ಲಯನ್ಸ್ ಸದಸ್ಯರ ಅದ್ಭುತ ಪ್ರದರ್ಶನಕ್ಕೆ ಪ್ರಶಂಸೆ

| Published : Nov 24 2025, 02:00 AM IST

ಸಾರಾಂಶ

ನವೆಂಬರ್ ೯ರಂದು ಹಾಸನಾಂಬಾ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ‘ಕುರುಕ್ಷೇತ್ರ’ ನಾಟಕಕ್ಕೆ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಕಲಾವಿದರಿಗೆ ಭರ್ಜರಿ ಚಪ್ಪಾಳೆ ನೀಡಿದರು. ಇದು ನಾವು ಮಾಡಿದ ಮೂರು ತಿಂಗಳ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಗೌರವ ಎಂದು ಸಂತಸ ವ್ಯಕ್ತಪಡಿಸಿದರು. ಲಯನ್ಸ್ ಸೇವಾ ಸಂಸ್ಥೆಯ ಸದಸ್ಯರು ಮೂರು ತಿಂಗಳ ಕಾಲ ನಾಟಕದ ತರಬೇತಿ ಪಡೆದು ವೃತ್ತಿಪರ ಮಟ್ಟದ ಕಲಾತ್ಮಕ ಪ್ರದರ್ಶನ ನೀಡಿದ್ದು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು. ಕಲಾವಿದರ ಶ್ರಮ ಮತ್ತು ಪ್ರೇಕ್ಷಕರ ಪ್ರೋತ್ಸಾಹದಿಂದ ನಾಟಕ ಭರ್ಜರಿ ಯಶಸ್ಸು ಕಂಡಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಲಯನ್ಸ್ ಕ್ಲಬ್ ಸದಸ್ಯರು ಪಾತ್ರಧಾರಿಗಳಾಗಿ ಅಭಿನಯಿಸಿದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಯಶಸ್ವಿಯಾದ ಹಿನ್ನೆಲೆಯಲ್ಲಿ ಎಲ್ಲಾ ಕಲಾವಿದರು ಹಾಗೂ ಸದಸ್ಯರನ್ನು ನಗರದ ಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್. ರಮೇಶ್, ಈ ವರ್ಷ ಕ್ಲಬ್ ತನ್ನ ಸುವರ್ಣ ೫೦ನೇ ವರ್ಷವನ್ನು ಆಚರಿಸುತ್ತಿದೆ. ಈ ಮಹತ್ವದ ಸಂದರ್ಭದಲ್ಲಿ ಸೇವಾ ಚಟುವಟಿಕೆಗಳ ಜೊತೆಗೆ ಕಲೆ-ಸಂಸ್ಕೃತಿ ಸಂರಕ್ಷಣೆಯಲ್ಲಿ ಸಂಸ್ಥೆ ಹೊಸ ಆಯಾಮ ತೋರಿದೆ ಎಂದು ಹೇಳಿದರು. ನವೆಂಬರ್ ೯ರಂದು ಹಾಸನಾಂಬಾ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ‘ಕುರುಕ್ಷೇತ್ರ’ ನಾಟಕಕ್ಕೆ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಕಲಾವಿದರಿಗೆ ಭರ್ಜರಿ ಚಪ್ಪಾಳೆ ನೀಡಿದರು. ಇದು ನಾವು ಮಾಡಿದ ಮೂರು ತಿಂಗಳ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಗೌರವ ಎಂದು ಸಂತಸ ವ್ಯಕ್ತಪಡಿಸಿದರು. ಲಯನ್ಸ್ ಸೇವಾ ಸಂಸ್ಥೆಯ ಸದಸ್ಯರು ಮೂರು ತಿಂಗಳ ಕಾಲ ನಾಟಕದ ತರಬೇತಿ ಪಡೆದು ವೃತ್ತಿಪರ ಮಟ್ಟದ ಕಲಾತ್ಮಕ ಪ್ರದರ್ಶನ ನೀಡಿದ್ದು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು. ಕಲಾವಿದರ ಶ್ರಮ ಮತ್ತು ಪ್ರೇಕ್ಷಕರ ಪ್ರೋತ್ಸಾಹದಿಂದ ನಾಟಕ ಭರ್ಜರಿ ಯಶಸ್ಸು ಕಂಡಿದೆ. ಅವರ ಪರಿಶ್ರಮವನ್ನು ಗೌರವಿಸುವ ಸಲುವಾಗಿ ಇಂದು ಸತ್ಕಾರ ಆಯೋಜಿಸಲಾಗಿದೆ ಎಂದು ರಮೇಶ್ ಹೇಳಿದರು. ಕಲಾವಿದರಿಗೆ ಗೌರವ ನೆನಪಿನ ಕಾಣಿಕೆ, ಶಾಲು ಹಾಗೂ ಪುಷ್ಪವಿನಯದಿಂದ ಸನ್ಮಾನಿಸಲಾಯಿತು. ನಾಟಕ ಯಶಸ್ಸು ಹಾಸನದ ಸಾಂಸ್ಕೃತಿಕ ಚಳವಳಿ ಮತ್ತೊಬ್ಬ ಬಲ ಪಡಿಸಿದಂತಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕ ರಾಜು, ಲಯನ್ಸ್ ಮಾಜಿ ರಾಜ್ಯಪಾಲ ಬಿ.ವಿ. ಹೆಗ್ಗಡೆ, ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಚನ್ನೇಗೌಡ, ಸಿ.ಕೆ. ಕಿರಣ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷ ಈ. ಕೃಷ್ಣೇಗೌಡ, ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಕೆ.ಆರ್‌. ಮಲ್ಲೇಶ್ ಗೌಡ (ದೇವ್ರು), ಬಿ. ರಂಗಸ್ವಾಮಿ, ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.