ರಾಜ್ಯ ಮತ್ತು ರಾಷ್ಟ್ರದ ಭವಿಷ್ಯ ಉಜ್ವಲವಾಗಿದೆ. ಕೈಗಾರಿಕಾ ಮೂಲ ಸೌಕರ್ಯಗಳೊಂದಿಗೆ ರಾಜ್ಯ ಬೆಳೆಯುತ್ತಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಸರ್ಕಾರಗಳು ಈ ಹಿಂದಿನಿಂದಲೂ ಪ್ರಯತ್ನಿಸುತ್ತಾ ಬಂದಿವೆ.
ಹಳಿಯಾಳ: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲೇ ತಮ್ಮ ಗುರಿಯನ್ನು ನಿಗದಿಪಡಿಸಿ, ಅದನ್ನು ಸಾಧಿಸುವತ್ತ ಶ್ರದ್ಧೆಯಿಂದ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಸರ್ಕಾರಿ ಶಿವಾಜಿ ಪದವಿಪೂರ್ವ ಕಾಲೇಜಿನಲ್ಲಿ ಟೊಯೋಟಾ ಕಿರ್ಲೋಸ್ಕರ ಮೋಟಾರ್ ಲಿಮಿಟೆಡ್ ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕಾ ಯೋಜನೆಯಡಿ ಅಂದಾಜು ₹22 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಆಟೋಮೊಬೈಲ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯ ಮತ್ತು ರಾಷ್ಟ್ರದ ಭವಿಷ್ಯ ಉಜ್ವಲವಾಗಿದೆ. ಕೈಗಾರಿಕಾ ಮೂಲ ಸೌಕರ್ಯಗಳೊಂದಿಗೆ ರಾಜ್ಯ ಬೆಳೆಯುತ್ತಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಸರ್ಕಾರಗಳು ಈ ಹಿಂದಿನಿಂದಲೂ ಪ್ರಯತ್ನಿಸುತ್ತಾ ಬಂದಿವೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನ ಮಾತ್ರ ಲಭ್ಯವಿತ್ತು. ಈಗ ಪ್ರತಿಯೊಂದು ಹಂತದಲ್ಲೂ ಪ್ರಾಯೋಗಿಕವಾಗಿ ತರಬೇತಿ ನೀಡಿ ಮಕ್ಕಳ ಕೌಶಲ ಅಭಿವೃದ್ಧಿಗಾಗಿ ಅನೇಕ ತರಬೇತಿಗಳ ಮುಖಾಂತರ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಳವಡಿಸಿದ ತಾಂತ್ರಿಕ ಶಿಕ್ಷಣದ ಪ್ರಯೋಗಾಲಯದ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಟೊಯೋಟಾ ಸಂಸ್ಥೆಯ ಹಿರಿಯ ಅಧಿಕಾರಿ ಸಿದ್ದಲಿಂಗಪ್ಪ ಮಾತನಾಡಿ, ಪ್ರಯೋಗಾಲಯದಲ್ಲಿ ಮಕ್ಕಳ ಮುಂದಿನ ಭವಿಷ್ಯದ ಜೀವನಕ್ಕೆ ಅನುಕೂಲವಾಗುವಂತೆ ಪ್ರಾಯೋಗಿಕವಾಗಿ ಕೌಶಲ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇಂತಹ ಕೌಶಲ ತರಬೇತಿಯ ಸದುಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದರು.
ಟೊಯೋಟಾ ಸಂಸ್ಥೆಯ ವ್ಯವಸ್ಥಾಪಕ ಭಾಸ್ಕರ ಪೈ ಮಾತನಾಡಿ, ಟೊಯೋಟಾ ಸಂಸ್ಥೆ ದಿನದಿಂದ ದಿನಕ್ಕೆ ನೂತನ ತಾಂತ್ರಿಕತೆಯೊಂದಿಗೆ ಬೆಳೆಯುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಟಿ.ಎನ್. ಬಾಂದುರ್ಗಿ, ಪ್ರೌಢಶಾಲೆಯ ಪ್ರಾಚಾರ್ಯ ಟಿ. ಭಜಂತ್ರಿ, ಕಾಲೇಜು ಹಾಗೂ ಪ್ರೌಢಶಾಲೆಯ ಎಸ್ಡಿಎಂಸಿ ಸದಸ್ಯ ಸತ್ಯಜೀತ ಗಿರಿ, ಲಿಂಗರಾಜ ಹಳ್ಳಿಕೇರಿ, ಮಾದೇವ ಬಸಪ್ಪ ಗೌಳಿ ಇದ್ದರು.