ಆಂಬುಲೆನ್ಸ್‌ ನೀಡಿದ ಪ್ರಾಣಾಸ್ತ್ರ ಟ್ರಸ್ಟ್ ಕಾರ್ಯ ಶ್ಲಾಘನೀಯ: ವಜ್ರದೇಹಿ ಸ್ವಾಮೀಜಿ

| Published : Nov 16 2024, 12:34 AM IST

ಆಂಬುಲೆನ್ಸ್‌ ನೀಡಿದ ಪ್ರಾಣಾಸ್ತ್ರ ಟ್ರಸ್ಟ್ ಕಾರ್ಯ ಶ್ಲಾಘನೀಯ: ವಜ್ರದೇಹಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಲಾಂಚುಲಾಲ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಜೀವಹಾನಿಯನ್ನು ತಪ್ಪಿಸುವ, ಜೀವದಾನ, ಪುನರ್ಜನ್ಮ ನೀಡುವಂತಹ ಚೈತನ್ಯ ಇರುವಂತಹ ತುರ್ತು ವಾಹನ ಆಂಬುಲೆನ್ಸ್. ಅದನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಪ್ರಾಣಾಸ್ತ್ರ ಟ್ರಸ್ಟ್ ಉತ್ತಮ ಕಾರ್ಯವನ್ನು ಸಮಾಜಕ್ಕೆ ನೀಡಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪ್ರಾಣಾಸ್ತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್- ಬಜರಂಗದಳ ವಾಸುಕೀ ಶಾಖೆ ತೊಕ್ಕೊಟ್ಟುವಿನಲ್ಲಿ ನಡೆದ ಆಂಬುಲೆನ್ಸ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಮಾತನಾಡಿ, ಬಜರಂಗ ದಳದವರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ತಮ್ಮವರೇ ಆಸ್ಪತ್ರೆಗೆ ದಾಖಲಾದರೆ, ಮೃತಪಟ್ಟರೆ ನೋಡಲು ಹೆದರುತ್ತಿದ್ದರು. ಆದರೆ ಬಜರಂಗದಳ ಸಂಘಟನೆಯ ಸದಸ್ಯರು ಪರರಿಗಾಗಿ ಶಕ್ತಿ ಮೀರಿ ದುಡಿದರು. ಇಡೀ ದೇಶದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿ ಸಂಚು ನಡೆಯುತ್ತಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ತೊಕ್ಕೊಟ್ಟು ಅಂಬಾವನ ಧರ್ಮ ಶಿಕ್ಷಣ ಕೇಂದ್ರದ ಪ್ರಧಾನ ಸಂಚಾಲಕ ಅರುಣ್ ಉಳ್ಳಾಲ್ ಮಾತನಾಡಿ ತೊಕ್ಕೊಟ್ಟು ಭಾಗದಲ್ಲಿ ಶವ ಸಂಸ್ಕಾರಕ್ಕೆ ಬೇರೆಯವರ ವಾಹನಕ್ಕೆ ಪರಾವಲಂಬನೆಯಾಗಿದ್ದೆವು. ಸಮಾಜದ ಕೊರತೆಯನ್ನು ಅರಿತು ಲಾಂಚೂಲಾಲ್ ಆ್ಯಂಬ್ಯುಲೆನ್ಸ್ ದಾನ ನಡೆಸಿರುವುದು ಮಹತ್ತರವಾದ ಕಾರ್ಯ ಎಂದರು. ಪ್ರಾಣಾಸ್ತ್ರ ಟ್ರಸ್ಟ್ ಹಾಗೂ ಅಸ್ತ್ರ ಗ್ರೂಪ್ ಅಧ್ಯಕ್ಷ ಲಾಂಚೂಲಾಲ್ ಅಧ್ಯಕ್ಷತೆ ವಹಿಸಿದ್ದರು. ವಿ.ಹಿಂ.ಪ ಪ್ರಾಂತ ಸಹಸೇವಕ್ ಪ್ರಮುಖ್ ಗೋಪಾಲ ಕುತ್ತಾರ್, ಪ್ರಾಂತ ಬಜರಂಗದಳ ಸಹ ಸಂಚಾಲಕ ಭುಜಂಗ ಕುಲಾಲ್, ವಿಹಿಂಪ ಉಳ್ಳಾಲ ನಗರ ಪ್ರಖಂಡ ಅಧ್ಯಕ್ಷ ನಾರಾಯಣ ಕುಂಪಲ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಮನೋಜ್ ಕೋಡಿಕಲ್, ವಿ.ಹಿಂ.ಪ ಗ್ರಾಮಾಂತರ ಪ್ರಖಂಡ ಅಧ್ಯಕ್ಷ ಶಿವಪ್ರಸಾದ್ ಕೊಣಾಜೆ, ತೊಕ್ಕೊಟ್ಟು ವಾಸುಕಿ ಬಜರಂಗದಳ- ವಿ.ಹಿಂ.ಪ ಶಾಖೆ ಸಂಚಾಲಕ ನಿಖಿಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಲಾಂಚುಲಾಲ್ ಅವರನ್ನು ಸನ್ಮಾನಿಸಲಾಯಿತು. ವಿಹಿಂಪ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ನಿರೂಪಿಸಿದರು. ವಿನಯ್ ತೊಕ್ಕೊಟ್ಟು ವಂದಿಸಿದರು.

ವಿಹಿಂಪ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ನಿರೂಪಿಸಿದರು. ವಿನಯ್ ತೊಕ್ಕೊಟ್ಟು ವಂದಿಸಿದರು.