್‌ನಲ್ಲಿ ಕರೆಂಟ್ಲ್ ಇಲ್ಲ: ಫೆ.6 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ 33/11 ಕೆವಿ ಕಾಟಿಪಳ್ಳ ಉಪಕೇಂದ್ರದಿಂದ ಹೊರಡುವ 11 ಕೆವಿ ಕೃಷ್ಣಾಪುರ ಫೀಡರ್‌ನಲ್ಲಿ 1ನೇ ಬ್ಲಾಕ್‌, 2ನೇ ಬ್ಲಾಕ್‌, 3ನೇ ಬ್ಲಾಕ್‌, 4ನೇ ಬ್ಲಾಕ್‌, 5ನೇ ಬ್ಲಾಕ್‌, 7ನೇ ಬ್ಲಾಕ್‌, ಪೆಡ್ಡಿಯಂಗಡಿ, ಆಶ್ರಯ ಕಾಲೊನಿ, ಬಾಳ,ಎಂ.ಆರ್.ಪಿ.ಎಲ್‌ ಕಾರ್ಗೊಗೇಟ್‌, ಕೈಕಂಬ, ಮಂಗಳಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.ಮೂಡುಬಿದಿರೆಯಲ್ಲಿ ಕರೆಂಟ್‌ ಇಲ್ಲ: ಫೆ.6 ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ವರೆಗೆ 110/11 ಕೆವಿ ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ, ತೋಡಾರ್ ಮತ್ತು ನಿಡ್ಡೋಡಿ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ನೆಲ್ಲಿಗುಡ್ಡೆ, ಪುತ್ತಿಗೆಪದವು ಹಂಡೇಲು, ಬಂಗೆಬೆಟ್ಟು, ತೋಡಾರು ಪಡೀಲು, ಪುದ್ದರ ಕೋಡಿ, ತೋಡಾರ್ ಪಲ್ಕೆ,ಮಿಜಾರು, ಮೈಟ್, ಕೊಪ್ಪದ ಕುಮೇರು, ತೋಡಾರ್ ಗರಡಿ, ಪತ್ತೋಡಿ ನಿಡ್ಡೋಡಿ, ಸಂಪಿಗೆ, ಕಲ್ಲಮುಂಡ್ಕೂರು, ಕುದ್ರಿಪದವು, ಬೋಂಟ್ರಡ್ಕೆ, ಅಶ್ವಥಪುರ, ಮಂಗೆಬೆಟ್ಟು, ನೀರ್ಕೆರೆ, ಕಾಯರ್ ಮುಗೇರು, ಕಳಕಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.