ಕನ್ನಡಪ್ರಭ ವಾರ್ತೆ ಐಗಳಿ ಶುದ್ದ ಮನಸ್ಸಿನಿಂದ ಕಾಯಕ ಮಾಡಿದರೇ ಭಗವಂತ ಮೆಚ್ಚುತ್ತಾನೆ ಎಂದು ನಾಗನೂರ ರುದ್ರಾಕ್ಷಿ ಮಠ ಬೆಳಗಾವಿಯ ಪೀಠಾಧ್ಯಕ್ಷರಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು. ಲಿಂ.ಅಪ್ಪಯ್ಯ ಶಿವಯೋಗಿಗಳ ಶತಮಾನೋತ್ಸವ ಪ್ರಯುಕ್ತ ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಲಿಂ.ಅಪ್ಪಯ್ಯ ಶಿವಯೋಗಿಗಳು ತುಬಚಿ ಮಠದಲ್ಲಿ ಕೆಲವು ವರ್ಷಗಳ ಕಾಲ ಇದ್ದರು.
ಕನ್ನಡಪ್ರಭ ವಾರ್ತೆ ಐಗಳಿ
ಶುದ್ದ ಮನಸ್ಸಿನಿಂದ ಕಾಯಕ ಮಾಡಿದರೇ ಭಗವಂತ ಮೆಚ್ಚುತ್ತಾನೆ ಎಂದು ನಾಗನೂರ ರುದ್ರಾಕ್ಷಿ ಮಠ ಬೆಳಗಾವಿಯ ಪೀಠಾಧ್ಯಕ್ಷರಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.ಲಿಂ.ಅಪ್ಪಯ್ಯ ಶಿವಯೋಗಿಗಳ ಶತಮಾನೋತ್ಸವ ಪ್ರಯುಕ್ತ ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಲಿಂ.ಅಪ್ಪಯ್ಯ ಶಿವಯೋಗಿಗಳು ತುಬಚಿ ಮಠದಲ್ಲಿ ಕೆಲವು ವರ್ಷಗಳ ಕಾಲ ಇದ್ದರು. ಈಗ ಶ್ರೀಮಠವು ಜಿರ್ಣೋದ್ದಾರವಾಗಿ ಸುಂದರ ವಿರಕ್ತಮಠ ನಿರ್ಮಾಣವಾಗಿದೆ. ಅಪ್ಪಯ್ಯ ಸ್ವಾಮಿಗಳು ಐಗಳಿಯಲ್ಲಿ ಲಿಂಗೈಕ್ಯರಾಗಿದ್ದರು. ಶ್ರೀಗಳ ಶತಮಾನೋತ್ಸವ ಮಾಡಲು ಯುವಕರು ಮುಂದಾಗಿದ್ದಾರೆ. ಇದು ಅಪ್ಪಯ್ಯ ಸ್ವಾಮಿಗಳು ಯುವಕರ ಮನಸ್ಸಿನಲ್ಲಿ ಬಂದಿರಬಹುದು ಯಾವುದೇ ಕೆಲಸ ಮಾಡುವುದು ಎಲ್ಲರ ಸಹಕಾರ ಮುಖ್ಯ. ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕರ್ನಾಟಕದ ಐಗಳಿಯಲ್ಲಿ ಆಗಲಿದೆ. ಬಹು ಎತ್ತರದ ಪುತ್ಥಳಿ ಕೆಲಗಡೆ ಜ್ಞಾನ ಮಂದಿರ, ಹೂದೋಟ ಎಲ್ಲರೂ ಮೆಚ್ಚುವಂತೆ ಕಾಮಗಾರಿ ನಡೆಯಲಿದೆ ಎಂದರು.
ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಲಿಂ.ಅಪ್ಪಯ್ಯ ಮಹಾಶಿವಯೋಗಿಗಳು, ಅಥಣಿಯ ಲಿಂ.ಮುರುಘೇಂದ್ರ ಮಹಾ ಶಿವಯೋಗಿಗಳು, ಹಾನಗಲ್ ಗುರುಬಸವ ಮಹಾಶಿವಯೋಗಿಗಳು ಇವರೆಲ್ಲ ಸಮಕಾಲಿನವರು. ಇವರು ಮಾಡಿದ ಪವಾಡಗಳು ಎಲ್ಲರ ಮನದಾಳದಲ್ಲಿ ಉಳಿದಿವೆ. ಐಗಳಿ ಅಪ್ಪಯ್ಯ ಸ್ವಾಮಿಗಳ ಭವ್ಯ ಪುತ್ಥಳಿ ಕಾರ್ಯ ಯುವಕರಲ್ಲಿ ಬಂದಿದ್ದು ಖುಷಿ ತಂದಿದೆ. ಐಗಳಿ ಅಪ್ಪಯ್ಯ ಸ್ವಾಮಿಗಳು ಮಾಡಿದ ಪವಾಡದಿಂದ ಐಗಳಿ ಹೆಸರು ನಾಡಿನಲ್ಲಿ ಉಳಿದಿದೆ. ದೇಶದ ಇತಿಹಾಸದಲ್ಲಿ ಹಣಗಳಿಸಿದ ಯಾವುದೇ ವ್ಯಕ್ತಿಯ ಹೆಸರು ಉಳಿದಿಲ್ಲ. ಯಾರು ಧಾನ ಧರ್ಮ ಪರೋಪಕಾರ ಮಾಡಿದ್ದಾರೋ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಒಳ್ಳೆಯ ಕಾರ್ಯ ಮಾಡುವಾಗ ಅಡೆತಡೆಗಳು ಬಂದರೂ ಎಲ್ಲರು ಸ್ನೇಹಜೀವಿಯಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.ತೆಲಸಂಗದ ವೀರೇಶ ದೇವರು ಆಶೀರ್ವಚನ ನೀಡಿದರು. ಐ.ಪಿ.ಎಸ್ ಅಧಿಕಾರಿ ರವೀಂದ್ರ ಗದಾಡೆ, ಕೆಎಎಸ್ ಅಧಿಕಾರಿಗಳಾದ ಅಶೋಕ ಮಿರ್ಜಿ, ಮಲಗೌಡ ಝರೆ(ಕೋಹಳ್ಳಿ) ಇವರು ಮಾತನಾಡಿ, ಲಿಂ.ಅಪ್ಪಯ್ಯ ಸ್ವಾಮಿಗಳ ಆಶೀರ್ವಾದದಿಂದ ನಾವು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಗಿದೆ. ಶತಮಾನೋತ್ಸವಕ್ಕೆ ನಾವು ಕೈ ಜೋಡಿಸುತ್ತೇವೆ. ಶ್ರೀಗಳ ಪುತ್ಥಳಿಯ ಕಾಮಗಾರಿಯ ನೀಲಿನಕ್ಷೆ ತಯಾರಿಸಿದ ಅಭಿಯಂತರಾದ ರಾಜಶೇಖರ ಟೋಪಗಿ ಹಾಗೂ ಜಗದೀಶ ನೇಮಗೌಡ ಅವರನ್ನು ಸನ್ಮಾನಿಸಿದರು.ಈ ವೇಳೆ ಮಹಾದೇವ ಬಬಲಾದಿಮಠ, ಅರ್ಚಕ ಸಾಬಣ್ಣಾ ಪೂಜಾರಿ, ಅಶೋಕ ಮುದಗೌಡರ, ನಿಂಗನಗೌಡ ಪಾಟೀಲ, ನೂರಅಹ್ಮದ ಡೊಂಗರಗಾಂವ, ಕಲ್ಮೇಶ ಆಸಂಗಿ, ಸಿದ್ದಪ್ಪ ಬಳ್ಳೋಳ್ಳಿ, ಅಪ್ಪಾಸಾಬ ಪಾಟೀಲ, ಬಸವಂತ ಗುಡ್ಡಾಪೂರ, ಎಮ್.ಬಿ.ನೇಮಗೌಡ, ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಹಾಲಳ್ಳಿ, ಉಪಾಧ್ಯಕ್ಷ ಬಸವರಾಜ ನೇಮಗೌಡ, ಎಮ್.ಎಲ್.ನೇಮಗೌಡ ಸೇರಿದಂತೆ ಶತಮಾನೋತ್ಸವ ಸಮಿತಿ ಸದಸ್ಯರು, ಮಹಿಳಾ ಸಂಘದ ಸದಸ್ಯರು, ಗೆಳೆಯರ ಬಳಗದವರು ಇದ್ದರು.ಮುಖ್ಯ ಶಿಕ್ಷಕ ಎ.ಎಸ್.ತೆಲಸಂಗ, ಅಪ್ಪು ಮಾಳಿ ಮಾತನಾಡಿದರು. ಶಿವಾನಂದ ಸಿಂಧೂರ ಸ್ವಾಗತಿಸಿದರು. ಶಿಕ್ಷಕ ಬಸವರಾಜ ತೆಲಸಂಗ ನಿರೂಪಿಸಿದರು, ಮಹಾಂತೇಶ ಕಾಂಬಳೆ ವಂದಿಸಿದರು.