ಪ್ರಜ್ವಲ್ ಆ ನೇಚರ್ ಇರುವ ಹುಡುಗನ್ನಲ್ಲ: ಸಂಸದ ಜಿ.ಎಸ್. ಬಸವರಾಜು

| Published : May 05 2024, 02:02 AM IST

ಪ್ರಜ್ವಲ್ ಆ ನೇಚರ್ ಇರುವ ಹುಡುಗನ್ನಲ್ಲ: ಸಂಸದ ಜಿ.ಎಸ್. ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣ ನನಗೆ ಆತ್ಮೀಯ ಸ್ನೇಹಿತ. ಆತ ಆ ಗುಣ ಇರುವಂತಹ ಹುಡುಗ ಅಲ್ಲ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಸಂಸದ ಪ್ರಜ್ವಲ್ ರೇವಣ್ಣ ನನಗೆ ಆತ್ಮೀಯ ಸ್ನೇಹಿತ. ಆತ ಆ ಗುಣ ಇರುವಂತಹ ಹುಡುಗ ಅಲ್ಲ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏನು ಗ್ರಹಚಾರವೋ, ಯಾರ ಕೈವಾಡವೋ ಗೊತ್ತಿಲ್ಲ. ಇತ್ತೀಚೆಗೆ ಈ ರೀತಿ ತೇಜೋವಧೆ ಮಾಡುವುದು ಹೆಚ್ಚಾಗಿದೆ. ರಮೇಶ ಜಾರಕಿಹೊಳೆಗೂ ಕೂಡ ಪಿತೂರಿ ಮಾಡಿ ಮನೆ ಹಾಳು ಮಾಡಿ, ಮಾನ -ಮರ್ಯಾದೆ ಹರಾಜು ಹಾಕಿದ್ದಾರೆ. ಜಾರಕಿಹೊಳೆಗೆ ವಿರೋಧ ಪಕ್ಷದವರೇ ಪಿತೂರಿ ಮಾಡಿದರು. ಪ್ರಜ್ವಲ್ ರೇವಣ್ಣ ಪ್ರಕರಣ ಸತ್ಯನೋ- ಸುಳ್ಳೋ ಸಾಬೀತು ಆಗಲಿ. ಪ್ರಜ್ವಲ್ ಪ್ರಕರಣದಲ್ಲೂ ಕೂಡ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು. ಒಂದು ವೇಳೆ ಮಹಿಳೆಯರಿಗೆ ಅನ್ಯಾಯ ಆಗಿದ್ದರೆ ಶಿಕ್ಷೆ ಆಗಲೇಬೇಕು ಎಂದರು.