ಸಪ್ತಋಷಿ ಆವಾಹನಂ ನಂತರ, ಸದ್ಗುರು ಈಶ ಸನ್ನಿಧಿಯ ಸುತ್ತಮುತ್ತಲ ಗ್ರಾಮಗಳಾದ ಕುರ್ಲಹಳ್ಳಿ, ಲಿಂಗಶೆಟ್ಟಿಪುರ, ವಡ್ರೇಪಾಳ್ಯ, ಕವರನಹಳ್ಳಿ ಮತ್ತು ಹನುಮಂತಪುರದ ಸುಮಾರು ಎಂಬತ್ತು ಮಕ್ಕಳ ತಂಡವು ಒಟ್ಟಾಗಿ ಸೇರಿ ಸಾಂಕೇತಿಕವಾಗಿ ಶಿವನ ನಿದ್ರೆಗೆ ಅನುವು ಮಾಡಿಕೊಡುವ ಮಂತ್ರ ಪಠಣಗಳನ್ನೊಳಗೊಂಡ ಭಕ್ತಿಪೂರ್ವಕ ''''ಶಯನ ಆರತಿ''''ಯನ್ನು ಅರ್ಪಿಸಿದರು. ಕಳೆದ ಹದಿನೈದು ದಿನಗಳಿಂದ ಪವಿತ್ರ ಅರ್ಪಣೆಯನ್ನು ಕಲಿತ ಮಕ್ಕಳ ಉಪಸ್ಥಿತಿಯಿಂದಾಗಿ ಸಂಜೆಯ ವಾತಾವರಣವು ಭಕ್ತಿ ಮತ್ತು ಪ್ರಶಾಂತತೆಯ ಚೈತನ್ಯದಿಂದ ಕೂಡಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಿವನ ಅನುಗ್ರಹವನ್ನು ಆಹ್ವಾನಿಸಲು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ನಡೆಸಲಾಗುವ ಶಕ್ತಿಯುತ ''''''''''''''''ಸಪ್ತಋಷಿ ಆವಾಹನಂ'''''''''''''''' ಪ್ರಕ್ರಿಯೆಯನ್ನು ಶುಕ್ರವಾರ ಸಂಜೆ ತಾಲೂಕಿನ ಆವಲಗುರ್ಕಿ ಬಳಿಯ ಸದ್ಗುರು ಈಶ ಸನ್ನಿಧಿಯಲ್ಲಿ ನಡೆಸಲಾಯಿತು. ಈ ಪವಿತ್ರ ಪ್ರಕ್ರಿಯೆಯನ್ನು ಕಾಶಿ ವಿಶ್ವನಾಥ ದೇವಾಲಯದ ಅರ್ಚಕರು ಅದರ ಶುದ್ಧ ರೂಪದಲ್ಲಿ ಸಂರಕ್ಷಿಸಿದರು.

ಸಾಂಪ್ರದಾಯಿಕವಾಗಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ನಡೆಯುವ ''''''''''''''''ಸಪ್ತಋಷಿ ಆವಾಹನಂ'''''''''''''''' ಪ್ರಕ್ರಿಯೆಯನ್ನು, ಇತ್ತೀಚಿನ ವರ್ಷಗಳಲ್ಲಿ ಸದ್ಗುರುಗಳ ಮೇಲಿನ ಭಕ್ತಿಯಿಂದಾಗಿ ಕಾಶಿಯ ಏಳು ಜನ ಅರ್ಚಕರು ತಮಿಳುನಾಡಿನ ಕೊಯಂಬತ್ತೂರಿನ 112 ಅಡಿ ಎತ್ತರದ ಆದಿಯೋಗಿಯ ಬಳಿಯಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ ಅಯನ ಸಂಕ್ರಾಂತಿಯಂದು ನಡೆಸಿದ್ದರು. ಈ ಸಂಪ್ರದಾಯವನ್ನು ಮುಂದುವರಿಸುತ್ತಾ ಅರ್ಚಕರು ಶುಕ್ರವಾರ ವಸಂತಕಾಲದ ವಿಷುವತ್ ಸಂಕ್ರಾಂತಿ ಸುಸಂದರ್ಭದಲ್ಲಿ ಸದ್ಗುರು ಈಶ ಸನ್ನಿಧಿಯಲ್ಲಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ ''''''''''''''''ಸಪ್ತಋಷಿ ಆವಾಹನಂ'''''''''''''''' ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಯೋಗೇಶ್ವರ ಲಿಂಗವು ಮಾನವ ದೇಹದ ಐದು ಪ್ರಮುಖ ಚಕ್ರಗಳ ಅಭಿವ್ಯಕ್ತಿಯಾಗಿದೆ.

ಸದ್ಗುರುಗಳು ಮೊದಲ ಬಾರಿಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಈ ಪ್ರಕ್ರಿಯೆಯನ್ನು ಕಂಡು, ಅದರ ಅನುಭವವು ಅತ್ಯಂತ ಗಹನ ಹಾಗೂ ಶಕ್ತಿಯುತವಾಗಿರುವುದಾಗಿ ವಿವರಿಸಿದರು. ಇದರ ಬಗ್ಗೆ ಮಾತನಾಡುತ್ತಾ, “ಇದೊಂದು ತಂತ್ರಜ್ಞಾನ. ಆ ನಲವತ್ತೈದು ನಿಮಿಷದಿಂದ ಒಂದು ಗಂಟೆಯ ಅವಧಿಯಲ್ಲಿ ಅವರು ಈ ದೇವಾಲಯದಲ್ಲಿ ಸೃಷ್ಟಿಸುವ ವಾತಾವರಣವು ಅದ್ಭುತವಾದುದು. ಅರ್ಚಕರು ನಡೆಸಿಕೊಡುವ ಇಂತಹ ಪ್ರಕ್ರಿಯೆಯನ್ನು ನಾನು ಎಲ್ಲಿಯೂ ನೋಡಿಲ್ಲ” ಎಂದು ಹೇಳಿದ್ದರು.

ಸಪ್ತಋಷಿ ಆವಾಹನಂ ನಂತರ, ಸದ್ಗುರು ಈಶ ಸನ್ನಿಧಿಯ ಸುತ್ತಮುತ್ತಲ ಗ್ರಾಮಗಳಾದ ಕುರ್ಲಹಳ್ಳಿ, ಲಿಂಗಶೆಟ್ಟಿಪುರ, ವಡ್ರೇಪಾಳ್ಯ, ಕವರನಹಳ್ಳಿ ಮತ್ತು ಹನುಮಂತಪುರದ ಸುಮಾರು ಎಂಬತ್ತು ಮಕ್ಕಳ ತಂಡವು ಒಟ್ಟಾಗಿ ಸೇರಿ ಸಾಂಕೇತಿಕವಾಗಿ ಶಿವನ ನಿದ್ರೆಗೆ ಅನುವು ಮಾಡಿಕೊಡುವ ಮಂತ್ರ ಪಠಣಗಳನ್ನೊಳಗೊಂಡ ಭಕ್ತಿಪೂರ್ವಕ ''''''''''''''''ಶಯನ ಆರತಿ''''''''''''''''ಯನ್ನು ಅರ್ಪಿಸಿದರು. ಕಳೆದ ಹದಿನೈದು ದಿನಗಳಿಂದ ಪವಿತ್ರ ಅರ್ಪಣೆಯನ್ನು ಕಲಿತ ಮಕ್ಕಳ ಉಪಸ್ಥಿತಿಯಿಂದಾಗಿ ಸಂಜೆಯ ವಾತಾವರಣವು ಭಕ್ತಿ ಮತ್ತು ಪ್ರಶಾಂತತೆಯ ಚೈತನ್ಯದಿಂದ ಕೂಡಿತ್ತು.

ಸದ್ಗುರು ಸನ್ನಿಧಿಯಲ್ಲಿ ''''''''''''''''ಸಪ್ತಋಷಿ ಆವಾಹನಂ'''''''''''''''' ಪ್ರಕ್ರಿಯೆಯನ್ನು ಅರ್ಪಿಸಿರುವುದು, ಇಡೀ ಮಾನವಕುಲಕ್ಕೆ ‘ಅಧ್ಯಾತ್ಮದ ಒಂದು ಹನಿ’ಯನ್ನು ಅರ್ಪಿಸಲು ವಿಶ್ವದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯವನ್ನು ನಿರ್ಮಿಸುವ ಸದ್ಗುರುಗಳ ದೂರದೃಷ್ಟಿಯ ಭಾಗವಾಗಿದೆ. ಸದ್ಗುರು ಸನ್ನಿಧಿಯು ಪ್ರಸ್ತುತ ನಾಗ ಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗಕ್ಕೆ ನೆಲೆಯಾಗಿದೆ. ಇದು ಶೀಘ್ರದಲ್ಲೇ ಲಿಂಗ ಭೈರವಿ ದೇವಿಯ ಸನ್ನಿಧಿ, ನವಗ್ರಹ ಮಂಟಪಗಳು ಮತ್ತು ಎರಡು ತೀರ್ಥಕುಂಡಗಳನ್ನು ಒಳಗೊಳ್ಳಲಿದೆ.