ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು 89-90 ವರ್ಷಗಳಿಂದ ದೈವಿಕ ಸಂಪರ್ಕ ಅಸ್ಥಿತ್ವದಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತ ಬಂದಿದ್ದು ಈ ಸಂಸ್ಥೆಯು 143 ದೇಶಗಳಲ್ಲಿ ಭಗವಂತನ ಸ್ಮರಣೆಯಲ್ಲಿ ತೊಡಗುವ ಮೂಲಕ ನಮ್ಮ ವಿಶ್ವವಿದ್ಯಾಲಯವು ವಿಶ್ವವ್ಯಾಪ್ತಿಯಾಗಿದೆ ಎಂದು ದೆಹಲಿಯ ಜುರಿಷ್ಠ ವಿಂಗ್‌ನ ಅಧ್ಯಕ್ಷೆ ರಾಜಯೋಗಿನಿ ಬ್ರಹ್ಮಕುಮಾರಿ ಪುಪ್ಪಾ ದೀದಿ ಪಾಂಡವಭವನ ಹೇಳಿದರು.ಪಟ್ಟಣದ ಎಲ್.ಐ.ಸಿ ಕಚೇರಿಯ ಬಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣವಾದ ಶಿವಧ್ಯಾನ ಮಂದಿರದ ಉದ್ಘಾಟನೆಯನ್ನು ನೆರವೇರಿಸಿ ನಂತರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮನುಷ್ಯನು ಉನ್ನತ ಜೀವನ ಮತ್ತು ಶಾಂತಿಯುತ ಪ್ರಪಂಚಕ್ಕಾಗಿ ದೈವಿಕ ಬುದ್ಧಿವಂತಿಕೆ ಮತ್ತು ಶುದ್ದ ಕ್ರಿಯೆಗಳ ಮಹತ್ವವು ಅವಶ್ಯಕವಾಗಿದೆ ಎಂದು ತಿಳಿಸುತ್ತ, ಪ್ರಸ್ತುತ ಕಲಿಯುಗವು ಅಂತ್ಯಗೊಂಡು ಸತ್ಯಯುಗವು ಆರಂಭಗೊಳ್ಳುವ ಪರಿವರ್ತನೆಯ ಸಮಯ ಹತ್ತಿರವಾಗುತ್ತಿದೆ ಎಂದರು.
ಬ್ರಹ್ಮಕುಮಾರಿ ಸಂಘಟನೆಯು ಕಳೆದ 90 ವರ್ಷಗಳಿಂದ ಜಾಗತಿಕವಾಗಿ ದೈವಿಕ ಸಂದೇಶವನ್ನು ಹರಡುತ್ತಿದ್ದು ಸ್ಥಳ, ಧರ್ಮ ಮತ್ತು ಭಾಷೆಯ ಗಡಿಯನ್ನು ಮೀರಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿರುವ ಬಗ್ಗೆ ವಿವರಿಸಿದರು.ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ.ಬಸವರಾಜ ರಾಜ ಋಷಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಸಂಸ್ಥೆಗಳು ದೇಹ ಸತ್ಯ ಅತ್ಮ ಮಿತ್ಯ ಎಂದು ಹೇಳುತ್ತಾ ಪುನರ್ ಜನ್ಮದ ಪರಿಕಲ್ಫನೆಯನ್ನು ಹೊಗಲಾಡಿಸುತ್ತಿದ್ದು ನಮ್ಮ ಸನಾತನ ಧರ್ಮದಲ್ಲಿ ಅತ್ಮಕ್ಕೆ ಅತ್ಯಂತ ಪವಿತ್ರವಾದ ಸ್ಥಾನ ಇದ್ದು ಪುನರ್ ಜನ್ಮದ ಪರಿಕಲ್ಫನೆಯೂ ನಮ್ಮ ಧರ್ಮದಲ್ಲಿದೆ ಎಂದು ನಮ್ಮ ಮಕ್ಕಳಿಗೆ ತಿಳಿಸಬೇಕು ಎಂದರು.
ಇಂದಿನ ನವನವೀನ ವಿದ್ಯಮಾನಗಳಲ್ಲಿ ನಾವು ಜೀವಿಸುತ್ತಿದ್ದು ಕೇವಲ ಹಣ ಮಾಡುವ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡಿಸುತ್ತಿದ್ದು ಇದರಿಂದ ಸಮಾಜದಲ್ಲಿ ಭ್ರಷ್ಟಾಚಾರ, ಅನಾಚಾರಗಳು ಹೆಚ್ಚಾಗುತ್ತವೆ ಎಂದು ಅತಂಕ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಬ್ರಹ್ಮಕುಮಾರಿ ವಿದ್ಯಾಲಯದ ಸಂಚಾಲಕಿ ಅನುಸುಯಾಜಿ ವಹಿಸಿದ್ದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಇಲ್ಲಿನ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಹಿಮಾ ಜೆ.ಪಟೇಲ್, ಕಾಂಗ್ರೇಸ್ ಪಕ್ಷದ ಮುಖಂಡ ಹೊದಿಗೆರೆ ರಮೇಶ್, ಚಂದ್ರಕಲಾಜೀ, ಚನ್ನಗಿರಿ ಬ್ರಹ್ಮಕುಮಾರಿ ವಿದ್ಯಾಲಯದ ಮಹದೇವಿಅಕ್ಕ, ತಾರಾ ಅಕ್ಕ, ಜಯಶ್ರೀ ಅಕ್ಕ, ನಿರ್ಮಾಲಾಜಿ ಹಾಜರಿದ್ದರು.
;Resize=(128,128))
;Resize=(128,128))