ಸಾರಾಂಶ
ವಿದ್ಯೆಯ ಜೊತೆ ಸಂಸ್ಕಾರ ಕಲಿಯಬೇಕು. ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಇರಬೇಕು. ದೊಡ್ಡ ಕನಸು ಕಾಣಬೇಕು. ಕೇವಲ ಕನಸು ಕಂಡರೆ ಸಾಲದು, ಕಂಡ ಕನಸು ನನಸಾಗಿಸಲು ಶ್ರಮಿಸಬೇಕು.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಜಯತೀರ್ಥ ನಗರದ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಹಂಸನಾಮಕ, ಶ್ರೀ ಲಕ್ಷ್ಮೀ ನಾರಾಯಣ ಹಾಗೂ ಶ್ರೀ ರಾಮ ಪಾರಾಯಣ ಸಂಘ ದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಕೃಷ್ಣ ಕಾಕಲವಾರ ಮಾತನಾಡಿ, ವಿದ್ಯೆಯ ಜೊತೆ ಸಂಸ್ಕಾರ ಕಲಿಯಬೇಕು. ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಇರಬೇಕು. ದೊಡ್ಡ ಕನಸು ಕಾಣಬೇಕು. ಕೇವಲ ಕನಸು ಕಂಡರೆ ಸಾಲದು, ಕಂಡ ಕನಸು ನನಸಾಗಿಸಲು ಶ್ರಮಿಸಬೇಕು ಎಂದು ಕಿವಿಮಾತು ನೀಡಿದರು.
ಅಂಕಗಳಿಕೆಯೇ ಸಾಧನೆ ಎಂದು ತಿಳಿಯದೆ ಅಂಕಗಳ ಜೊತೆಗೇ ಬದುಕಿಗೆ ಬೇಕಾಗಿರುವ ವಿದನಯ, ಸಂಸ್ಕಾರ, ಹಿರಿಯರಿಗೆ ಗೌರವಿಸುವ ಗುಣಗಳನ್ನು ಕಲಿಯಿರಿ ಎಂದು ಕಾಕಲವಾರ್ ಅವರು ಮಕ್ಕಳಿಗೆ ಸಲಹೆ ನೀಡಿದರು.ಪಾರಾಯಣ ಸಂಘಗಳ ಸಂಚಾಲ ರವಿ ಲಾತೂರಕರ್ ಮಾತನಾಡುತ್ತ ಮಕ್ಕಳು ಇಂದು ಆಧುನಿಕತೆ, ಪಾಶ್ಚಿಮಾತ್ಯತೆತೆ ಮನಸೋಲೋತ್ತಿದ್ದಾರೆ, ಇದು ಅತ್ಯಂತ ಆತಂಕದ ಸಂಗತಿ. ಮನೆಯಲ್ಲಿ ಪೋಷಕರು ಮಕ್ಕಳಿಗೆ ವಿದ್ಯೆ, ಅಂಕಗಳ ಜೊತೆಗೇ ಸಂಸ್ಕಾರ ಕಲಿಸಿರಿ, ಇದರಿಂದ ನಮ್ಮತನದಲ್ಲಿ ಮಕ್ಕಳು ಬದುಕುವಂತೆ ಮಾಡಿರೆಂದರು.
ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಸಹನಾ ಜೋಶಿ, ಸಮೀರ ಕುಲಕರ್ಣಿ, ಸೌಜನ್ಯ, ವಿಷ್ಣು ಬಡಶೇಷಿ, ಕಾತ್ಯಾಯಿನಿ, ರಚೇತಾ ಪಾಟೀಲ್, ರಜತ್ ನಾಯಕ, ರಕ್ಷಿತಾ ಕುಲಕರ್ಣಿ, ವಾದಿರಾಜ ಕುಲಕರ್ಣಿ ಸಾತಖೇಡ, ಐಶ್ವರ್ಯ ಶರ್ಮಾ ಅವರನ್ನು ಸನ್ಮಾನಿಸಲಾಯಿತು.ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ್, ಜಗನ್ನಾಥ ಸಗರ, ಶೇಷಮೂರ್ತಿ ಅವಧಾನಿ, ಶಾಮಸುಂದರ ಕುಲಕರ್ಣಿ, ಸುರೇಶ ಕುಲಕರ್ಣಿ, ಅನೀಲ್ ಕುಲಕರ್ಣಿ, ನರಸಿಂಗ್ ರಾವ ಕುಲಕರ್ಣಿ, ಪದ್ಮನಾಭಾಚಾರ್ಯಜೋಶಿ, ಅರ್ಚಕ ಶ್ರೀನಿವಾಸ ಆಚಾರ್ಯ ಹಾಗೂ ಪಾರಾಯಣ ಸಂಘಗಳ ಸರ್ವ ಸದಸ್ಯರು ಪಾಲ್ಗೊಂಡಿದ್ದರು.