ಸಾಮಾಜಿಕ ಕಾರ್ಯಗಳನ್ನು ರೂಢಿಸಿಕೊಳ್ಳಿ: ನಿವೃತ್ತ ಪ್ರೊ.ಅಶೋಕ್‌

| Published : May 23 2024, 01:07 AM IST

ಸಾರಾಂಶ

ಕನ್ನಡ ಪ್ರಭ ವಾರ್ತೆ ಮುಧೋಳ:ಬೇರೆ ಬೇರೆ ಕ್ಷೇತ್ರಗಳಲ್ಲಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಅಶೋಕ ಗಂಗಣ್ಣವರ ಹಳೇ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ:ಬೇರೆ ಬೇರೆ ಕ್ಷೇತ್ರಗಳಲ್ಲಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಅಶೋಕ ಗಂಗಣ್ಣವರ ಹಳೇ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಪಾರ್ಕ್ ಹೊಟೇಲ್ ಹೊರಾಂಗಣದಲ್ಲಿ ಸ್ಥಳೀಯ ಆರ್‌ಎಮ್‌ಜಿ ಹಾಗೂ ಎಸ್.ಆರ್.ಕಂಠಿ ಕಾಲೇಜಿನ 1999-2004 ಬ್ಯಾಚ್‌ನ ಕಾಮರ್ಸ್ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಣಿಜ್ಯ ಪದವೀಧರರಾಗಿ ವಿವಿಧ ಹುದ್ದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ. ಇದರ ಜೊತೆಗೆ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಭಾಗವಿಹಿಸುವ ಮೂಲಕ ಸಮಾಜ ಸೇವೆ ಮಾಡಿರಿ ಎಂದು ಕಿವಿಮಾತು ಹೇಳಿದರು.

ಪ್ರೊ.ಶಾರದಾ ಬಿರಾದಾರ ಮಾತನಾಡಿ, ಗುರು-ಶಿಷ್ಯರ ಪರಂಪರೆ ಇಂದು ಹಂತ ಹಂತವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಕಲಿಸಿದ ಗುರುಗಳನ್ನು ನೆನೆದು ಸನ್ಮಾನಿಸುವ ಮೂಲಕ ಗೌರವಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.ಈ ಸಂದರ್ಭದಲ್ಲಿ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ತಾವು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು.

ಪ್ರಾಧ್ಯಾಪಕರಾದ ಶಾರದಾ ಬಿರಾದಾರ, ಜೆ.ಪರದೇಶಿ, ಪಿ.ಬಿ.ಬಡಿಗೇರ, ಎಂ.ವ್ಹಿ.ಜಿಗಬಡ್ಡಿ, ಎಸ್.ಬಿ.ಹೆಬ್ಳಿ, ಎ.ಐ.ಗಂಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಬಸು ಹಳ್ಳದ, ವಿಶಾಲ ಓಸ್ವಾಲ್‌, ಅಮಿತ್‌ ಒಣಕುದರಿ, ಈರಣ್ಣ ತೇಲಿ, ಈರಣ್ಣ ಆನದಿನ್ನಿ, ತ್ರಿವೇಣಿ ಹಾದಿಮನಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.