ಬಾಳೆಹೊನ್ನೂರುಪವರ್ ಶೇರಿಂಗ್ ಬಗ್ಗೆ ಸೆಟ್ಲಮೆಂಟ್ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆ ಮೂಡಿದ್ದು, ಪವರ್ ಶೇರಿಂಗ್ ಗೊಂದಲದಿಂದಾಗಿ ಇಡೀ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ ನಿರ್ಮಾಣವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನೂತನ, ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.
ರಂಭಾಪುರಿ ಪೀಠದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪವರ್ ಶೇರಿಂಗ್ ಬಗ್ಗೆ ಸೆಟ್ಲಮೆಂಟ್ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆ ಮೂಡಿದ್ದು, ಪವರ್ ಶೇರಿಂಗ್ ಗೊಂದಲದಿಂದಾಗಿ ಇಡೀ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ ನಿರ್ಮಾಣವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ನೂತನ, ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎನ್ನುವ ಸ್ಥಿತಿಯಿದೆ. ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆ ಯಿಂದ ಭ್ರಷ್ಟಾಚಾರ, ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶನಿವಾರ ಸುದ್ದಿಗಾರರಿಗೆ ಹೇಳಿದರು. ಕಾಂಗ್ರೆಸ್ ಹೈಕಮಾಂಡ್‌ಗೆ ಯಾವುದೇ ರೀತಿಯಾಗಿ ನಿಯಂತ್ರಣ ಉಳಿದಿಲ್ಲ. ಕಾಂಗ್ರೆಸ್‌ನಲ್ಲಿ ಹೈ ಮಾತ್ರವಿದ್ದು, ಕಮಾಂಡ್ ಇಲ್ಲದಂತಾಗಿದೆ. ರಾಷ್ಟ್ರೀಯ ಅಧ್ಯಕ್ಷರೇ ರಾಜ್ಯದಲ್ಲಿದ್ದರೂ ಸಹ ಅವರೇ ಹೈಕಮಾಂಡ್‌ಗೆ ಹೇಳಿ ಇಲ್ಲಿನ ಪರಿಸ್ಥಿತಿಯನ್ನು ಸರಿ ಮಾಡುವುದಾಗಿ ಹೇಳುವ ಸ್ಥಿತಿ ಬಂದಿದೆ. ಗೊಂದಲಮಯ ವಾತಾವರಣದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಜನರು ಐದು ವರ್ಷ ಆಡಳಿತ ಮಾಡಬೇಕು ಎಂದು ಕಾಂಗ್ರೆಸ್‌ನವರಿಗೆ ಅಧಿಕಾರ ಕೊಟ್ಟಿದ್ದಾರೆ. ನಮಗೆ ವಿರೋಧ ಪಕ್ಷ ದಲ್ಲಿರಲು ಜನಾದೇಶ ಬಂದಿದೆ. ನಾವು ಅದನ್ನು ಯಶಸ್ವಿಯಾಗಿ ಪೂರೈಕೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.-- (ಬಾಕ್ಸ್)--ಅಡಕೆ ಹಾನಿಕಾರಿಯಲ್ಲ: ಕೇಂದ್ರದ ಸ್ಪಷ್ಟ ನಿಲುವು
ಅಡಕೆ ಹಾನಿಕಾರಕ ಎಂಬ ವಿಚಾರದ ಬಗ್ಗೆ ಎಲ್ಲವನ್ನೂ ನಾನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ನಮ್ಮ ಸರ್ಕಾರ ಬಂದ ನಂತರ ಶಿವರಾಜ್ ಸಿಂಗ್ ಚೌಹ್ಹಾಣ್ ಸಚಿವರಾದ ಬಳಿಕ ಅವರೊಂದಿಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ ಎಲ್ಲರೂ ಸೇರಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಒಂದು ವರದಿ ಕೈ ಸೇರಿದೆ ಎಂದು ಶಿವರಾಜ್ ಸಿಂಗ್ ಚೌಹ್ಹಾಣ್ ಹೇಳಿದ್ದಾರೆ. ಅದನ್ನು ಸಂಬಂಧಿಸಿದ ಕೋರ್ಟ್ ಗೆ ಕೊಟ್ಟು ವಿವರಣೆ ನೀಡಲಿದ್ದೇವೆ. ಅಡಕೆ ಕೇವಲ ಪಾನ್ ತಿನ್ನಲು ಮಾತ್ರ ಉಪಯೋಗ ಮಾಡುವುದಲ್ಲ. ಅದು ಪ್ರತಿಯೊಂದು ಶುಭ ಮತ್ತು ಅಶುಭ ಎರಡೂ ಕಾರ್ಯದಲ್ಲಿ ನಮ್ಮಲ್ಲಿ ಉಪಯೋಗ ಮಾಡುತ್ತಾರೆ. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ, ಧಾರ್ಮಿಕ ಪದ್ಧತಿಯಲ್ಲಿ ಪರಂಪರಾನುಗತವಾಗಿ ಬಂದಿದೆ. ಇದು ಬಹಳ ಯೋಚನೆ ಮಾಡಿ ಮಾಡಿದ ಪದ್ಧತಿ. ಅಡಕೆ ಉಪಯೋಗ ಮಾಡಿದವರಿಗೆ ಅದು ವಿಷಕಾರಕವಲ್ಲ ಎಂಬುದು ಗೊತ್ತಿರುತ್ತದೆ.ಅಡಕೆಗೆ ತಂಬಾಕು ಸೇರಿಸಿದರೆ, ಅಡಕೆ ಗುಟ್ಕಾ ತಯಾರು ಮಾಡಿದರೆ ಅದು ವಿಷಕಾರಕವಾಗುತ್ತದೆ. ಆರೋಗ್ಯಕ್ಕೆ ಹಾನಿಕರ. ಆದರೆ ಕೇವಲ ಅಡಕೆ ವಿಷಕಾರಕ ಅಲ್ಲ ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಿದೆ. ಹಾಗಾಗಿ ಬೇರೆ ಬೇರೆ ವೇದಿಕೆಗಳಲ್ಲಿ ಈ ಬಗ್ಗೆ ಮಂಡಿಸಲು ವೈಜ್ಞಾನಿಕ ವರದಿ ಕೊಡಬೇಕು. ಆ ಬಗ್ಗೆ ವರದಿಗಳು ಸಿದ್ಧವಾಗುತ್ತಿವೆ ಎಂದರು.- (ಬಾಕ್ಸ್)--ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಿತನದ ಮಾನಸಿಕತೆಯಿದೆ ರಾಜಭವನದಲ್ಲಿರುವ ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿ. ರಾಜಭವನದಲ್ಲಿ ರಾಜರು ಇರುವುದಿಲ್ಲ. ರಾಜ್ಯಪಾಲರು ಇರುತ್ತಾರೆ. ಅದಕ್ಕಾಗಿ ಕೇಂದ್ರದಿಂದ ಲೋಕಭವನ ಎಂದು ನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರ ಜನಾದೇಶದಿಂದ ಬಂದಿದ್ದು, ಈ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಂಡಿದೆ ಎಂದು ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.ಕಾಂಗ್ರೆಸ್ ಪಾರ್ಟಿಗೆ ಗುಲಾಮಿತನದ ಮಾನಸಿಕತೆ ಇನ್ನೂ ಇದ್ದು, ಅವರ ಹುಟ್ಟು ಗುಣವೇ ಗುಲಾಮಿತನಕ್ಕೆ ಹೊಂದಿ ಕೊಂಡಿದ್ದಾರೆ. ಬ್ರಿಟೀಷರು ಇದ್ದಾಗ ಗುಲಾಮಿತನದ ಹೆಸರುಗಳಿದ್ದವು. ಆದರೆ ಅದನ್ನು ಈಗ ಆತ್ಮನಿರ್ಭರದ ಸಂದರ್ಭದಲ್ಲಿ ಬದಲು ಮಾಡಬೇಕಿದೆ. ನಮ್ಮ ನೇವಿ ಧ್ವಜದಲ್ಲಿ ಅನೇಕ ವರ್ಷಗಳ ಕಾಲ ಬ್ರಿಟೀಷರು ಮಾಡಿದಂತಹ ಪಂಚಮ ಜಾರ್ಜ್ ಧ್ವಜ ಇತ್ತು. ದೇಶದಲ್ಲಿ ಮೊದಲ ಬಾರಿಗೆ ನೌಕಾಪಡೆಯನ್ನು ನಿರ್ಮಾಣ ಮಾಡಿದ್ದು ಶಿವಾಜಿ ಮಹಾರಾಜರು. ಆ ಹಿನ್ನೆಲೆಯಲ್ಲಿ ಶಿವಾಜಿ ಧ್ವಜ ಮಾಡಿ ದೆವು. ಅದಕ್ಕೂ ವಿರೋಧ ಮಾಡಿದರು. ನಂತರ ಪ್ರಧಾನಮಂತ್ರಿ ಇದ್ದ ಮನೆ ರಸ್ತೆಯನ್ನು ರೇಸ್‌ಕೋರ್ಸ್ ಮಾಡಿದ್ದರು. ಅಲ್ಲಿ ಕುದುರೆ ರೇಸ್ ನಡೆಯುತಿತ್ತು. ರೇಸ್‌ಕೋರ್ಸ್ ಶ್ರೀಮಂತರು ಆಡುವ ಜೂಜಾಟ. ಈ ಹಿನ್ನೆಲೆಯಲ್ಲಿ ಅದನ್ನು ಬದಲಾಯಿಸಿ ಲೋಕ ಕಲ್ಯಾಣ ಮಾರ್ಗ ಎಂದು ನಾಮಕರಣ ಮಾಡಿದೆವು. ಅದನ್ನು ವಿರೋಧ ಮಾಡಿದರು. ಏಕೆಂದರೆ ಅವರು ಎಂದೂ ಲೋಕಕಲ್ಯಾಣವನ್ನೇ ಮಾಡಿಲ್ಲ. ಮತ್ತೊಂದು ರಸ್ತೆಗೆ ಕರ್ತವ್ಯ ಪಥ ಎಂದು ಮಾಡಿದೆವು. ಅದನ್ನು ವಿರೋಧ ಮಾಡಿದರು. ಅವರ ಮಾನಸಿಕತೆಯೇ ಇದಾಗಿದ್ದು, ಕಾಂಗ್ರೆಸ್ಸಿಗರ ಮಾನಸಿಕತೆಯೇ ಇದಾಗಿದೆ. ಈ ಸ್ಥಿತಿಗೆ ಅವರು ಬಂದು ನಿಂತಿದ್ದಾರೆ ಎಂದರು. ನಾವು ನರೇಗಾ ಯೋಜನೆ ಬದಲು ಮಾಡಿ ಪಾರದರ್ಶಕತೆ ತರಬೇಕು ಎಂದೆವು. ಹಳೆ ಕಲ್ಲು, ಹೊಸ ಬಿಲ್ಲು ಆಗಬಾರದು ಎಂದು ೧೨೫ ದಿವಸ ಮಾಡಿ, ತಂತ್ರಜ್ಞಾನ ಆಧಾರಿತವಾಗಿ ಮಾನಿಟರಿಂಗ್ ಮಾಡಿ ಜಿಪಿಎಸ್ ಮುಂತಾದವನ್ನು ಮಾಡಿ ಜಿ ರಾಮ್ ಜಿ ಯೋಜನೆ ಮಸೂದೆ ಮಾಡಿದರೂ ಅದಕ್ಕೂ ವಿರೋಧ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಬೌದ್ಧಿಕವಾಗಿ ದಿವಾಳಿ ಯಾಗಿದ್ದು. ಯಾವಾಗ ಏನು ಮಾತನಾಡುತ್ತಾರೆ ಎಂದು ತಿಳಿಯುವುದಿಲ್ಲ. ರಾಜೀವ್ ಗಾಂಧಿ ತಂದಂತಹ ಇವಿಎಂ ಬಗ್ಗೆ ಸೋತಾಗ ಅನುಮಾನ ವ್ಯಕ್ತಪಡಿಸುತ್ತಾರೆ. ಗೆದ್ದಾಗ ಅನುಮಾನ ಬರಲ್ಲ. ಇದು ಅವರ ಮಾನಸಿಕತೆ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ. ಕಾಂಗ್ರೆಸ್ ಪಕ್ಷ ಇಂತಹ ಸ್ಥಿತಿಗಳಿಂದ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತಿದ್ದು, ಇನ್ನೂ ಕೆಲವು ದಿನಗಳಲ್ಲಿ ಸಂಪೂರ್ಣ ಮುಕ್ತವಾಗಲಿದೆ. ದ್ವೇಷ ಭಾಷಣ ಮಸೂದೆಯನ್ನು ಯಾವುದೇ ಚರ್ಚೆ ಮಾಡದೇ ಅಂಗೀಕಾರ ಮಾಡಿದ್ದು, ಇಂದಿರಾ ಗಾಂಧಿ ಕಾಲದಲ್ಲಿ ಏನು ಮಾಡಿದರೂ ಜೈಲಿಗೆ ಹಾಕುತ್ತಿದ್ದರು. ಈಗಲೂ ಅದೇ ರೀತಿ ಅವರ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಜೈಲಿಗೆ ಹಾಕಬೇಕು. ಹೆದರಿಸಬೇಕು ಎಂದು ಕೊಂಡಿದ್ದಾರೆ. ನಮ್ಮ ಪ್ರಕಾರ ಮಸೂದೆ ಯಶಸ್ವಿಯಾಗುವುದಿಲ್ಲ. ದೇಶದಲ್ಲಿ ಕೋರ್ಟ್, ನ್ಯಾಯಾಂಗ ವ್ಯವಸ್ಥೆ ಬಹಳ ಬಲವಾಗಿದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.೨೦ಬಿಹೆಚ್‌ಆರ್ ೧: ಪ್ರಲ್ಹಾದ್ ಜೋಷಿ